- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯನೇರ ನುಡಿ ಯತ್ನಾಳರಿಗೆ ಗೃಹಖಾತೆ ನೀಡಿ. ಅಂಬೇಡ್ಕರ ಯುವ ಬ್ರಿಗೇಡ್ ರಾಜ್ಯಾಧ್ಯಕ್ಷ ಆಗ್ರಹ

ನೇರ ನುಡಿ ಯತ್ನಾಳರಿಗೆ ಗೃಹಖಾತೆ ನೀಡಿ. ಅಂಬೇಡ್ಕರ ಯುವ ಬ್ರಿಗೇಡ್ ರಾಜ್ಯಾಧ್ಯಕ್ಷ ಆಗ್ರಹ

ವಿಜಯಪುರ : ನೇರ ನುಡಿ, ನಿಷ್ಠುರತೆಯ ರಾಜಕಾರಣಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಗೃಹಖಾತೆ ಸಚಿವಸ್ಥಾನ ನೀಡಬೇಕೆಂದು ಡಾ.ಬಾಬಾಸಾಹೇಬ ಅಂಬೇಡ್ಕರ ಯುವ ಬ್ರಿಗೇಡ್ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ವೀರೇಶ ವಾಲಿಕಾರ ಸಿಎಂ ಹಾಗೂ ಬಿಜೆಪಿ ವರಿಷ್ಠರಿಗೆ ಆಗ್ರಹಿಸಿದ್ದಾರೆ.

ನೂತನವಾಗಿ ರಚಿತವಾಗುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ವಿಜಯಪುರ ಜಿಲ್ಲೆಗೆ ಈ ಬಾರಿ ನಗರ ಶಾಸಕರನ್ನು ಸಚಿವರನ್ನಾಗಿಸುವ ಮೂಲಕ ಜಿಲ್ಲೆಗೆ ಆದ್ಯತೆ ನೀಡಬೇಕು. ಅಲ್ಲದೇ ಯತ್ನಾಳ ಅವರು ಹುಟ್ಟು ಹೋರಾಟಗಾರರಿದ್ದು, ಯಾವತ್ತೂ ಜನಪರವಾದ ಧ್ವನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ… ಯತ್ನಾಳ ಹಿಂದುತ್ವವಾದಿ ಆದರೆ…! ಕೆ.ಎಸ್. ಈಶ್ವರಪ್ಪ ಹೇಳಿದ್ದು ಹೀಗೆ

ಪ್ರಸಕ್ತ ದಿನಗಳಲ್ಲಿ ರಾಜ್ಯಕ್ಕೆ ಈಗ ಯತ್ನಾಳರಂತಹ ರಾಜಕಾರಣಿ ಗೃಹಖಾತೆ ನಿರ್ವಹಿಸುವುದು ಸೂಕ್ತವಾಗಿದೆ. ಇದರಿಂದ ರಾಜ್ಯದಲ್ಲಿ ಬಿಜೆಪಿ ಪಕ್ಷದಲ್ಲಿ ಜನತೆಗೆ ವಿಶ್ವಾಸ ಮೂಡುತ್ತದೆ. ಅವರ ಬಗ್ಗೆ ಕೆಲ ನಾಯಕರುಗಳು ಆರೋಪ ಮಾಡುತ್ತಿರುವುದು ರಾಜಕೀಯದ ದುರುದ್ಧೇಶದಿಂದವೇ ಹೊರತು ಬೇರೆ ಅಲ್ಲ. ಈ ಎಲ್ಲ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಸಿಎಂ ಹಾಗೂ ಬಿಜೆಪಿ ವರಿಷ್ಠರು ಬಸನಗೌಡರಿಗೆ ಸಚಿವ ಸ್ಥಾನ ನೀಡಬೇಕೆಂದು ಪ್ರಕಟನೆಯ ಮೂಲಕ ವೀರೇಶ ವಾಲಿಕಾರ ಆಗ್ರಹಿಸಿ, ಮನವಿ ಮಾಡಿಕೊಂಡಿದ್ದಾರೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!