- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯನಿಂಬೆ ನಾಡಿನಲ್ಲಿ ತಲೆ ಎತ್ತಲಿರುವ ಶಾಸಕ ಯಶವಂತರಾಯಗೌಡರ ಕನಸಿನ ಮೆಗಾ ಮಾರ್ಕೆಟ್

ನಿಂಬೆ ನಾಡಿನಲ್ಲಿ ತಲೆ ಎತ್ತಲಿರುವ ಶಾಸಕ ಯಶವಂತರಾಯಗೌಡರ ಕನಸಿನ ಮೆಗಾ ಮಾರ್ಕೆಟ್

ಇಂಡಿ : ಬರದನಾಡು ಎಂದೇ ಬಿಂಬಿತವಾಗಿದ್ದ ನಿಂಬೆನಾಡಿನಲ್ಲಿ ಶಾಸಕರ ಇಚ್ಚಾಸಕ್ತಿಯಿಂದಾಗಿ ಹಲವಾರು ಮಹತ್ತರ ಅಭಿವೃದ್ಧಿ ಕಾರ್ಯಗಳನ್ನು ಸಾಕಾರಗೊಳಿಸುತ್ತ, ಮತಕ್ಷೇತ್ರದ ಜನತೆಯ ಬೇಡಿಕೆಗಳಿಗೆ ಸ್ಪಂದಿಸುತ್ತಿರುವ ಶಾಸಕ ಯಶವಂತರಾಯಗೌಡರು ಇದೀಗ ಇಲ್ಲಿಯ ಜನತೆಯ ಬಹುದಿನದ ಬೇಡಿಕೆಯಾಗಿದ್ದ ಮೆಗಾ ಮಾರ್ಕೆಟ್ ಗೆ ಶಂಕು ಸ್ಥಾಪನೆಯ ಮೂಲಕ ಮತ್ತೊಂದು ಐತಿಹಾಸಿಕ ಕಾರ್ಯಕ್ಕೆ ಮುಂದಾಗಿದ್ದಾರೆ.

ಧರ್ಮರಾಜ ಬಗ್ಗೆ ಸಾಹುಕಾರ ಹೇಳಿದ ಭಯಾನಕ ಸತ್ಯ…!

ಇಂಡಿ ಪಟ್ಟಣದಲ್ಲಿ ಸೋಮವಾರ ಶಾಸಕ ಯಶವಂತರಾಯಗೌಡ ಪಾಟೀಲರು ಮೆಗಾ ಮಾರ್ಕೆಟ್ ಕಟ್ಟಡದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಮತಕ್ಷೇತ್ರದ ಜನತೆಯ ಹಲವು ವರ್ಷಗಳ ಬೇಡಿಕೆಗೆ ಈಗ ಕಾಲ ಕೂಡಿಬಂದಿದ್ದು, ಈ ಮೆಗಾ ಮಾರ್ಕೆಟ್ ಸುಮಾರು 30 ಕೋಟಿ ರೂಪಾಯಿಗಳಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಸುಸಜ್ಜಿತವಾಗಿ ಇದನ್ನು ನಿರ್ಮಿಸಲಾಗುತ್ತದೆ. ಇದು ಈ ಬಾಗದ ಐತಿಹಾಸಿಕ ಕಟ್ಟಡವಾಗಲಿದೆ ಎಂದು ಹೇಳಿದರು.

ಇದೇ ರೀತಿ ಪಟ್ಟಣ ಸೇರಿದಂತೆ, ಮತಕ್ಷೇತ್ರದಾದ್ಯಂತ ಹಲವಾರು ಕಾಮಗಾರಿಗಳು ನಡೆದಿದ್ದು, ಕೆಲವು ಹಿಂದಿನ ಸರಕಾರದ ಸಹಮತ ಪಡೆದು ನಿರೀಕ್ಷೆಗೂ ಮೀರಿ ಅನುದಾನವನ್ನು ತರುವ ಮೂಲಕ ಅನೇಕ ಸಾಮಾಜಿಕ ಕಾರ್ಯಗಳಿಗೆ ಅನುಕೂಲಕರವಾಗಿದೆ, ಇದಕ್ಕೆ ಇಂದಿನ ಶಂಕು ಸ್ಥಾಪನೆಯೇ ಸಾಕ್ಷಿಯಾಗಿದೆ ಎಂದರು.

ಭೀಮಾತೀರದಲ್ಲಿ ಧರ್ಮರಾಜ ಚಡಚಣ ಹವಾ…!

ಅಲ್ಲದೇ, ನಗರದ ರಸ್ತೆ ಅಗಲಿಕರಣ, ಒಳ ಚರಂಡಿ, ನವೋದಯ ಶಾಲೆ ಹಾಗೂ ಐಟಿಐ ಕಾಲೇಜಿನಂತ ಇನ್ನೂ ಹತ್ತು ಹಲವು ಯೋಜನೆಗಳು ಇಗಾಗಲೆ ಪೂರ್ಣ ಗೊಂಡಿದ್ದು, ಈ ಮೆಗಾ ಮಾರ್ಕೆಟ ಕಾರ್ಯವು ಆದಷ್ಟು ಬೇಗನೆ ಪೂರ್ಣ ಗೊಳಿಸಲಾಗುವುದು ಮತ್ತು ರಸ್ತೆ ಅಗಲಿಕರಣದಲ್ಲಿ ನಷ್ಟ ಅನುಭವಿಸಿರುವವರಿಗೆ ಈ ಮೆಗಾ ಮಾರ್ಕೆಟಿನಲ್ಲಿ ಮೊದಲ ಆದ್ಯತೆ ನೀಡುವುದರ ಮೂಲಕ ಸಹಕರಿಸುತ್ತೇವೆ ಎಂದು ಭರವಸೆ ನೀಡಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬಬಲಾದ ಮಠದ ಮಠಾಧೀಶರಾದ ಪರಮ ಪೂಜ್ಯ ಶ್ರೀ ಶಿವಯ್ಯ ಮಹಾಸ್ವಾಮಿಗಳು ವಹಿಸಿದರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ ವಿರೋದ ಪಕ್ಷದ ನಾಯಕರಾದ ಎಸ್ ಆರ್ ಪಾಟೀಲ ಬಾಗಿಯಾಗಿದ್ದರು.

ಪುರಸಭೆ ಅಧ್ಯಕ್ಷರಾದ ಶೈಲಜಾ ಪೂಜಾರಿ, ಉಪಾಧ್ಯಕ್ಷರಾದ ಇಸ್ಮಾಯಿಲ್ ಅರಬ್, ಉಪವಿಭಾಗಾಧಿಕಾರಿಗಳಾದ ರಾಹುಲ್ ಸಿಂಧೆ, ತಾಲೂಕಾ ದಂಡಾಧಿಕರಿಗಳಾದ ಚಿದಾನಂದ ಕುಲಕರ್ಣಿ, ಪುರಸಭೆ ಸದಸ್ಯರುಗಳು, ಇನ್ನೀತರ ಅಧಿಕಾರಿಗಳು ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರುಗಳು ಉಪಸ್ಥಿತರಿದ್ದರು.

ವರದಿ : ವಾಯ್.ಎಸ್. ಗುಣಕಿ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!