- Advertisement -Newspaper WordPress Theme
ಪ್ರಮುಖ ಸುದ್ದಿಗಳುರಾಷ್ಟ್ರೀಯದೇಶಾದ್ಯಂತ ಖಾದ್ಯ ತೈಲ ಬೆಲೆ ಇಳಿಕೆ ಪ್ರವೃತ್ತಿ ಗೋಚರ

ದೇಶಾದ್ಯಂತ ಖಾದ್ಯ ತೈಲ ಬೆಲೆ ಇಳಿಕೆ ಪ್ರವೃತ್ತಿ ಗೋಚರ

ನವದೆಹಲಿ : ಕಳೆದ ಒಂದು ವರ್ಷದಿಂದ ಖಾದ್ಯ ತೈಲ ಬೆಲೆ ನಿರಂತರ ಏರುಮುಖಿಯಾಗಿದ್ದರಿಂದ ಅದನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ, ಕಚ್ಚಾ ತಾಳೆ ಎಣ್ಣೆ, ಕಚ್ಚಾ ಸೋಯಾ ಎಣ್ಣೆ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆ ಮೇಲಿನ ಮೂಲ ಸುಂಕವನ್ನು ಶೇ.2.5ರಿಂದ ಶೂನ್ಯಕ್ಕೆ ಇಳಿಕೆ ಮಾಡಿದ್ದು, ಈ ಎಣ್ಣೆಗಳ ಮೇಲಿನ ಕೃಷಿ ಸೆಸ್ ಕೂಡ ಕಚ್ಚಾ ತಾಳೆ ಎಣ್ಣೆ ಮೇಲೆ ಶೇ.20ರಿಂದ ಶೇ.7.5ಕ್ಕೆ, ಕಚ್ಚಾ ಸೋಯಾ ಎಣ್ಣೆ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆ ಮೇಲೆ ಶೇ.5ರಷ್ಟು ಇಳಿಕೆ ಮಾಡಲಾಗಿದೆ.

ಈ ಮೇಲಿನ ಕಡಿತದ ಕ್ರಮಗಳಿಂದಾಗಿ, ಒಟ್ಟಾರೆ ಕಚ್ಚಾ ತಾಳೆ ಎಣ್ಣೆ ಮೇಲಿನ ಸುಂಕ ಶೇ.7.5 ಮತ್ತು ಕಚ್ಚಾ ಸೋಯಾ ಎಣ್ಣೆ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆ ಮೇಲಿನ ತೆರಿಗೆ ಶೇ.5ರಷ್ಟು ಇಳಿಕೆಯಾಯಿತು. ಆರ್ ಬಿಡಿ ಪ್ಲಾಮಾಲೀನ್ ಎಣ್ಣೆ, ಸಂಸ್ಕರಿಸಿದ ಸೋಯಾಬೀನ್ ಮತ್ತು ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆ ಮೇಲಿನ ಮೂಲ ಸುಂಕ ಸದ್ಯ ಶೇ.32.5 ಇದ್ದಿದ್ದು ಶೇ.17.5ಕ್ಕೆ ಇಳಿಕೆಯಾಗಿದೆ. 

ಕಡಿತಕ್ಕೂ ಮುನ್ನ ಎಲ್ಲ ರೂಪದ ಕಚ್ಚಾ ಖಾದ್ಯ ತೈಲಗಳ ಮೇಲೆ ಕೃಷಿ ಮೂಲಸೌಕರ್ಯ ಸೆಸ್ ಶೇ.20ರಷ್ಟು ಇತ್ತು. ಕಡಿತದ ನಂತರ ಕಚ್ಚಾ ತಾಳೆ ಎಣ್ಣೆ ಬೆಲೆ ಮೇಲೆ ಶೇ.8.25, ಕಚ್ಚಾ ಸೋಯಾಬೀನ್ ಎಣ್ಣೆ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆ ಮೇಲೆ ತಲಾ ಶೇ.5.5ರಷ್ಟಾಗಿದೆ. 

ಖಾದ್ಯ ತೈಲಗಳ ಬೆಲೆ ನಿಯಂತ್ರಿಸಲು ಸರ್ಕಾರ, ಕಚ್ಚಾ ತಾಳೆ ಎಣ್ಣೆ, ಕಚ್ಚಾ ಸೋಯಾಬೀನ್ ಎಣ್ಣೆ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆ ಮೇಲಿನ ಆಮದು ಸುಂಕವನ್ನು ಏಕರೂಪಗೊಳಿಸಿತು, ಭವಿಷ್ಯದಲ್ಲಿ ಎನ್ ಸಿಡಿಇಎಕ್ಸ್ ಮೂಲಕ ಸಾಸಿವೆ ಎಣ್ಣೆಯ ಮಾರಾಟ ರದ್ದುಗೊಳಿಸಲಾಯಿತು ಮತ್ತು ದಾಸ್ತಾನು ಸಂಗ್ರಹಕ್ಕೆ ಮಿತಿ ವಿಧಿಸಲಾಯಿತು. 

ಪ್ರಮುಖ ಖಾದ್ಯ ತೈಲ ಮಾರಾಟಗಾರರಾದ ಅದಾನಿ ವಿಲ್ಮರ್ ಮತ್ತು ರುಚಿ ಇಂಡಸ್ಟ್ರೀಸ್ ಸಗಟು ಮಾರಾಟ ದರವನ್ನು ಪ್ರತಿ ಲೀಟರ್ ಗೆ 4 ರಿಂದ 7 ರೂ. ಕಡಿತಗೊಳಿಸಿವೆ. ಹಬ್ಬದ ಖುತುವಿನಲ್ಲಿ ಗ್ರಾಹಕರಿಗೆ ಪರಿಹಾರವನ್ನು ನೀಡುವ ಸಲುವಾಗಿ ಬೆಲೆಗಳನ್ನು ಇಳಿಕೆ ಮಾಡಲಾಗಿದೆ. 

ಹೈದರಾಬಾದ್ನ ಜೆಮಿನಿ ಇಡಿಬಲ್ಸ್ ಮತ್ತು ಫ್ಯಾಟ್ಸ್ ಇಂಡಿಯಾ, ದೆಹಲಿಯ ಮೋದಿ ನ್ಯಾಚುರಲ್ಸ್, ಗೋಕುಲ್ ರಿಫಾಯಿಲ್ಸ್ ಅಂಡ್ ಸಾಲ್ವೆಂಟ್, ವಿಜಯ್ ಸೋಲ್ ವೆಕ್ಸ್, ಗೋಕುಲ್ ಅಗ್ರೋ ರಿಸೋಸರ್ಸ್ ಮತ್ತು ಎನ್ .ಕೆ ಪ್ರೊಟೀನ್ಸ್ ಸೇರಿ ಇತರೆ ಹಲವು ಪ್ರಮುಖ ಮಾರಾಟಗಾರರು ಖಾದ್ಯ ತೈಲಗಳ ಸಗಟು ಮಾರಾಟ ದರವನ್ನು ಇಳಿಕೆ ಮಾಡಿವೆ. 

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಅಧಿಕವಾಗಿದ್ದರೂ ಸಹ, ರಾಜ್ಯ ಸರ್ಕಾರಗಳ ಜೊತೆಗೂಡಿ ಕೇಂದ್ರ ಸರ್ಕಾರ ಕೈಗೊಂಡಿರುವ ಹಲವು ಮಧ್ಯಪ್ರವೇಶ ಮತ್ತು ಸಕ್ರಿಯ ಕ್ರಮಗಳಿಂದಾಗಿ ಖ್ಯಾದ್ಯ ತೈಲಗಳ ಬೆಲೆ ಇಳಿಕೆಯಾಗಿದೆ. 

ಖಾದ್ಯ ತೈಲಗಳ ಬೆಲೆ ಒಂದು ವರ್ಷದ ಹಿಂದೆ ಇದ್ದುದಕ್ಕಿಂತ ಹೆಚ್ಚಳವಾಗಿತ್ತು, ಆದರೆ ಅಕ್ಟೋಬರ್ ನಂತರ ಅದರಲ್ಲಿ ಇಳಿಕೆ ಪ್ರವೃತ್ತಿ ಕಂಡುಬರುತ್ತಿದೆ. ಸರ್ಕಾರ ದ್ವಿತೀಯ ಹಂತದ ಖಾದ್ಯ ತೈಲಗಳು ವಿಶೇಷವಾಗಿ ಆಮದು ಅವಲಂಬನೆ ತಗ್ಗಿಸಲು ರೈಸ್ ಬ್ರಾನ್ ಆಯಿಲ್ ಉತ್ಪಾದನೆ ಹೆಚ್ಚಳಕ್ಕೆ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು  ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ತಿಳಿಸಿದೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!