- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯನೇಕಾರರಗೆ ವಿಶೇಷ ಪ್ಯಾಕೇಜ್ ಘೋಷಣೆಗೆ ವಿವೇಕಾನಂದ ಹುಲ್ಯಾಳ ಒತ್ತಾಯ

ನೇಕಾರರಗೆ ವಿಶೇಷ ಪ್ಯಾಕೇಜ್ ಘೋಷಣೆಗೆ ವಿವೇಕಾನಂದ ಹುಲ್ಯಾಳ ಒತ್ತಾಯ

ಬಸವನಬಾಗೇವಾಡಿ : ರಾಜ್ಯದ ಜನರು ಬೀದಿಗೆ ಬರುವ ಮುಂಚೆ ರಾಜ್ಯ ಸರಕಾರ ಎಚ್ಚೆತ್ತು ರಾಜ್ಯದ ನೇಕಾರರಿಗೆ ಪ್ರತಿಯೊಬ್ಬ ನೇಕಾರರ ಕುಟುಂಬಕ್ಕೆ 3 ತಿಂಗಳವರೆಗೆ 10,000ರೂ,ಗಳನ್ನು ನೀಡಬೇಕು, ಪ್ರತಿಯೊಬ್ಬ ನೇಕಾರರ ಕುಟುಂಬಕ್ಕೆ ಆಹಾರದ ಕಿಟ್ ನೀಡಿ, ರಾಜ್ಯದ ಸಹಕಾರ ಸಂಘ ವಾಣಿಜ್ಯ ಬ್ಯಾಂಕಿನಲ್ಲಿ ಪಡೆದ ನೇಕಾರರ ಸಾಲವನ್ನು ಮನ್ನಾ ಮಾಡಬೇಕು ಎಂದು ಕೊಲ್ಹಾರದ ಶ್ರೀ ಬನಶಂಕರಿ ನೇಕಾರರ ಸಹಕಾರಿ ಸಂಘದ ಅಧ್ಯಕ್ಷ ವಿವೇಕಾನಂದ ರು. ಹುಲ್ಯಾಳ ಸರಕಾರಕ್ಕೆ ಆಗ್ರಹಿಸಿದ್ದಾರೆ.

ಸರಕಾರ ಘೋಷಣೆ ಮಾಡಿರುವ ವಿಶೇಷ ಪ್ಯಾಕೇಜ್ ಕುರಿತಾಗಿ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ 60 ಲಕ್ಷ ನೇಕಾರ ಸಮುದಾಯದ ಜನರ ನೇಕಾರಿಕೆ ಉದ್ಯೋಗ ಕೈಮಗ್ಗ ಪವರ ಲೂಮ ಸೀರೆ, ಗುಳೇದಗುಡ್ಡ ಕಣ, ನೇಕಾರ ಸಹಕಾರ ಸಂಘದಲ್ಲಿ ನೇಯುವ ನೇಕಾರರ ಉದ್ಯೋಗ ಕಚ್ಚಾ ವಸ್ತುಗಳು ದೊರೆಯದೆ ಹಾಗೂ ಮಾರುಕಟ್ಟೆ ಇಲ್ಲದೆ ನೇಕಾರರ ಜೀವನ ಕಷ್ಟಕರವಾಗಿದೆ.  ರಾಜ್ಯದ ನೇಕಾರರ ಜೀವನ ನಡೆಸಲು ರಾಜ್ಯ ಸರ್ಕಾರ ಹಿಂದಿನ ವರ್ಷ ಕೊರೋನಾ ಪ್ಯಾಕೇಜ್ ಮೂಲಕ ನೇಕಾರ ಸಮ್ಮಾನ ಯೋಜನೆ ಅಡಿಯಲ್ಲಿ 2000 ರೂಗಳನ್ನು ಘೋಷಣೆ ಮಾಡಿದರೂ ಕೂಡಾ ನೇಕಾರರ ಕುಟುಂಬಕ್ಕೆ ಹಣ ಬರದೆ ಸರ್ಕಾರಕ್ಕೆ ಹಿಡಿ ಶಾಪ ಹಾಕಿದ್ದಾರೆ. ಇಂದು 1250 ಕೋಟಿ ಪ್ಯಾಕೇಜ್ ಘೋಷಣೆಯಲ್ಲಿ ನೇಕಾರರನ್ನು ಬಿಟ್ಟಿರುವದು ಇಡೀ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟ ಖಂಡಿಸುತ್ತದೆ ಎಂದಿದ್ದಾರೆ.

ಅಲ್ಲದೇ, ರಾಜ್ಯದಲ್ಲಿ ಕೋವಿಡದಿಂದ ನಿಧನ ಹೊಂದಿದ ಕುಟುಂಬಕ್ಕೆ 25ಲಕ್ಷ ಪರಿಹಾರ ನೀಡಬೇಕು. ಆ ಕುಟುಂಬದ ಮಕ್ಕಳಿಗೆ ಉಚಿತ ಉನ್ನತ ವಿದ್ಯಾಭ್ಯಾಸ ನೀಡಬೇಕು. ರಾಜ್ಯದಲ್ಲಿ ಎಲ್ಲ ಜಿಲ್ಲೆಯಲ್ಲಿ ತಯಾರಾಗುವ ಸೀರೆ ಬಟ್ಟೆಗಳಿಗೆ ಸರಿಯಾದ ಮಾರುಕಟ್ಟೆ ನೀಡಿ ಸರಕಾರ ಆ ಬಟ್ಟೆಗಳನ್ನು ಖರೀದಿ ಮಾಡಬೇಕು. ವಿಶೇಷವಾಗಿ ಕೈಮಗ್ಗ ಹಾಗೂ ವಿದ್ಯುತ್ ಮಗ್ಗದ ನೇಕಾರರಿಗೆ ಶೀಘ್ರದಲ್ಲಿ ಆಹಾರ ಕಿಟ್ ನ್ನು ನೀಡಬೇಕೆಂದು ವಿವೇಕಾನಂದ ಹುಲ್ಯಾಳ ಪ್ರಕಟಣೆಯ ಮೂಲಕ ಸರಕಾರಕ್ಕೆ ಒತ್ತಾಯಿಸಿದ್ದಾರೆ.

ವರದಿ : ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!