- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯದಿ.ರಾಜೀವ್ ಗಾಂಧಿ ಪುಣ್ಯತಿಥಿ. ಹಣ್ಣು-ಹಂಪಲು ವಿತರಿಸಿದ ಬ್ಲಾಕ್ ಕಾಂಗ್ರೆಸ್

ದಿ.ರಾಜೀವ್ ಗಾಂಧಿ ಪುಣ್ಯತಿಥಿ. ಹಣ್ಣು-ಹಂಪಲು ವಿತರಿಸಿದ ಬ್ಲಾಕ್ ಕಾಂಗ್ರೆಸ್

ಬಸವನಬಾಗೇವಾಡಿ : ದೇಶ ಕಂಡ ಶೇಷ್ಠ ಪ್ರಧಾನ ಮಂತ್ರಿಗಳ ಪೈಕಿ ದಿ. ರಾಜೀವ್ ಗಾಂಧಿ ಅವರು ಮುಂಚೂಣಿಯಲ್ಲಿ ನಿಲ್ಲುತ್ತಾರೆ ಎಂದು ಹೂವಿನಹಿಪ್ಪರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಳಾಸಾಹೇಬಗೌಡ ಪಾಟೀಲ (ಸಾತಿಹಾಳ) ಹೇಳಿದರು.

ತಾಲೂಕಿನ ಹೂವಿನಹಿಪ್ಪರಗಿ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಮಾಜಿ ಪ್ರಧಾನಿ ದಿ. ರಾಜೀವ ಗಾಂಧಿ ಅವರ 30ನೇ ಪುಣ್ಯತಿಥಿ ನಿಮಿತ್ತ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಣ್ಣು-ಹಂಪಲು, ಬಿಸ್ಕೇಟ್ ಸೇರಿ ಶುದ್ದ ಕುಡಿಯುವ ನೀರನ್ನು ವಿತರಿಸಿ ಮಾತನಾಡಿದ ಅವರು, ದೇಶದ ರಾಜಕೀಯ ಇತಿಹಾಸದ ಪುಟ ತಿರುವಿ ನೋಡಿದರೆ ದೇಶಕ್ಕೆ ಕಾಂಗ್ರೆಸ್ ನಾಯಕರ ಕೊಡುಗೆ ಅಪಾರವಾಗಿದ್ದು ಅದನ್ನು ಎಂದು ಮರೆಯಲು ಸಾಧ್ಯವೇ ಇಲ್ಲ ಎಂದು ಹೇಳಿದರು.

ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ರಮ್ಜಾನ ಮುಜಾವರ, ಬ್ಲಾಕ್ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಮಂಜುನಾಥ ಬುದ್ನಿ ರಾಜೀವ್ ಗಾಂಧಿ 30ನೇ ಪುಣ್ಯತಿಥಿ ಕಾರ್ಯಕ್ರಮದ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಪಿಕೆಪಿಎಸ್ ಅಧ್ಯಕ್ಷ ಪಿ.ಜಿ.ಗೋಠೆದ, ಪ್ರವೀಣಕುಮಾರ ಗೊಳಸಂಗಿ, ಭೀಮಣ್ಣ ಗಿರಿನಿವಾಸ, ರಾಜು ಪೂಜಾರಿ, ಕುಮಾರ ಸಂಕನಾಳ, ಪ್ರಶಾಂತ ಗೋಠೆದ, ರವಿ ಗಿರಿನಿವಾಸ, ಮಂಜು ಪೂಜಾರಿ, ಮುದಕಪ್ಪ ಅಗಸಬಾಳ, ಸುಭಾಷ ಗಿರಿನಿವಾಸ, ಪ್ರಕಾಶ ತಳಗೇರಿ ವೈಧ್ಯಾಧಿಕಾರಿ ಡಾ.ಬಿ.ಎಸ್ ಸಂದಿಮನಿ ಸೇರಿದಂತೆ ಇತರರು ಇದ್ದರು.

ವರದಿ : ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!