- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಪರಿಶೀಲನೆ ನಡೆಸಿ ಕ್ರಮಕೈಗೊಳ್ಳಿ. ಅಗಸಬಾಳ ಗ್ರಾಮಸ್ಥರಿಂದ ತಹಶೀಲ್ದಾರಗೆ ಮನವಿ

ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಿ. ಅಗಸಬಾಳ ಗ್ರಾಮಸ್ಥರಿಂದ ತಹಶೀಲ್ದಾರಗೆ ಮನವಿ

ಮುದ್ದೇಬಿಹಾಳ : ತಾಲೂಕಿನ ಅಗಸಬಾಳ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರ ಮನೆಯವರಾದ ಕನಕಪ್ಪ ನಿಂಗಪ್ಪ ದೊಡಮನಿ ಅವರು ಅಂಗನವಾಡಿ ಮಕ್ಕಳಿಗೆ ನೀಡುವ ಆಹಾರದ ಧಾನ್ಯಗಳನ್ನು ಮುದ್ದೇಬಿಹಾಳ ಪಟ್ಟಣದಲ್ಲಿರುವ ತಮ್ಮ ಮನೆಗೆ ಅಮಕ್ರಮವಾಗಿ ಸಾಗಿಸುತ್ತಿರುವ ಸಂದರ್ಭದಲ್ಲಿ ಗ್ರಾಮದ ಜನರು ಅವರನ್ನು ಹಿಡಿದು ಬುದ್ಧಿ ವಾದ ಹೇಳಿ ಸಿಡಿಪಿಓ ಅವರಿಗೆ ದೂರ ನೀಡಲಾಗಿತ್ತು. ಆದರೇ ಸಂಬಂಧಪಟ್ಟ ಅಧಿಕಾರಿಗಳು ಅವರ ಮೇಲೆ ಯಾವೂದೇ ಕ್ರಮ ಕೈಗೊಂಡಿರುವುದಿಲ್ಲ ಕಾರಣ ಈ ಕೂಡಲೇ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಅಗಸಬಾಳ ಗ್ರಾಮಸ್ಥರು ಶನಿವಾರ ತಹಶೀಲ್ದಾರ ಬಿ.ಎಸ್ ಕಡಕಭಾವಿಯವರಿಗೆ ಮನವಿ ಸಲ್ಲಿಸಿದರು.

ಈಗಾಗಲೇ ಈ ಬಗ್ಗೆ ದೂರು ನೀಡಿದರೆ ಅಂಗನವಾಡಿ ಕಾರ್ಯಕರ್ತೆ ಸ್ಥಳಿಯ ಪೋಲಿಸ್ ಠಾಣೆಗೆ ತೆರಳಿ ಗ್ರಾಮಸ್ಥರ ವಿರುದ್ದ ದೂರು ನೀಡಿದ್ದಾರೆ. ತಹಶಿಲ್ದಾರರು ತಾವೂ ಅಗಸಬಾಳ ಗ್ರಾಮಕ್ಕೆ ಬೇಟಿ ನೀಡಿ ಪರೀಶಿಲನೆ ನಡೆಸಿ ಯಾರ ತಪ್ಪಾಗಿದೆ ಎಂಬುದನ್ನು ತಿಳಿದು ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬನೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಮಾಧ್ಯಮ ರತ್ನಕ್ಕೆ ಭಾವನಾ, ಮಾಧ್ಯಮ ಸಾಧಕರಾಗಿ ಸಂಗಮೇಶ ಚೂರಿ ಆಯ್ಕೆ

ಈ ವೇಳೆ ಮುಖಂಡರಾದ ಅರವಿಂದ ಕಾಶಿನಕುಂಟಿ, ಸೇಇದಂತೆ ಅಗಸಬಾಳ ಗ್ರಾಮದ ಹಲವು ಮುಖಂಡರುಗಳು ಹಾಜರಿದ್ದರು.

ವರದಿ : ಶ್ರೀಪಾದ ಜಂಬಗಿ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!