- Advertisement -Newspaper WordPress Theme
ಪ್ರಮುಖ ಸುದ್ದಿಗಳುರಾಜ್ಯನಟ ಜಗ್ಗೇಶ್ ಪುತ್ರನ ಕಾರು ಅಪಘಾತ

ನಟ ಜಗ್ಗೇಶ್ ಪುತ್ರನ ಕಾರು ಅಪಘಾತ

ಚಿಕ್ಕಬಳ್ಳಾಪುರ : ನವರಸ  ನಾಯಕ ಸ್ಯಾಂಡಲ್‌ವುಡ್‌ ಹಿರಿಯ ನಟ, ಜಗ್ಗೇಶ್‌ ಅವರ ಪುತ್ರ ಯತಿರಾಜ್‌ ಚಲಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ.

ಚಿಕ್ಕಬಳ್ಳಾಪುರ ನಗರದ ಹೊರವಲಯದದಲ್ಲಿರುವ ಬೆಂಗಳೂರು ಹೈದರಾಬಾದ್‌ ಹೆದ್ದಾರಿಯಲ್ಲಿ ಘಟನೆ ಸಂಭವಿಸಿದ್ದು, ಪುತ್ರ ಯತಿರಾಜ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜಗ್ಗೇಶ್‌ ಅವರ ಹೆಸರಲ್ಲಿ ನೊಂದಣಿಯಾಗಿರುವ ಕಾರಿನಲ್ಲಿ ಪುತ್ರ ಯತಿರಾಜ್‌ ಪ್ರಯಾಣ ಬೆಳೆಸಿದ್ದ ವೇಳೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಏರ್‌ ಬ್ಯಾಗ್‌ ತೆರೆದಿದ್ದರಿಂದ ಪುತ್ರ ಯತಿರಾಜ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಘಟನೆ ಹೇಗೆ ? : ಹಿರಿಯ ನಟ ಜಗ್ಗೇಶ್‌ ಪುತ್ರ ಯತಿರಾಜ್‌ ಕಾರು ಚಲಾಯಿಸುತ್ತಿದ್ದರು. ಈ ವೇಳೆ ಎಡಗಡೆಯಿಂದ ಬೈಕ್‌ ಬಂದಿದೆ. ಇದನ್ನು ತಪ್ಪಿಸಲು ಮುಂದಾದಾಗ ಕಾರು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದು ಮರಕ್ಕೆ ಡಿಕ್ಕಿ ಹೊಡೆದಿದೆ. ತಕ್ಷಣವೇ ಸ್ಥಳೀಯರು ಹಾಗು ಏರ್‌ ಬ್ಯಾಗ್‌ ಸಹಾಯದಿಂದ ಯತಿರಾಜ್‌ ಪ್ರಾಣಾಪಾಯದಿಂದ ಪಾರಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಮೇಶ ಜಾರಕಿಹೊಳಿ ಬಗ್ಗೆ ಉಮೇಶ ಕತ್ತಿ ಸಮರ್ಥನೆ

ಆದರೆ, ಜಗ್ಗೇಶ್ ಅವರು, ತಮ್ಮ ಮಗ ನಾಯಿಯನ್ನು ರಕ್ಷಿಸಲು ಹೋಗಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದಾನೆ. ಆದರೆ ಯತಿರಾಜ್ ಗೆ ಯಾವುದೇ ಗಾಯವಾಗಿಲ್ಲ ಇಂದು ರಾಯರ ಕೃಪೆಯಿಂದ ಪಾರಾಗಿದ್ದಾನೆ ಎಂದು ತಿಳಿಸಿದ್ದಾರೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!