- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಪಂಚಮಸಾಲಿ ಸ್ವಾಮೀಜಿಗಳಲ್ಲಿ ಭಿನ್ನಭಿಪ್ರಾಯ...? ಮನಗೂಳಿಯಲ್ಲಿ ಮಹತ್ವದ ಸಭೆ

ಪಂಚಮಸಾಲಿ ಸ್ವಾಮೀಜಿಗಳಲ್ಲಿ ಭಿನ್ನಭಿಪ್ರಾಯ…? ಮನಗೂಳಿಯಲ್ಲಿ ಮಹತ್ವದ ಸಭೆ

ಬಸವನಬಾಗೇವಾಡಿ : ರಾಜ್ಯದಲ್ಲಿ ಈಗಾಗಲೇ ಎರಡು ಪಂಚಮಸಾಲಿ ಪೀಠಗಳು ಇದ್ದರೂ ಸಹ ಇದೀಗ ಈ ಎರಡೂ ಪೀಠಗಳಿಗೆ ಪರ್ಯಾಯವಾಗಿ ಪಂಚಮಸಾಲಿ ಸ್ವಾಮೀಜಿಗಳ ಒಕ್ಕೂಟ ಅಸ್ತಿತ್ವಕ್ಕೆ ಬಂದಿದೆ. ಇದನ್ನು ಪರ್ಯಾಯಪೀಠ, ಶಕ್ತಿಪೀಠ, ಶರಣ ಪೀಠ, ಬಸವ ಪೀಠ ಎಂದೆಲ್ಲ ಉಲ್ಲೇಖಿಸಲಾಗುತ್ತಿದೆ. ಆದರೆ ಸಮಾನ ಮನಸ್ಕರು ಒಂದುಗೂಡಿರುವ ಈ ಒಕ್ಕೂಟದಲ್ಲಿ ಸಮಾಜದ ಬಡವರಿಗಾಗಿ ಶ್ರಮಿಸುವ ಸದುದ್ದೇಶವಿದ್ದು, 80ಕ್ಕೂ ಅಧಿಕ ಸ್ವಾಮೀಜಿಗಳು ಕೈ ಜೋಡಿಸಿದ್ದಾರೆ. ಇದರಿಂದಾಗಿ ಒಂದೆಡೆ ಸಮಾಜಕ್ಕೆ ಕಿಂಚಿತ್ತು ಕೊಡುಗೆ ಸಿಕ್ಕರೂ ಇದು ಮಾತ್ರ ಎರಡೂ ಪೀಠಗಳಿಗೆ ಸೆಡ್ಡು ಹೊಡೆಯಲೆಂದೇ ನಿರ್ಮಿತವಾಗಿದೆ ಎಂಬ ಮಾತುಗಳು ಪ್ರಮುಖವಾಗಿ ಕೇಳಿ ಬರುತ್ತಿವೆ.

ಪಂಚಮಸಾಲಿ ಪೀಠಗಳ ಮದ್ಯೆ ಮುಸುಕಿದ ಗುದ್ದಾಟಗಳು ನಡೆಯುತ್ತಲೇ ಇರುವಾಗ, ಇದೀಗ ಈ ಎರಡೂ ಪೀಠಗಳಿಗೆ ಠಕ್ಕರ್ ಕೊಡಲು ಪಂಚಮಸಾಲಿ ಸ್ವಾಮೀಜಿಗಳ ಒಕ್ಕೂಟ ಸಿದ್ಧವಾಗಿದೆ. ಕಳೆದ ತಿಂಗಳು ಅಥಣಿ ತಾಲೂಕಿನ ಕಕ್ಕಮರಿಯಲ್ಲಿ ಮೊದಲ ಸಭೆ ಹಾಗೂ ಜಮಖಂಡಿಯಲ್ಲಿ 2ನೇ ಸಭೆಯನ್ನು ನಡೆಸಲಾ ಗಿತ್ತು. ಇದೀಗ ಮತ್ತೆ ಒಕ್ಕೂಟದ ಕಾರ್ಯ ಚಟುವ ಟಿಕೆಗಳು ಚುರುಕಾಗಿದ್ದು, ಇದೀಗ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿಯಲ್ಲಿ ಮೂರನೇ ಸಭೆ ಜರುಗಿದೆ.

ಇಲ್ಲಿನ ಹಿರೇಮಠದಲ್ಲಿ ನಡೆದ ಒಕ್ಕೂಟದ ಸಭೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 35ಕ್ಕೂ ಅಧಿಕ ಸ್ವಾಮೀಜಿಗಳು ಆಗಮಿಸಿ ಭಾಗವಹಿಸಿದ್ದರು. ಪಂಚಮಸಾಲಿ ಸಮಾಜದ ಏಳಿಗೆಗಾಗಿ ಶ್ರಮಿಸಲು ಮುಂದಾಗಿರುವ ಈ ಒಕ್ಕೂಟ ಪಂಚಮಸಾಲಿ ಸಮಾಜದ ಮತ್ತೊಂದು ಶಕ್ತಿಪೀಠ ಎಂದೇ ಬಿಂಬಿತವಾಗಿದೆ. ಹೀಗಾಗಿ ಈಗಾಗಲೇ ಇರುವ ಎರಡೂ ಪೀಠಗಳಿಗೆ ಸೆಡ್ಡು ಹೊಡೆಯಲು ನಿರ್ಮಾಣವಾಗಿರುವ ಈ ಒಕ್ಕೂಟದಿಂದ ಪಂಚಮಸಾಲಿ ಒಗ್ಗಟ್ಟಿನಲ್ಲಿ ವಿಭಜನೆ ಆಗುವುದು ಖಂಡಿತ ಎಂಬಂತಾಗಿದೆ.

ಮೊದಲಿಗೆ ಹರಿಹರದ ಪೀಠವಿದ್ದು ಒಬ್ಬರೇ ಜಗದ್ಗುರುಗಳು ಇದ್ದರು, ನಂತರ ಕೂಡಲಸಂಗಮದಲ್ಲಿ ಮತ್ತೊಂದು ಪೀಠ ರಚಿತವಾಗಿ ಇಬ್ಬರು ಜಗದ್ಗುರುಗಳು ಇದ್ದಾರೆ. ಈ ಎರಡೂ ಪೀಠಗಳ ಮದ್ಯೆ ಸಮನ್ವಯತೆ ಸಾಧಿಸಿ ದೊಡ್ಡ ಪಂಚಮಸಾಲಿ ಜನಾಂಗವನ್ನೂ ಒಂದುಗೂಡಿಸಿಕೊಂಡು ಹೋಗಬೇಕು ಎಂದು ಹಲವರು ಶತಪ್ರಯತ್ನ ನಡೆಸಿದರೂ ಆಗಿಲ್ಲ. ಇದೀಗ ಈ ಪೀಠಗಳಿಗೆ ಸವಾಲಾಗಿ ಮತ್ತೊಂದು ಒಕ್ಕೂಟ ಜನ್ಮ ತಾಳಿದ್ದು, ಸಮಾಜವನ್ನು ಮತ್ತಷ್ಟು ಕುಗ್ಗಿಸುವಂತೆ ಮಾಡಲಿದೆಯಾ ಎಂಬ ಆತಂಕ ಕಾಡುತ್ತಿದೆ.

ಇದರ ಜೊತೆಗೆ ಪಂಚಮಸಾಲಿ ಎರಡೂ ಪೀಠಗಳ ಜಗದ್ಗುರುಗಳ ಮೇಲೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅಸಮಾಧಾನವಿದ್ದ ಸ್ವಾಮೀಜಿಗಳೆಲ್ಲ ಒಂದುಗೂಡಿ ಹೀಗೆ ಒಕ್ಕೂಟ ರಚಿಸಿ ಪೀಠಗಳಿಗೆ ಪಾಠ ಕಲಿಸಲು ಹೊರಟಿದ್ದಾರೆ ಎನ್ನಲಾಗುತ್ತಿದೆ. ಮನಗೂಳಿಯಲ್ಲಿ ನಡೆದ 3ನೇ ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚಿಸಿ ಮುಂದಿನ ರೂಪುರೇಷಗಳ ಬಗ್ಗೆ ತೀರ್ಮಾನಿಸಲಾಗಿದೆ.

ಪೀಠದಲ್ಲಿರುವ ಜಗದ್ಗುರುಗಳೂ ಎಲ್ಲರನ್ನೂ ಸಮಾನರಾಗಿ ಕಾಣದೆ ಬೇಧಭಾವ ಮಾಡುತ್ತಿರುವುದರಿಂದ ಅವರಿಂದ ಅಸಮಾಧಾನಗೊಂಡ ಸ್ವಾಮೀಜಿಗಳ ಒಕ್ಕೂಟದ ಕಾರ್ಯಚಟುವಟಿಕೆಗಳು ಚುರುಕುಗೊಂಡಿದ್ದು, ಮುಂದಿನ ದಿನಗಳಲ್ಲಿ ಏನೇನು ತಿರುವು ಕೊಳ್ಳುತ್ತೇವೆಯೋ.? ಈ ರೀತಿಯ ಪರ್ಯಾಯ ಒಕ್ಕೂಟದಿಂದ ಸಮಾಜದ ಜನರ ಮೇಲೆ ಸ್ವಾಮೀಜಿಗಳ ಈ ನಡೆಗೆ ಏನು ಪರಿಣಾಮ ಬೀರುತ್ತದೆಯೋ ಎಂಬುದಕ್ಕೆ ಮುಂಬರುವ ದಿನಗಳಲ್ಲಿ ಉತ್ತರ ದೊರೆಯಲಿದೆ.

“ಸಮಾಜದಲ್ಲಿನ ಬಡವರಿಗೆ, ಹಿಂದುಳಿದವರಿಗೆ ಸಹಾಯಹಸ್ತ ಚಾಚಲು ಒಕ್ಕೂಟ ಅಸ್ತಿತ್ವಕ್ಕೆ ಬಂದಿದೆ. ಹೊರತಾಗಿ ಇದರಲ್ಲಿ ಯಾವುದೇ ರಾಜಕೀಯವಾಗಲಿ ಅಥವಾ ಕೂಡಲಸಂಗಮ ಮತ್ತು ಹರಿಹರ ಪೀಠಗಳಿಗೆ ಸೆಡ್ಡು ಹೊಡೆಯುವುದಾಗಲಿ ಇಲ್ಲ”.

ಸಂಗನಬಸವ ಸ್ವಾಮೀಜಿ. ಹಿರೇಮಠ, ಮನಗೂಳಿ.

“ಜಗತ್ತಿನಲ್ಲಿ ಪಂಚಮಸಾಲಿ ಸಮಾಜ ಒಂದೇ. ಆದರೆ ಅವರು ನಮ್ಮಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ನಾವು ಯಾವುದೇ ಮುಖ್ಯಮಂತ್ರಿಗಳನ್ನು ಬದಲಿಸುವ ಮತ್ತು ಸೂಕ್ತ ವ್ಯಕ್ತಿಯನ್ನು ನಿರ್ಧರಿಸುವ ವಿಚಾರ ಸಧ್ಯಕ್ಕಿಲ್ಲ, ನಮ್ಮ ಒಕ್ಕೂಟದಿಂದ ಮೊದಲು ಸಮಾಜ ಗಟ್ಟಿಯಾಗಿ ಕಟ್ಟಬೇಕಿದೆ, ಆ ಕೆಲಸ ನಾವು ಮಾಡುತ್ತಿದ್ದೇವೆ, ನಂತರ ನಾವು ಸಮಾಜದಲ್ಲಿ ನಮ್ಮ ಒಕ್ಕೂಟದಿಂದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುತ್ತೇವೆ”.

ಬಸವಲಿಂಗ ಸ್ವಾಮೀಜಿ. ಶಿವಯೋಗಿ ಮಠ, ಸೊಲ್ಲಾಪುರ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!