- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯದೇಶಮುಖರ ನಂತರ ಮಂತ್ರಿಸ್ಥಾನ ಸಿಕ್ಕಿಲ್ಲ, ನಡಹಳ್ಳಿಗೆ ಅವಕಾಶ ನೀಡಿ. ನ್ಯಾಯವಾದಿ ಮನವಿ

ದೇಶಮುಖರ ನಂತರ ಮಂತ್ರಿಸ್ಥಾನ ಸಿಕ್ಕಿಲ್ಲ, ನಡಹಳ್ಳಿಗೆ ಅವಕಾಶ ನೀಡಿ. ನ್ಯಾಯವಾದಿ ಮನವಿ

ನಾಲತವಾಡ : ದೇಶಮುಖರ ನಂತರ ಮುದ್ದೇಬಿಹಾಳ ತಾಲೂಕಿಗೆ ಕ್ಯಾಬಿನೇಟ್ ದರ್ಜೆಯ ಮಂತ್ರಿ ಸ್ಥಾನ ನೀಡಿಲ್ಲ ಆದ್ದರಿಂದ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ನ್ಯಾಯವಾದಿ ಬಸವರಾಜ ತತಬೀರಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕು ರಾಜ್ಯದಲ್ಲಿಯೇ ವಿಷೇಶವಾಗಿ ರಾಜಕೀಯದಲ್ಲಿ ಸ್ಥಾನಮಾನ ಮಾಜಿ ಸಚಿವ ದಿ. ಜೆ.ಎಸ್. ದೇಶಮುಖ ಅವರಿಂದ ಸಿಕ್ಕಿದೆ. ಅವರ ನಂತರ ಮುದ್ದೇಬಿಹಾಳಕ್ಕೆ ರಾಜಕೀಯ ವಲಯದಲ್ಲಿ ಹಾಗೂ ಅಭಿವೃದ್ದಿ ವಿಷಯದಲ್ಲಿ ಸರಕಾರಗಳು ಕಡಗಣಿಸುತ್ತಾ ಬಂದಿರುವುದು ಮೇಲ್ನೋಟದಲ್ಲಿಯೇ ಅರ್ತವಾಗುತ್ತದೆ. ಆದರೆ ಈಗ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಮುದ್ದೇಬಿಹಾಳ ಮತಕ್ಷೇತ್ರಕ್ಕೆ ಆಯ್ಕೆಯಾದ ನಂತರ ಮೂರು ವರ್ಷಗಳಲ್ಲಿ ಸಾವಿರಾರು ಕೋಟಿ ಅನುದಾನ ತಂದು ಸಾಕಷ್ಟು ಅಭಿವೃದ್ಧಿ ಪಡಿಸಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡಿದರೆ ಮತಕ್ಷೇತ್ರ ಇನ್ನಷ್ಟು ಅಭಿವೃಧ್ಧಿ ಹೊಂದುತ್ತದೆ ಎಂದು ನ್ಯಾಯವಾದಿ ನಡಹಳ್ಳಿ ಪರ ಮಾತನಾಡಿದರು.

ಜಿಲ್ಲೆಯಲ್ಲಿಯೇ ಮುದ್ದೇಬಿಹಾಳ ಕ್ಷೇತ್ರ ನೀರಾವರಿ ಪ್ರದೇಶದಲ್ಲಿ ಹಿಂದುಳಿದಿದೆ. ಈ ಭಾಗದ ರೈತರು, ಸಾಕಷ್ಟು ಭೂಮಿಯನ್ನು ಕೃಷ್ಣಾ ನದಿಗೆ ಕಳೆದುಕೊಂಡಿದ್ದಾರೆ. ಆಲಮಟ್ಟಿ ಆಣೆಕಟ್ಟು ಹಾಗೂ ಬಸವಸಾಗರ ಅಣೆಕಟ್ಟಿಗೆ ಸಾವಿರಾರು ಎಕರೆ ಪ್ರದೇಶ ನೀರು ಪಾಲಾಗಿದೆ. ಇಷ್ಟಾದರು ಸಹ ಇಲ್ಲಿಯ ರೈತರಿಗೆ ನಿರಾವರಿ ಸೌಲಭ್ಯವಿಲ್ಲ, ಸಮಗ್ರ ನೀರಾವರಿ ಹಾಗೂ ಕೈಗಾರಿಕ ಪ್ರದೇಶಕ್ಕೆ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರನ್ನು ಕ್ಯಾಬಿನೇಟ್ ಮಂತ್ರಿ ಸ್ಥಾನವನ್ನು ನೀಡಬೇಕು ಎಂದು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರಿಗೆ ಬಸವರಾಜ ತತಬೀರಿ ಮನವಿ ಮಾಡಿದ್ದಾರೆ.

ವರದಿ : ಯೂನುಸ್ ಮೂಲಿಮನಿ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!