- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಪರಂಪರೆ ಆಧಾರದ ಮೇಲೆ ಕಾನೂನು ರಚನೆಯಾಗಿದೆ. ನ್ಯಾಯಾಧೀಶ ಪ್ರಕಾಶ

ಪರಂಪರೆ ಆಧಾರದ ಮೇಲೆ ಕಾನೂನು ರಚನೆಯಾಗಿದೆ. ನ್ಯಾಯಾಧೀಶ ಪ್ರಕಾಶ

ಬಸವನಬಾಗೇವಾಡಿ: ದೇಶದ ಪ್ರತಿಯೊಬ್ಬ ನಾಗರಿಕರಿಗೂ ಕಾನೂನಿನ ಅರಿವುಬೇಕು. ಅಂದಾಗ ಮಾತ್ರ ಸಮಾಜದಲ್ಲಾಗುವ ಅಪರಾಧಗಳನ್ನು ತಡೆಯಲು ಸಾಧ್ಯ ಎಂದು ಹಿರಿಯ ಸಿವ್ಹಿಲ್ ನ್ಯಾಯಾಧೀಶ ಪ್ರಕಾಶ ಬನಸೋಡೆ ಹೇಳಿದರು.

 ಪಟ್ಟಣದ ಮಿನಿವಿಧಾನಸೌಧ ತಹಶೀಲ್ದಾರ ಕಚೇರಿ ಸಭಾಭವನದಲ್ಲಿ ಶನಿವಾರ ತಾಲೂಕಾ ಆಡಳಿತ, ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಹಾಗೂ ತಾಪಂ ಕಾರ್ಯಾಲಯ ಸಹಯೋಗದಲ್ಲಿ ಸರ್ಕಾರಿ ಯೋಜನೆಗಳ ಅರಿವು, ಕಾನೂನು ಅರಿವು, ಸರ್ಕಾರಿ ಯೋಜನೆಗಳ ಅನುಕೂಲತೆಗಳ ಕುರಿತು ಹಮ್ಮಿಕೊಂಡ ಮೇಗಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾನೂನು ನಮ್ಮ ದೇಶದ ಪರಂಪರೆ, ಸಂಸ್ಕೃತಿ ಧರ್ಮದ ಆಧಾರದ ಮೇಲೆ ರಚನೆಯಾಗಿದೆ. ಯಾರು ಕಾನೂನಿನ ಬಗ್ಗೆ ಭಯಪಡುವ ಅಗತ್ಯವಿಲ್ಲ. ಆದರೆ ಕಾನೂನಿನ ಅರಿವು ಪ್ರತಿಯೊಬ್ಬರಿಗೂ ಅವಶ್ಯವಾಗಿದೆ ಎಂದು ಹೆಳಿದರು.

Advertisement

ದೇಶದಲ್ಲಿ ಜ್ಞಾನದ ಕೊರತೆಯಿಂದ ಅಪರಾಧ ಪ್ರಕರಣಗಳು ಸಂಭವಿಸುತ್ತಿವೆ. ಹೀಗಾಗಿ ಹೊಸ ಹೊಸ ಕಾನೂನುಗಳು ಜಾರಿಯಾಗುತ್ತಿವೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಶಿಕ್ಷಣವಂತರಾಗಬೇಕು. ಸರ್ಕಾರ 6ರಿಂದ 16ವರ್ಷದ ವರೆಗಿನ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದೆ. ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಂಡು ಶಿಕ್ಷಣವಂತರಾಗಬೇಕು ಎಂದರು.

 ಸಿವ್ಹಿಲ್ ನ್ಯಾಯಾಧೀಶ ಸಂದೀಪ ಅಪ್ಪಾಸಾಹೇಬ ನಾಯಕ ಮಾತನಾಡಿ ಪ್ರತಿಯೊಬ್ಬರೂ ಶಿಕ್ಷಣವಂತರಾಗಬೇಕು. ಕಾನೂನಿನ ಬಗ್ಗೆ ತಿಳಿದುಕೊಳ್ಳಬೇಕು. ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕಾನೂನು ಸೇವಾ ಸಮಿತಿಯಿಂದ ಸರ್ಕಾರಿ ಯೋಜನೆಗಳ ಕುರಿತು ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಪ್ರತಿಯೊಬ್ಬರೂ ಇಂತಹ ಶಿಬಿರಗಳಲ್ಲಿ ಭಾಗವಹಿಸುವ ಮೂಲಕ ಸರ್ಕಾರದ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದರು. ನ್ಯಾಯವಾದಿ ರವಿ ರಾಠೋಡ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಪಿಂಚಣಿ ಮಂಜೂರಾತಿಯಾದ ಫಲಾನುಭವಿಗಳಿಗೆ ಆದೇಶ ಪತ್ರ ವಿತರಿಸಲಾಯಿತು.

 ಗೇಡ್-2ತಹಶೀಲ್ದಾರ ಪಿ.ಜಿ.ಪವಾರ ಅಧ್ಯಕ್ಷತೆವಹಿಸಿದರು, ವಕೀಲರ ಸಂಘದ ಅಧ್ಯಕ್ಷ ಎನ್.ಎಸ್.ಪಾಟೀಲ, ಜಿ.ಆರ್.ಬೀಳಗಿ, ವಿಜಯ ಕಲ್ಲೂರ, ಸಿಡಿಪಿಓ ಸಂತೋಷ ಮ್ಯಾಗೇರಿ ಇದ್ದರು. ವೀರೇಶ ಗುಡಲಮನಿ ಸ್ವಾಗತಿಸಿ, ನಿರೂಪಿದರು.

ವರದಿ: ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!