- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯದಿನವೂ ನಡೆದುಕೊಂಡೇ ಶಾಲೆಗೆ ಹೋಗುತ್ತಿದ್ದೆ. ವೃತ್ತಿ ಅನುಭವ ಹಂಚಿಕೊಂಡ ನೀವೃತ್ತ ಶಿಕ್ಷಕ ವ್ಹಿ. ಜಿ. ಬಸರಕೋಡ

ದಿನವೂ ನಡೆದುಕೊಂಡೇ ಶಾಲೆಗೆ ಹೋಗುತ್ತಿದ್ದೆ. ವೃತ್ತಿ ಅನುಭವ ಹಂಚಿಕೊಂಡ ನೀವೃತ್ತ ಶಿಕ್ಷಕ ವ್ಹಿ. ಜಿ. ಬಸರಕೋಡ

ನಾಲತವಾಡ : ಸ್ಥಳಿಯ ಜಗದೇವನಗರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ವ್ಹಿ. ಜಿ. ಬಸರಕೋಡ ಅವರ ಬೀಳ್ಕೋಡುವ ಹಾಗೂ ಸನ್ಮಾನ ಸಮಾರಂಭ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ನಾಲತವಾಡ ಸಿ.ಆರ.ಪಿ ಬಸವರಾಜ ಮಾದರ ಮಾತನಾಡಿ, ನೇರ ನಡೆ ನುಡಿಯ ಮುಖ್ಯ ಶಿಕ್ಷಕರ ಸೇವೆಯನ್ನು ನಮ್ಮ ಇಲಾಖೆ ಕಳೆದುಕೊಳ್ಳುತ್ತಿದೆ. ಜು.31 ಕ್ಕೆ ವಯೋ ನಿವೃತ್ತಿ ಹೊಂದಿರುವ ಬಸರಕೋಡ ಶಿಕ್ಷಕರು 1992 ರಲ್ಲಿ ಶಿಕ್ಷಕರ ವೃತ್ತಿಯಲ್ಲಿ ಸೇರಿಕೊಂಡ ನಂತರ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ತದನಂತರ ಮುದ್ದೇಬಿಹಾಳಕ್ಕೆ ವರ್ಗಾವಣೆಯಾದ ಶಾಲೆಯಲ್ಲಿ ಮುಖ್ಯಶಿಕ್ಷಕನಾಗಿ ಸೇವೆಯನ್ನು ಸಲ್ಲಿಸಿದ್ದಾರೆ ಒಟ್ಟು ಇವರ 29 ವರ್ಷ ಸೇವಾ ವೃತ್ತಿಯಲ್ಲಿ ಮುಖ್ಯಶಿಕ್ಷಕನಾಗಿ ಅಪರೂಪದ ಸೇವೆ ಸಲ್ಲಿಸಿದ್ದಾರೆ ಎಂದರು.

ಇನ್ನೋರ್ವ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸನಗೌಡ ಮುದ್ನೂರ ಮಾತನಾಡಿ ಬಸರಕೋಡ ಶಿಕ್ಷಕರು ಬಹಳ ನಿಷ್ಟೂರ ಸ್ವಭಾವದವರು ಅವರು ಯಾವದೇ ಕಾರ್ಯಕ್ರಮಗಳಲ್ಲಿ ಹಾಗೂ ಶಿಕ್ಷಕರ ವರ್ಗದಲ್ಲಿ ತಪ್ಪುಗಳಾದರೆ ನೇರವಾಗಿ ಬಂದು ಅದನ್ನು ಹೇಳುತಿದ್ದರು ಇಂತಹ ತಪ್ಪನ್ನು ತಾವು ಮಾಡಿದ್ದೀರಿ ಎಂದು ನಮಗೆ ಸಲಹೇ ನೀಡುತಿದ್ದರು ಎಂದರು.

ಸನ್ಮಾನ ಸ್ವಿಕರಿಸಿದ ನಿವೃತ್ತ ಶಿಕ್ಷಕ ವ್ಹಿ.ಜಿ.ಬಸರಕೋಡ ಮಾತನಾಡಿ ನಾನು ಪ್ರಾರಂಭದಲ್ಲಿ ಶಿಕ್ಷಕನಾಗಿ ಹಾಜರಾದ ನಂತರ ದಿನನಿತ್ಯ ಶಾಲೆಗೆ ಸುಮಾರು 2 ಕಿ.ಮಿ ನಡೆದುಕೊಂಡು ಹೋಗುವ ಸಂದರ್ಭ ಇತ್ತು. 13 ವರ್ಷಗಳ ಕಾಲ ಸಾಕಷ್ಟು ಕಷ್ಟಗಳನ್ನು ಸಹಿಸಿಕೊಂಡು ಶಾಲೆಯಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸಿದ್ದೇನೆ. ನನಗೆ ನನ್ನ ಶಿಕ್ಷಕರ ವರ್ಗ ಸಾಕಷ್ಟು ಸಹಕಾರ ನೀಡಿದ್ದಾರೆ. ನನ್ನ ನೇರ ನುಡಿ ಸ್ವಭಾವಕ್ಕೆ ಕೆಲವರು ನೊಂದಿರಬಹುದು ಆದರೆ ನಾನು ಉದ್ದೇಶಪೂರ್ವಕವಾಗಿ ಮತ್ತೊಬ್ಬರನ್ನು ನೋಯಿಸಲು ಮಾತನಾಡುತಿಲ್ಲ. ಲೋಪಗಳು ಕಂಡಾಗ ನನಗೆ ಅವರಿಗೆ ಹೇಳುವ ಸ್ವಭಾವ ಇದೆ. ಆದ್ದರಿಂದ ಅವರಿಗೆ ಅವರ ಮುಂದೇಯೆ ನೇರವಾಗಿ ಹೇಳುತಿದ್ದೆ ಎಂದು ತಮ್ಮ ವೃತ್ತಿ ಜೀವನದ ಅನುಭವದ ಮಾತುಗಳನ್ನು ಹಂಚಿಕೊಂಡ ಅವರು, ನನ್ನ ಜೀವನದಲ್ಲಿ ನಾನು ಇಷ್ಟು ಸಂತೋಷವಾಗಿರಲು ನನ್ನ ಧರ್ಮಪತ್ನಿಯೇ ಕಾರಣರಾಗಿದ್ದಾರೆ ಎಂದು ಭಾವುಕವಾಗಿ ನುಡಿದರು.

ನಿವೃತ್ತ ಶಿಕ್ಷಕ ಎಸ್.ಎಸ್.ಹಿರೇಮಠ, ಉರ್ದು ಶಾಲೆಯ ಮುಖ್ಯಗುರುಗಳು ಎ.ಎಚ್.ಖಾಜಿ, ಎ.ಎಸ್.ಕಸಬೇಗೌಡರ, ಮಾತನಾಡಿದರು. ಎಮ್.ಎಸ್.ಚಳಗೇರಿ ಶಿಕ್ಷಕಿ ಪ್ರಾರ್ಥಿಸಿದರು, ಎಸ್.ಎಸ್.ಹಾದಿಮನಿ ಸ್ವಾಗತಿಸಿದರು, ಎಮ್.ಆಯ್.ಹಾವರಗಿ ಶಿಕ್ಷಕರು ನಿರೂಪಿಸಿ ವಂದಿಸಿದರು.

ಸನ್ಮಾನ : ವಯೋ ನಿವೃತ್ತಿ ಹೊಂದಿದ ವ್ಹಿ.ಜಿ.ಬಸರಕೋಡ ಮುಖ್ಯ ಶಿಕ್ಷಕರಿಗೆ ಜಗದೇವನಗರ ಶಾಲೆಯ ಶಿಕ್ಷಕರ ಬಳಗ, ಜೈನಾಪೂರ ಗ್ರಾಮದ ಮುಖಂಡರು, ನಿವೃತ್ತ ಶಿಕ್ಷಕ ಎಚ್.ಎಮ್.ಹಂಡಿ, ಸಿ.ರ‍್ಪಿ ಬಸವರಾದ ಮಾದರ, ವಸಂತ ಚೌಹಾಣ ಶಿಕ್ಷಕರು ಪ್ರತ್ಯೇಕವಾಗಿ ಸನ್ಮಾನಿಸಿದರು.

ಈ ವೇಳೆ ಮುಖ್ಯಶಿಕ್ಷಕರಾದ, ಎಮ್.ಎಸ್.ಗುರುವಿನ್, ಎಸ್.ಎಸ್.ಕವಡಿಮಟ್ಟಿ, ಬಿ.ಎಮ್.ಮೇಲಸೀಮಿ, ಎಸ್.ಎ.ಹಂಪನಗೌಡ್ರ, ಎಸ್.ಸಿ.ಸಜ್ಜನ, ಸ್ಥಳಿಯ ಮುಖಂಡರಾದ ಖಾಜಾಮೀನ ಆನೇಹೊಸೂರ, ಗೌಡಪ್ಪ ಕಸಬೇಗೌಡರ, ಗಂಗಪ್ಪ ಚಲವಾದಿ, ಎಸ್ಡಿ.ಎಮ್ಸಿ ಅಧ್ಯಕ್ಷ ಮಲ್ಲು ಭಜಂತ್ರಿ, ಪ.ಪಂ ಮಾಜಿ ಉಪಾಧ್ಯಕ್ಷ ವೀರೇಶ ಚಲವಾದಿ, ಗುರುರಾಜ ತಂಗಡಗಿ ಹಾಗೂ ಇನ್ನಿತರರು ಇದ್ದರು.

ವರದಿ : ಯೂನುಸ್ ಮೂಲಿಮನಿ

LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!