- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯನಾಳೆಯಿಂದ ಜಿಲ್ಲೆಯಲ್ಲಿ ಏನಿರತ್ತೆ, ಏನಿರಲ್ಲ..? ಸಂಪೂರ್ಣ ಮಾಹಿತಿ

ನಾಳೆಯಿಂದ ಜಿಲ್ಲೆಯಲ್ಲಿ ಏನಿರತ್ತೆ, ಏನಿರಲ್ಲ..? ಸಂಪೂರ್ಣ ಮಾಹಿತಿ

ವಿಜಯಪುರ : ಕೋವಿಡ್ 19 ಲಾಕ್ಡೌನ್ ಗೆ ಸಂಬಂಧಪಟ್ಟಂತೆ ಸರ್ಕಾರವು ಮೇ  7 ರಂದು ಹೊರಡಿಸಿದ್ದ ಮಾರ್ಗಸೂಚಿಗಳಲ್ಲಿ ಕೆಲವು ವಿನಾಯಿತಿಗಳನ್ನು ನೀಡಿ ಜೂನ್ 11 ರಂದು ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದ್ದು, ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ  ಅವರು ತಿಳಿಸಿದ್ದಾರೆ.

ಜೂನ್ 14ರ ಬೆಳಿಗ್ಗೆ 6ರಿಂದ ದಿನಾಂಕ  21 ರ ಬೆಳಿಗ್ಗೆ 6 ರವರೆಗೆ ಈ ಮಾರ್ಗಸೂಚಿಗಳು  ಜಾರಿಯಲ್ಲಿರಲಿದ್ದು, ಜಿಲ್ಲೆಯ ಸಾರ್ವಜನಿಕರು ಸಹಕರಿಸಲು ಅವರು ತಿಳಿಸಿದ್ದಾರೆ. ಅಗತ್ಯ ವಸ್ತುಗಳ ಮಾರಾಟ ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಾಲಾವಕಾಶ ಇರುತ್ತದೆ. ಆಹಾರ, ಬೇಳೆಕಾಳು, ಹಣ್ಣು, ತರಕಾರಿ, ಮಾಂಸ, ಮೀನುಮಾಂಸ, ಡೇರಿ, ಮಿಲ್ಕ ಬೂತ್, ಪಶು ಮೇವುಗಳಿಗೆ  ಈ ಅವಧಿಯಲ್ಲಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.

ಬೀದಿ ಬದಿ ವ್ಯಾಪಾರಕ್ಕೆ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಾಲಾವಕಾಶ ದೊರಕಿಸಲಾಗಿದೆ. ಪ್ರಯಾಣಿಕರ ಪ್ರಯಾಣಕ್ಕಾಗಿ ಆಟೋ ಟ್ಯಾಕ್ಸಿಗಳಿಗೆ ಅವಕಾಶ ನೀಡಲಾಗಿದ್ದು ಇಬ್ಬರು ಮಾತ್ರ ಪ್ರಯಾಣಿಸಬಹುದು. ನಿರ್ಮಾಣ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದ್ದು, ಸಿಮೆಂಟ್ ಕಬ್ಬಿಣದ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.

ಗಾರ್ಮೆಂಟ್ಸ್ ಗಳಿಗೆ ಶೇಕಡ 30 ರಷ್ಟು ಅವಕಾಶವಿದ್ದು ಉಳಿದ ಕಾರ್ಖಾನೆಗಳಿಗೆ ಶೇಕಡ 50ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯಾಚರಣೆಗೆ ಅವಕಾಶ ಕಲ್ಪಿಸಲಾಗಿದ್ದು, ಪಾರ್ಕ್ಗಳನ್ನು ತೆಗೆಯಬಹುದು . ಬೆಳಗ್ಗೆ ವಾಯುವಿಹಾರ, ಜಾಗಿಂಗಗಾಗಿ ಬೆಳಿಗ್ಗೆ 5 ರಿಂದ ಬೆಳಿಗ್ಗೆ 10 ಗಂಟೆಯವರೆಗೆ ಕಾಲಾವಕಾಶ ನೀಡಲಾಗಿದೆ.

ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಕೌಶಲ್ಯ ತರಬೇತಿ ಗಳಿಗೆ ಅವಕಾಶ ನೀಡಲಾಗಿದೆ, ಕನ್ನಡಕ ಶಾಪ್ ಗಳು ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಗೆವರೆಗೆ ತೆರೆಯಬಹುದಾಗಿದೆ. ಪ್ರಮುಖ ಸರ್ಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸಲು ಶೇಕಡ 50ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸಲಿವೆ. ಅದರಂತೆ ಕೆಲವೊಂದನ್ನು ನಿರ್ಬಂಧಿಸಲಾಗಿದ್ದು, ಅವುಗಳು ಈ ಕೆಳಗಿನಂತಿವೆ

ಅಗತ್ಯ ವಸ್ತು ಹೊರತುಪಡಿಸಿ ಉಳಿದ ವಾಣಿಜ್ಯ ಚಟುವಟಿಕೆಗಳಿಗೆ ನಿರ್ಬಂಧವಿದೆ. ಕೆಎಸ್ಆರ್ ಟಿಸಿ, ಖಾಸಗಿ ಬಸ್ ಸಂಚಾರ ಇಲ್ಲ. ಈಜುಕೊಳ, ಜಿಮ್, ಸಿನಿಮಾ, ಮಾಲ್, ಧಾರ್ಮಿಕ ಕೇಂದ್ರಗಳಿಗೆ ನಿರ್ಬಂಧ ವಿಧಿಸಲಾಗಿದೆ.

ರಾಜಕೀಯ ಧಾರ್ಮಿಕ ಸಾಂಸ್ಕೃತಿಕ ಸಮಾರಂಭಗಳಿಗೆ ಅವಕಾಶ ಇಲ್ಲ. ಖಾಸಗಿ ಅಗತ್ಯ ಸೇವೆ ವ್ಯಾಪ್ತಿಗೆ ಬಾರದ ಸರ್ಕಾರಿ ಕಚೇರಿಗಳಿಗೆ ನಿರ್ಬಂಧ ವಿಧಿಸಲಾಗಿದೆ. ಈ ಮೊದಲು ನಿಗದಿತ ಮದುವೆಗಳನ್ನು ಮನೆಯಲ್ಲಿ ಮಾತ್ರ ನೆರವೇರಿಸಬಹುದಾಗಿದ್ದು, 40 ಜನ ಸಂಬಂಧಿಗಳಿಗೆ ಮಾತ್ರ ಅವಕಾಶವಿದೆ. ಶವಸಂಸ್ಕಾರ ಅಥವಾ ಅಂತ್ಯಕ್ರಿಯೆ ವೇಳೆ 5 ಜನರಿಗೆ ಮಾತ್ರ ಅವಕಾಶವಿದೆ. ರಾಜ್ಯ ವ್ಯಾಪ್ತಿ ರಾತ್ರಿ ಹಾಗೂ ವಾರಂತ್ಯ ಕರ್ಫ್ಯೂ ಜಾರಿಯಲ್ಲಿರುತ್ತದೆ. ಜೂನ್ 14 ರಿಂದ 21ರವರೆಗೆ ರಾತ್ರಿ ಮತ್ತು, ವಾರಾಂತ್ಯದ ಕರ್ಫ್ಯೂ ರಾಜ್ಯ ವ್ಯಾಪ್ತಿ ಏಕರೂಪವಾಗಿ ಅನ್ವಯಿಸಲಾಗಿದೆ, ರಾತ್ರಿ 7  ರಿಂದ ಬೆಳಿಗ್ಗೆ 5  ವರೆಗೆ ಕರೋನಾ ಕರ್ಫ್ಯೂ ಜಾರಿಯಲ್ಲಿರುತ್ತದೆ, ಹಾಗೂ ವಾರಾಂತ್ಯದ ಕರ್ಫ್ಯೂ ಶುಕ್ರವಾರ ರಾತ್ರಿ 7 ರಿಂದ ಸೋಮವಾರ  ಬೆಳಿಗ್ಗೆ 5 ರ ವರೆಗೆ ಜಾರಿಯಲ್ಲಿರುತ್ತದೆ.

ಈ ವೇಳೆ ರೋಗಿಗಳು ಅವರ ಸಹಾಯಕರ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದ್ದು, ರಾತ್ರಿ ಕಾರ್ಯಾಚರಣೆ ಅಗತ್ಯವಿರುವ ಕೈಗಾರಿಕೆಗಳಿಗೆ ಅವಕಾಶವಿರುತ್ತದೆ, ನೌಕರರು ಐಡಿ ಕಾರ್ಡ್ ತೋರಿಸಿ ಪ್ರಯಾಣಿಸಬೇಕು. ಒಟ್ಟಾರೆ ರಾತ್ರಿ ಕರ್ಫ್ಯೂ ಹಾಗೂ ವಿಕೆಂಡ್ ಕರ್ಫ್ಯೂ  ಸಂದರ್ಭದಲ್ಲಿ ಅನುಮತಿಸಲಾದ ಚಟುವಟಿಕೆ ಹೊರತುಪಡಿಸಿ ಜನರ ಹಾಗೂ ವಾಹನಗಳ ಅನಗತ್ಯ ಓಡಾಟಕ್ಕೆ ನಿರ್ಭಂಧಿಸಲಾಗಿದೆ.

ಅದರಂತೆ ಟೆಲಿಕಾಂ ಇಂಟರ್ನೆಟ್ ಸಂಸ್ಥೆಗಳ ನೌಕರರು  ಮತ್ತು ವಾಹನಗಳ ಸಂಚಾರಕ್ಕೆ ಯಾವುದೇ ನಿರ್ಬಂಧವಿಲ್ಲ, ಆದರೆ ಗುರುತಿನ ಚೀಟಿಯೊಂದಿ ಗೆ ಪ್ರಯಾಣಿಸಬೇಕು, ವೈದ್ಯಕೀಯ ತುರ್ತು ಸೇವೆಗಳು ಅಗತ್ಯ ಸೇವೆಗಳಾದ ಫಾರ್ಮಸಿ ಗಳ ಕಾರ್ಯಾಚರಣೆಗೆ ಯಾವುದೇ ನಿರ್ಬಂಧವಿರುವುದಿಲ್ಲ, ಎಲ್ಲಾ ತರಹದ ಸರಕುಗಳು ಮತ್ತು ಸರಕು ಸಾಗಾಟವಾಹನಗಳ ಸಂಚಾರಕ್ಕೆ ನಿರ್ಬಂಧ ಇರುವುದಿಲ್ಲ, ಸರಕುಗಳ ಹೋಂ ಡೆಲಿವರಿ,ಇ-ಕಾಮರ್ಸ್ ಚಟುವಟಿಕೆಗಳಿಗೆ ಸರಕಾರದ ಮಾರ್ಗಸೂಚಿ ಅನ್ವಯ  ಅವಕಾಶ ಇರುತ್ತದೆ. ರೈಲು ವಿಮಾನ ಸೇವೆ ಎಂದಿನಂತೆ ಅವಕಾಶವಿದ್ದು ಟಿಕೆಟ್ ಅನ್ನು ಪಾಸ್ ರೀತಿಯಲ್ಲಿ ಬಳಸಲು ಸೂಚಿಸಲಾಗಿದೆ.

ಅದರಂತೆ   ರಾತ್ರಿ ಕರ್ಫ್ಯೂ ಹಾಗೂ ವಿಕೆಂಡ್ ಕರ್ಫ್ಯೂ ವೇಳೆ ಸರ್ಕಾರದ  ಮಾರ್ಗಸೂಚಿ ಅನ್ವಯ ಅನುಮತಿಸಲಾದ ಚಟುವಟಿಕೆ ಹೊರತುಪಡಿಸಿ ಅನಗತ್ಯ ವಾಹನಗಳು ಹಾಗೂ ವ್ಯಕ್ತಿಗಳು ಓಡಾಟ ನಡೆಸದಿರಲು ತಿಳಿಸಿರುವ ಅವರು ಸಾರ್ವಜನಿಕರು, ಮಾಸ್ಕ ಧರಿಸಿ ಸಾಮಾಜಿಕ ಅಂತರದೊಂದಿಗೆ ಸರ್ಕಾರದ ಮಾರ್ಗಸೂಚಿಗಳನ್ನು  ಪಾಲಿಸುವಂತೆ  ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!