- Advertisement -Newspaper WordPress Theme
ಪ್ರಮುಖ ಸುದ್ದಿಗಳುಪ್ರಾದೇಶಿಕನಾಳೆಯಿಂದ ರಂಭಾಪುರಿ ಜಗದ್ಗುರುಗಳ 30ನೇ ಶಿವಪೂಜಾ ತಪೋನುಷ್ಠಾನ

ನಾಳೆಯಿಂದ ರಂಭಾಪುರಿ ಜಗದ್ಗುರುಗಳ 30ನೇ ಶಿವಪೂಜಾ ತಪೋನುಷ್ಠಾನ

ಚಿಕ್ಕಮಗಳೂರು : ಜಿಲ್ಲೆಯ ಬಾಳೆಹೊನ್ನೂರಿನ ಶ್ರೀಮದ್ ರಂಭಾಪುರಿ ಜಗದ್ಗುರುಗಳ 30ನೇ ವರ್ಷದ ಶ್ರಾವಣ ಮಾಸದ ಶಿವಪೂಜಾ ತಪೋನುಷ್ಠಾನವು ಇದೆ ತಿಂಗಳ ಆಗಸ್ಟ್ 9 ಸೋಮವಾರ ದಿಂದ ಸೆಪ್ಟೆಂಬರ್ 7 ರ ಮಂಗಳವಾರದ ವರೆಗೆ ಜರುಗಲಿದೆ.

ಪ್ರತಿನಿತ್ಯ ಬೆಳಿಗ್ಗೆ ಶ್ರೀ ರಂಭಾಪುರಿ ಜಗದ್ಗುರುಗಳು ಶಿವಪೂಜಾ ತಪೋನುಷ್ಠಾನದ ಅಂಗವಾಗಿ ಇಷ್ಟಲಿಂಗ ಪೂಜೆ ನೆರವೇರಿಸಲಿದ್ದು, ಪ್ರತಿನಿತ್ಯ ಸಂಜೆ 7ಗಂಟೆಗೆ ಉಟಗಿ ಮಠದ ಶ್ರಿ ಶಿವಪ್ರಸಾದ ದೇವರುರವರು ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನ ನೆರವೇರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಶ್ರೀ ಪೀಠಕ್ಕೆ ಆಗಮಿಸುವ ಪಟ್ಟಾಧ್ಯಕ್ಷರಿಂದ ಹಾಗೂ ವಾಗ್ಮಿಗಳಿಂದ ನುಡಿಸೇವೆ, ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಪ್ರತಿನಿತ್ಯ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ, ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ, ಶಕ್ತಿಮಾತೆ ಶ್ರೀ ಚೌಡೇಶ್ವರಿ ಅಮ್ಮನವರು, ಶ್ರೀ ಸೋಮೇಶ್ವರ ಮಹಾಲಿಂಗಕ್ಕೆ ಮಹಾ ರುದ್ರಾಭಿಷೇಕ, ಅಷ್ಟೋತ್ತರ, ಮಹಾಮಂಗಲ ವಿಶೇಷ ಪೂಜೆ ನೆರವೇರಲಿದೆ.

ಆಗಸ್ಟ್ 12 ಗುರುವಾರ ಖಾಂಡ್ಯ ಮತ್ತು ಜಾಗರ ಹೋಬಳಿ ಭಕ್ತರ ಸಹಯೋಗದಲ್ಲಿ ಶ್ರೀಮದ್ ರಂಭಾಪುರಿ ಜಗದ್ಗುರು ಅಭಿನವ ರೇಣುಕ ಶಿವಾನಂದ ರಾಜೇಂದ್ರ ಶಿವಾಚಾರ್ಯ ಭಗವತ್ಪಾದರ ಪುಣ್ಯ ಸಂಸ್ಮರಣೋತ್ಸವ.

ಆಗಸ್ಟ್ 16 ಸೋಮವಾರ ಆಲ್ದರೂ ಹೋಬಳಿ ವೀರಶೈವ ಸಮಾಜದ ಭಕ್ತರಿಂದ  ಶ್ರೀಮದ್ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರ ರುದ್ರಮುನಿದೇವ ಶಿವಚಾರ್ಯ ಭಗವತ್ಪಾದರ  ಲಿಂಗಾಂಗ ಸಾಮರಸ್ಯದ ಪುಣ್ಯಸ್ಮರಣೆ ಜರುಗಲಿದೆ.

ಕೊರೋನಾ ಸಾಂಕ್ರಾಮಿಕ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸರಕಾರ ಕೋವಿಡ್-19 ನಿಯಮಾವಳಿಯನ್ನು ಕಟ್ಟು ನಿಟ್ಟಾಗಿ ಪಾಲಿಸಿಕೊಂಡು ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಶ್ರೀ ಪೀಠದಲ್ಲಿ ಜರುಗುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರು ಪಾಲ್ಗೋಳ್ಳಬೇಕೆಂದು ಶ್ರೀ ರಂಭಾಪುರಿ ಜಗದ್ಗುರುಗಳು ತಿಳಿಸಿದ್ದಾರೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!