- Advertisement -Newspaper WordPress Theme
ಪ್ರಮುಖ ಸುದ್ದಿಗಳುರಾಷ್ಟ್ರೀಯಪಿಎಂ ಕಿಸಾನ್ ಅಡಿಯಲ್ಲಿ 8ನೇ ಕಂತು ಬಿಡುಗಡೆ ಮಾಡಿದ ಪ್ರಧಾನಮಂತ್ರಿ

ಪಿಎಂ ಕಿಸಾನ್ ಅಡಿಯಲ್ಲಿ 8ನೇ ಕಂತು ಬಿಡುಗಡೆ ಮಾಡಿದ ಪ್ರಧಾನಮಂತ್ರಿ

ನವದೆಹಲಿ : ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ 9,50,67,601 ಫಲಾನುಭವಿಗಳಿಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (ಪಿ.ಎಂ. ಕಿಸಾನ್) ಅಡಿಯಲ್ಲಿ 2,06,67,75,66,000ರೂ.ಗಳ ಪ್ರಯೋಜನದ 8ನೇ ಕಂತನ್ನು ಬಿಡುಗಡೆ ಮಾಡಿದರು.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ – ಕಿಸಾನ್) ಯೋಜನೆಯ ಫಲಾನುಭವಿಗಳೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂವಾದ ನಡೆಸುವ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ, ತಮ್ಮ ವಲಯದ ಯುವ ರೈತರಿಗೆ ಸಾವಯವ ಕೃಷಿ ಮತ್ತು ಹೊಸ ಕೃಷಿ ತಂತ್ರಜ್ಞಾನದ ಬಗ್ಗೆ ತರಬೇತಿ ನೀಡುತ್ತಿರುವ ಉತ್ತರ ಪ್ರದೇಶದ ಉನ್ನಾವೋದ ಅರವಿಂದರನ್ನು ಶ್ಲಾಘಿಸಿದರು. ದೊಡ್ಡ ಮಟ್ಟದಲ್ಲಿ ಸಾವಯವ ಕೃಷಿ ಮಾಡುತ್ತಿರುವ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಕಾರ್ ನಿಕೋಬಾರ್‌ ನ ಪ್ಯಾಟ್ರಿಕ್ ಅವರನ್ನೂ ಪ್ರಶಂಸಿಸಿದರು.

ಆಂಧ್ರ ಪ್ರದೇಶದ ಅನಂತಪುರದ ಎನ್ ವೆನ್ನುರಾಮಾ ಅವರು ತಮ್ಮ ಪ್ರದೇಶದ 170ಕ್ಕೂ ಹೆಚ್ಚು ಆದಿವಾಸಿ ರೈತರಿಗೆ ಕೈಗೊಂಡಿರುವ ಪ್ರಯತ್ನವನ್ನೂ ಪ್ರಧಾನಮಂತ್ರಿ ಶ್ಲಾಘಿಸಿದರು.

ದೊಡ್ಡ ಮೆಣಸಿನಕಾಯಿ, ಹಸಿರು ಮೆಣಸಿನಕಾಯಿ ಮತ್ತು ಸೌತೆಕಾಯಿಯನ್ನು ಸಾವಯವ ಪದ್ಧತಿಯಲ್ಲಿ ಬೆಳೆಯುತ್ತಿರುವ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಖರ‍್ಷಿದ್ ಅಹ್ಮದ್ ಅವರೊಂದಿಗೂ ಸಂವಾದ ನಡೆಸಿದರು.

ಈ ಸಂದರ್ಭದಲ್ಲಿ ಕೇಂದ್ರ ಕೃಷಿ ಸಚಿವರು ಸಹ ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!