- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯನೇಕಾರರ ಸಂಕಷ್ಟಕ್ಕೆ ಸಹಕಾರಿಯಾದ ಬನಶಂಕರಿ ಪತ್ತಿನ ಸಹಕಾರಿ ಸಂಘ

ನೇಕಾರರ ಸಂಕಷ್ಟಕ್ಕೆ ಸಹಕಾರಿಯಾದ ಬನಶಂಕರಿ ಪತ್ತಿನ ಸಹಕಾರಿ ಸಂಘ

ನಿಡಗುಂದಿ : ಕೋವಿಡ್ ಮಹಾಮಾರಿಯಿಂದಾಗಿ ನೇಕಾರರ ಬದುಕಿಗೆ ಸಹಾಯವಾಗಲಿ ಎಂಬ ಮಹಾದಾಸೆಯಿಂದ ಪಟ್ಟಣದ ಬನಶಂಕರಿ ಪತ್ತಿನ ಸಹಕಾರಿ ಸಂಘ ನಿಯಮಿತ ವತಿಯಿಂದ ಶುಕ್ರವಾರ 200 ಜನ ಕೈ ಮಗ್ಗ ನೇಕಾರರಿಗೆ ದಿನಸಿ ಕಿಟ್ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷೆ ಶಾರದಾ ಪಂಕಿ ಮಾತನಾಡಿ, ಲಾಕ್ ಡೌನ್ ನಿಂದಾಗಿ ನೇಕಾರರ ಬದುಕು ಸಂಕಷ್ಟಕ್ಕೆ ಸಿಲುಕಿದ್ದು, ಇಂತಹ ಸಮಯದಲ್ಲಿ ನಮ್ಮ ಕೈಲಾದಷ್ಟು ಸಹಾಯ ಮಾಡುವ ಮೂಲಕ ಮಾನವೀಯತೆ ತೋರುವ ಕಾರ್ಯ ನಮ್ಮ ಸಹಕಾರಿ ಸಂಘದಿಂದ ನೆರವೇರುತ್ತಿದೆ ಎಂದರು.

ತಾಲೂಕಿನ ತಹಶೀಲ್ದಾರ, ಪಟ್ಟಣ ಪಂಚಾಯತ ಸದಸ್ಯ ಎಸ್. ಕೆ. ಗೌಡರ, ಜವಳಿ ಇಲಾಖೆ ಸಹಾಯಕ ನಿರ್ದೇಶಕ ಎ.ಡಿ ವಾಗಮೋರೆ. ಸಹಕಾರ ಇಲಾಖೆ ಸಹಕಾರ ಅಭಿವೃದ್ಧಿ ಅಧಿಕಾರಿ ಹಂಗರಗಿ. ನಿರೀಕ್ಷಕರಾದ ಅವಟಿ, ಸಂಘದ ಕಾರ್ಯದರ್ಶಿ ಈರಣ್ಣ ಕುಪ್ಪಸ್ತ ಸೇರಿದಂತೆ ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿ ಬಾಗಿಯಾಗಿದ್ದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!