- Advertisement -Newspaper WordPress Theme
ಪ್ರಮುಖ ಸುದ್ದಿಗಳುಪ್ರಾದೇಶಿಕಪತ್ರಕರ್ತರಿಗೆ ಪಂಚ ಸೂತ್ರಗಳ ಮಹತ್ವ ತಿಳಿಸಿದ ಎಸ್.ಪಿ ಜಗಲಾಸರ್

ಪತ್ರಕರ್ತರಿಗೆ ಪಂಚ ಸೂತ್ರಗಳ ಮಹತ್ವ ತಿಳಿಸಿದ ಎಸ್.ಪಿ ಜಗಲಾಸರ್

ಬಾಗಲಕೋಟೆ : ನಿಖರತೆ, ಸ್ವಾತಂತ್ರ್ಯತೆ, ಸತ್ಯಾಂಶ, ನಿಷ್ಪಕ್ಷಪಾತತೆ ಮತ್ತು ತಪ್ಪು ಮಾಡಿದಾಗ ಒಪ್ಪಿಕೊಳ್ಳುವಂತ ಐದು ಗುಣಗಳನ್ನು ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳುವುದು ಪ್ರತಿ ಪತ್ರಕರ್ತನ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಪತ್ರಕರ್ತರಿಗೆ ಪಂಚ ಸೂತ್ರಗಳ ಮಹತ್ವವನ್ನು ಅರ್ಥೈಸಿದರು.

ಭಗತ್.. ರಾಷ್ಟ್ರಭಕ್ತಿ.. ಯುವಕರಿಗೆ ಅಶೋಕ ಹಂಚಲಿಯವರ ಸ್ಪೂರ್ತಿದಾಯಕ ಮಾತುಗಳು

ನವನಗರದ ನೂತನ ಪತ್ರಿಕಾ ಭವನದಲ್ಲಿಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಹಾಗೂ ಅತ್ಯುತ್ತಮ ಗ್ರಾಮೀಣ ಮತ್ತು ಹಿರಿಯ ಪತ್ರಕರ್ತರಿಗೆ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೋವಿಡ್-19 ಮತ್ತು ಪ್ರವಾಹದಂತಹ ಸಂದರ್ಭಗಳಲ್ಲಿ ಎದೆಗುಂದದೆ ಕೆಲಸ ಮಾಡಿದ್ದು ಶ್ಲಾಘನೀಯ. ಪರ್ತಕರ್ತರು ಸಮಾಜಪರ ಕೈಗನ್ನಡಿಯಾಗಿ ಪತ್ರಿಕೋದ್ಯಮವನ್ನು ಇನ್ನಷ್ಟು ಎತ್ತರ ಮಟ್ಟಕ್ಕೆ ಒಯ್ಯುವ ಕೆಲಸವಾಗಬೇಕೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ದಿ.ಶರಣಬಸವರಾಜ ಜಿಗಜಿನ್ನಿ ಸ್ಮರಣಾರ್ಥವಾಗಿ ನೀಡುತ್ತಿರುವ ಹಿರಿಯ ಪತ್ರಕರ್ತರ ಪ್ರಶಸ್ತಿಯನ್ನು ಜಿಲ್ಲೆಯ ವಿದ್ಯಮಾನ ದಿನಪತ್ರಿಕೆಯ ಸಂಪಾದಕರಾದ ಕೆ.ಎಮ್ ಕಳ್ಳಿಗುಡ್ಡ ಅವರಿಗೆೆ ಹಾಗೂ ದಿ. ಶ್ರೀಶೈಲ ಅಂಗಡಿ ಸ್ಮರಣಾರ್ಥ ನೀಡುವ ಅತ್ಯುತ್ತಮ ಗ್ರಾಮೀಣ ಪ್ರತ್ರಕರ್ತರ ಪ್ರಶಸ್ತಿಯನ್ನು ಗುಳೇದಗುಡ್ಡದ ವರದಿಗಾರರಾದ ಬಸವರಾಜ ಯಂಡಿಗೇರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿಜಯಪುರದ ಸಂಗೀತ ಮಹಲ್. ಇದು ಜಗತ್ತಿಗೆ ಆದಿಲ್ ಶಾ ನೀಡಿದ ಕೊಡುಗೆ

ಕಾರ್ಯಕ್ರಮದಲ್ಲಿ ಕಾ.ನಿ.ಪ ರಾಜ್ಯ ಕಾರ್ಯಕಾರಣಿ ಸದಸ್ಯ ಈಶ್ವರ ಶೆಟ್ಟರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಜಾಫರ ಶಾಲಗಾರ, ಹಿರಿಯ ಸಂಪಾದಕರಾದ ರಾಮ ಮನಗೂಳಿ, ಮಹೇಶ ಅಂಗಡಿ, ಚಂದ್ರಶೇಖರ ಜಿಗಜಿನ್ನಿ, ಸಾಹಿತಿ ಸತ್ಯಾನಂದ ಪಾತ್ರೋಟ ಸೇರಿದಂತೆ ಜಿಲ್ಲಾ ಮತ್ತು ತಾಲೂಕಾ ಮಟ್ಟದ ಪತ್ರಕರ್ತರು ಉಪಸ್ಥಿತರಿದ್ದರು. ಪತ್ರಕರ್ತ ಶ್ರೀಶೈಲ ಬಿರಾದಾರ ನಿರೂಪಿಸಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!