- Advertisement -Newspaper WordPress Theme
ಪ್ರಮುಖ ಸುದ್ದಿಗಳುರಾಷ್ಟ್ರೀಯ‘ತೌಕ್ತೆ’ ಚಂಡಮಾರುತ : ಉನ್ನತ ಮಟ್ಟದ ಸಭೆ ನಡೆಸಿದ ಪ್ರಧಾನಿ ಮೋದಿ

‘ತೌಕ್ತೆ’ ಚಂಡಮಾರುತ : ಉನ್ನತ ಮಟ್ಟದ ಸಭೆ ನಡೆಸಿದ ಪ್ರಧಾನಿ ಮೋದಿ

ನವದೆಹಲಿ : ‘ತೌಕ್ತೆ’ ಚಂಡಮಾರುತದಿಂದಾಗಿ ಉದ್ಭವಿಸಲಿರುವ ಸ್ಥಿತಿಗತಿ ನಿರ್ವಹಣೆ ಕುರಿತಂತೆ ಸಂಬಂಧಿಸಿದ ರಾಜ್ಯಗಳು ಮತ್ತು ಕೇಂದ್ರ ಸಚಿವಾಲಯ ಸಂಸ್ಥೆಗಳು ಕೈಗೊಂಡಿರುವ ಸಿದ್ಧತಾ ಕ್ರಮಗಳ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆ ನಡೆಸಿದರು.

ಭಾರತೀಯ ಹವಾಮಾನ ಇಲಾಖೆ (ಐಎಂಡಿ) ‘ತೌಕ್ತೆ’ ಚಂಡಮಾರುತ ಮೇ 18ರ ಮಧ್ಯಾಹ್ನ, ಸಂಜೆ ವೇಳೆಗೆ ಗಂಟೆಗೆ ಸುಮಾರು 175 ಕಿ.ಮೀ. ವೇಗದಲ್ಲಿ ಗುಜರಾತ್ ನ ಕರಾವಳಿಯ ಪೋರಬಂದರ್ ಮತ್ತು ನಲಿಯಾ ಸುತ್ತಮುತ್ತ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದೆ. ಇದರಿಂದಾಗಿ ಗುಜರಾತ್ ನ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವ ಕುರಿತಾಗಿ ಸಂಪೂರ್ಣ ಮಾಹಿತಿಯನ್ನು ಮೋದಿ ಪಡೆದುಕೊಂಡರು.

ಅಲ್ಲದೆ, ಕರಾವಳಿ ಜಿಲ್ಲೆಗಳಲ್ಲಿ ವಿಶೇಷವಾಗಿ ಜುನಗಢ್ ಮತ್ತು ಗಿರ್ ಸೋಮನಾಥ್ ಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಸೌರಾಷ್ಟ್ರ, ಕಚ್ ಮತ್ತು ದಿಯು ಜಿಲ್ಲೆಗಳಲ್ಲಿ ಅಂದರೆ ಗಿರ್ ಸೋಮನಾಥ್ ದಿಯು, ಜುನಗಢ್, ಪೋರಬಂದರ್, ದೇವಭೂಮಿ ದ್ವಾರಕ, ಅಮ್ರೇಲಿ, ರಾಜ್ ಕೋಟ್ ಮತ್ತು ಜಾಮ್ ನಗರದ ಕೆಲವು ಪ್ರದೇಶಗಳಲ್ಲಿ ಅಧಿಕದಿಂದ ಕೂಡಿದ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಸಮುದ್ರದ ಅಲೆಗಳು 2-3 ಮೀಟರ್ ಮೇಲೇಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ಅಧಿಕಾರಿಗಳು ಮುನ್ಸೂಚನೆ ನೀಡಿದರು.

ಇದರಿಂದ ಕರಾವಳಿ ಪ್ರದೇಶಗಳಾದ ಮರ‍್ಬಿ, ಕಚ್, ದೇವಭೂಮಿ ದ್ವಾರಕ ಹಾಗೂ ಜಾಮ್ ನಗರ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಲಿದೆ ಮತ್ತು ಪೋರಬಂದರ್, ಜುನಗಢ್, ದಿಯು, ಗಿರ್ ಸೋಮನಾಥ್, ಅಮ್ರೇಲಿ, ಭವನಗರಗಳಲ್ಲಿ ಅಲೆಗಳು ಒಂದರಿಂದ ಎರಡು ಮೀಟರ್ ಮೇಲೇಳವಿವೆ ಹಾಗೂ ಗುಜರಾತ್ ನ ಇತರೆ ಕರಾವಳಿ ಜಿಲ್ಲೆಗಳಲ್ಲಿ ಮೇ 18ರ ಮಧ್ಯಾಹ್ನ / ಸಂಜೆಯ ವೇಳೆಗೆ ವಾಯುಭಾರ ಕುಸಿತದ ಸಂದರ್ಭದಲ್ಲಿ ಅಲೆಗಳು 0.5 ರಿಂದ ಒಂದು ಮೀಟರ್ ಮೇಲೇಳುವ ಸಾಧ್ಯತೆ ಇರುವ ಕುರಿತಾಗಿ ಚರ್ಚಿಸಲಾಯಿತು.

ರಾಜ್ಯ ಸರ್ಕಾರಗಳು ಜನರನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಲು ಸಾಧ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹಿರಿಯ ಅಧಿಕಾರಿಗಳಿಗೆ ನರ‍್ದೇಶಿಸಿದರು. ಮತ್ತು ಒಂದು ವೇಳೆ ಚಂಡಮಾರುತದಿಂದಾಗಿ ವಿದ್ಯುತ್, ದೂರಸಂಪರ್ಕ, ಆರೋಗ್ಯ, ಕುಡಿಯುವ ನೀರು ಇತ್ಯಾದಿ ಅತ್ಯವಶ್ಯಕ ಸೇವೆಗಳಿಗೆ ಹಾನಿಯಾದರೆ ತಕ್ಷಣವೇ ಅವುಗಳನ್ನು ಮರುಸ್ಥಾಪಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಆಸ್ಪತ್ರೆಗಳಲ್ಲಿ ಕೋವಿಡ್-19 ನಿರ್ವ‍್ವಹಣೆಗೆ, ಲಸಿಕೆ ಶೈತ್ಯಾಗಾರ ಮತ್ತು ಇತರೆ ವೈದ್ಯಕೀಯ ಸೌಕರ್ಯ‍್ಯಗಳಿಗೆ ವಿದ್ಯುತ್ ಬ್ಯಾಕ್ ಅಪ್ ಮತ್ತು ಅಗತ್ಯ ಔಷಧಗಳ ದಾಸ್ತಾನಿಗೆ ಮತ್ತು ಯಾವುದೇ ಅಡೆತಡೆ ಇಲ್ಲದೆ ಆಕ್ಸಿಜನ್ ಟ್ಯಾಂಕರ್ ಗಳ ಸಂಚಾರಕ್ಕೆ ಯೋಜನೆ ರೂಪಿಸುವುದು ಸೇರಿದಂತೆ ವಿಶೇಷ ಸಿದ್ಧತಾ ಕ್ರಮಗಳನ್ನು ಕೈಗೊಳ್ಳುವಂತೆ ಕಂಟ್ರೋಲ್ ರೂಮ್ ಗಳು ದಿನದ 24 ಗಂಟೆಗಳು ಕಾರ್ಯ ನಿರ್ವಹಿಸಬೇಕು ಎಂದು ಅವರು ತಿಳಿಸಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!