- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಸಿದ್ಧಮ್ಮಗೌಡತಿಯ ಈ ಕಾರ್ಯ ನಿಜಕ್ಕೂ ಮಾದರಿ

ಸಿದ್ಧಮ್ಮಗೌಡತಿಯ ಈ ಕಾರ್ಯ ನಿಜಕ್ಕೂ ಮಾದರಿ

ಬಸವನಬಾಗೇವಾಡಿ: ಎಲ್ಲ ದಾನಕ್ಕಿಂತ ಶ್ರೇಷ್ಠ ದಾನ ನೇತ್ರ ದಾನ ಎಂಬ ಮಾತಿನಂತೆ ನೇತ್ರ ದಾನ ಮಾಡುವ ಮೂಲಕ ಇಳಿವಯಸ್ಸಿನ ಅಜ್ಜಿ ಸಿದ್ಧಮ್ಮಗೌಡತಿ, ಇಬ್ಬರು ಅಂಧರ ಬಾಳಿಗೆ ಬೆಳಕಾಗಿ ಮಾದರಿಯಾಗಿದ್ದಾಳೆ.

ಅಖಂಡ ತಾಲೂಕಿನ ಚಬನೂರ ಗ್ರಾಮದ ನಿವಾಸಿ, ವಿಜಯಪುರ ಅನುಗ್ರಹ ಆಸ್ಪತ್ರೆಯ ನೇತ್ರ ವೈದ್ಯ ಡಾ.ಪ್ರಭುಗೌಡ ಪಾಟೀಲ ಅವರ ಅಜ್ಜಿ ಸಿದ್ಧಮ್ಮಗೌಡತಿ ಬಾಲಪ್ಪಗೌಡ ಪಾಟೀಲ (97) ಅವರು ಬುಧವಾರ ಬೆಳಗ್ಗೆ 8 ಗಂಟೆಗೆ ವಯೋಸಹಜ ಕಾಯಿಲೆಯಿಂದ ನಿಧನರಾದರು. ಮೃತರು ಮೂವರು ಪುತ್ರರು, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸಿದ್ಧಮ್ಮಗೌಡತಿ ಅವರ ಇಚ್ಚೆಯಂತೆ ಮರಣಾನಂತರ ತಮ್ಮ ಕಣ್ಣುಗಳನ್ನು ದಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.

ತಮ್ಮ ಮೊಮ್ಮಗ ಡಾ. ಪ್ರಭುಗೌಡ ಅವರ ಅನುಗ್ರಹ ನೇತ್ರ ಭಂಡಾರಕ್ಕೆ ದಾನ ಮಾಡಿದ್ದು ಅವರ ಇಚ್ಚೆಯಂತೆ ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯ ವೈದ್ಯ ದಂಪತಿಗಳಾದ ಡಾ.ಪ್ರಭುಗೌಡ ಹಾಗೂ ಡಾ.ಮಾಲಿನಿ ಅವರು ತಕ್ಷಣ ಚಬನೂರ ಗ್ರಾಮಕ್ಕೆ ಆಗಮಿಸಿ ನೇತ್ರದಾನದ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ನಂತರ ಮೃತರ ಆ ಎರೆಡು ಕಣ್ಣುಗಳನ್ನು ವಿಜಯಪುರದ ಅನುಗ್ರಹ ನೇತ್ರ ಭಂಡಾರದಲ್ಲಿ ಶೇಖರಿಸಿ ಇರಿಸಲಾಗಿದ್ದು ಮುಂದಿನ ಒಂದೆರೆಡು ದಿನದಲ್ಲಿ ಅಂಧ ಇಬ್ಬರು ವ್ಯಕ್ತಿಗಳಿಗೆ ಅಳವಡಿಸಲಾಗುವುದು ಎಂದು ಡಾ. ಪ್ರಭುಗೌಡ ಪಾಟೀಲ (ಲಿಂಗದಳ್ಳಿ) ತಿಳಿಸಿದ್ದಾರೆ.

ವರದಿ : ನಾಗೇಶ ನಾಗೂರ

ADVERTISEMENT

LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!