- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯದೇಶಿ ಆಟಗಳಲ್ಲಿ ಆಸಕ್ತಿವಹಿಸಿ. ಯುವಕರಿಗೆ ಸಿದ್ಧಲಿಂಗ ಸ್ವಾಮೀಜಿ ಸಲಹೆ

ದೇಶಿ ಆಟಗಳಲ್ಲಿ ಆಸಕ್ತಿವಹಿಸಿ. ಯುವಕರಿಗೆ ಸಿದ್ಧಲಿಂಗ ಸ್ವಾಮೀಜಿ ಸಲಹೆ

ಬಸವನಬಾಗೇವಾಡಿ : ಮಹಾಮಾರಿ ಕೊರೋನಾ ವೈರಸ್‌ನ್ನು ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ವೈದ್ಯರು ಹಾಗೂ ಸಿಬ್ಬಂದಿಗಳು ಸೇರಿದಂತೆ ವಿವಿಧ ಇಲಾಖೆಗಳ ಸೇವೆ ಸ್ಮರಣೀಯವಾಗಿದೆ ಅಂತಹವರನ್ನು ಗುರುತಿಸಿ ಸನ್ಮಾನಿಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಸ್ಥಳೀಯ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ಶಾಸಕ ನಡಹಳ್ಳಿಗೆ ಸಚಿವ ಸ್ಥಾನ ನೀಡಿ. ಸಿಎಂ, ವರಿಷ್ಠರಿಗೆ ಬಿಜೆಪಿ ಮುಖಂಡರುಗಳಿಂದ ಮನವಿ

ಪಟ್ಟಣದ ನಂದಿ ತರಕಾರಿ ಮಾರುಕಟ್ಟೆಯಲ್ಲಿನ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ವಿಶ್ವಗುರು ಸ್ಪೋರ್ಟ್ಸ್ ಅಸೋಶಿಯೆಶನ್ ಹಮ್ಮಿಕೊಂಡಿದ್ದ ಕೊರೋನಾ ಸೇನಾನಿಗಳ ಸನ್ಮಾನ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸೇರಿದಂತೆ ಯುವಕರಲ್ಲಿ ಕ್ರೀಡಾಸಕ್ತಿ ಹೆಚ್ಚಿಸುವ ಕಾರ್ಯ ಮಾಡುತ್ತಿದೆ. ಮಕ್ಕಳು ಮೊಬೈಲ್ ಗೇಮಗಳಿಗೆ ಅಂಟಿಕೊಳ್ಳದೇ ಮಾನಸಿಕ ದೈಹಿಕ ಸಾಮಾರ್ಥ್ಯ ಹೆಚ್ಚಿಸುವ ಆಟಗಳಲ್ಲಿ ತೊಡಗಿಕೊಳ್ಳುವಂತೆ ಪಾಲಕರು ಗಮನ ಹರಿಸಬೇಕಿದೆ. ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವಂತಹ ಕ್ರೀಡಾಪಟುಗಳಾಗಿ ಹೊರಹೊಮ್ಮಬೇಕಿದೆ. ದೇಶಿಯ ಆಟಗಳಲ್ಲಿ ಹೆಚ್ಚಿನ ಆಸಕ್ತಿವಹಿಸಬೇಕೆಂದು ಯುವಕರಿಗೆ ಸಲಹೆ ನೀಡಿದರು.

ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸಾಬೀರ ಪಟೇಲ ಮಾತನಾಡಿ ವೈದ್ಯರು ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಕೋವಿಡ್ ಸೋಂಕಿತರ ಚಿಕಿತ್ಸೆಯಲ್ಲಿ ಯಶಸ್ವಿಯಾಗಿ ತೊಡಗಿಕೊಂಡಿದ್ದಾರೆ ತಮ್ಮ ಕುಟುಂಬದ ಕಾರ್ಯಗಳನ್ನು ಬದಿಗೊತ್ತಿ ಕಾರ್ಯನಿರ್ವಹಿಸುವ ಮೂಲಕ ಜನರ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಆರೋಗ್ಯ ಇಲಾಖೆಯೊಂದಿಗೆ ವಿವಿಧ ಇಲಾಖೆ ಸಿಬ್ಬಂದಿ ಕೋವಿಡ್ ತಡೆಗಟ್ಟಿವಲ್ಲಿ ಪ್ರಮುಖ ಪಾತ್ರವಹಿಸಿವೆ. ಕೊರೋನಾ ಸೇನಾನಿಗಳಿಗೆ ಆತ್ಮಸ್ಥೈರ್ಯ ತುಂಬುವಲ್ಲಿ ಸಂಘಟನೆಗಳ ಕಾರ್ಯ ಮರೆಯುವಂತಿಲ್ಲ ಎಂದು ಹೇಳಿದರು.

ವಾಸ್ತವಿಕ ನೆಲೆಯಲ್ಲಿ ಮೇಕೆದಾಟು ಯೋಜನೆ ಮಾಡಲಿ. ಸಿಟಿ ರವಿ ಸಲಹೆ

ತಾಲೂಕಾ ಆರೋಗ್ಯಾಧಿಕಾರಿ ಡಾ.ಎಸ್.ಎಸ್.ಓತಗೇರಿ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ ಹಾರಿವಾಳ, ಮುಖ್ಯಾಧಿಕಾರಿ ಬಿ.ಎ.ಸೌದಾಗರ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಸಂಜೀವ ಕಲ್ಯಾಣಿ, ಉಪಾಧ್ಯಕ್ಷೆ ಲಕ್ಷ್ಮೀಬಾಯಿ ಬೆಲ್ಲದ, ಅಗ್ನಿಶಾಮಕ ಠಾಣೆಯ ಅಧಿಕಾರಿ ಸಂಗಮೇಶ ಶಿವಪೂಜೆ, ಗ್ರಾಮೀಣ ಬ್ಯಾಂಕ ವ್ಯವಸ್ಥಾಪಕ ಪ್ರಭು ವಾಲಿ, ವಿಶ್ವಗುರು ಸ್ಪೋರ್ಟ್ಸ್ ಅಸೋಸಿಯೇಶನ ಅಧ್ಯಕ್ಷ ಡಾ.ವಿಶ್ವನಾಥ ನಡಕಟ್ಟಿ ಇದ್ದರು. ಕಾಶೀನಾಥ ಅವಟಿ ಪ್ರಾಸ್ತಾವಿಕವಾಗಿ ಮಾತನಾಡಿದರು, ವಿನೂತ ಕಲ್ಲೂರ ಸ್ವಾಗತಿಸಿದರು, ಡಾ.ರಾಜಶೇಖರ ಬೆನಕನಹಳ್ಳಿ ನಿರೂಪಿಸಿದರು. ಪುರಸಭೆ ಸದಸ್ಯೆ ಜಗದೇವಿ ಗುಂಡಳ್ಳಿ ವಂದಿಸಿದರು.

ವರದಿ : ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!