- Advertisement -Newspaper WordPress Theme
ಪ್ರಮುಖ ಸುದ್ದಿಗಳುಪ್ರಾದೇಶಿಕತುಂಬು ಗರ್ಭಿಣಿಯನ್ನು ರಕ್ಷಿಸಿ ಮಾನವೀಯತೆ ಮೆರೆದ ಜೈಂಟ್ಸ್ ಗ್ರೂಪ್ ಯುವಕರ ತಂಡ

ತುಂಬು ಗರ್ಭಿಣಿಯನ್ನು ರಕ್ಷಿಸಿ ಮಾನವೀಯತೆ ಮೆರೆದ ಜೈಂಟ್ಸ್ ಗ್ರೂಪ್ ಯುವಕರ ತಂಡ

ಬೆಳಗಾವಿ : ರಾಜ್ಯದ ಹಲವಾರು ಪ್ರದೇಶಗಳಲ್ಲಿ ಅಬ್ಬರದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥಗೊಂಡಿದ್ದು, ಕೆಲ ಜನತೆ ನೀರಿನ ನಡುಗಡ್ಡೆಯಲ್ಲಿ ಸಿಲುಕಿಕೊಂಡಿರುವ ಘಟನೆಗಳು ಕೂಡಾ ನಾವು ನೋಡುತ್ತಿದ್ದೇವೆ. ಅದರಂತೆ ಬೆಳಗಾವಿ ನಗರದಲ್ಲಿ ಜಲಾವೃತವಾಗಿದ್ದ ಮನೆಯಲ್ಲಿ ಸಿಲುಕಿಕೊಂಡಿದ್ದ ತುಂಬು ಗರ್ಭಿಣಿಯನ್ನು ಸ್ಥಳೀಯರ ಸಹಾಯದೊಂದಿಗೆ ಜೈಂಟ್ಸ್ ಗ್ರೂಪ್​ ಯುವಕರ ತಂಡ ರಕ್ಷಿಸಿ ಆಸ್ಪತ್ರೆಗೆ ರವಾನಿಸಿ ಮಾನವೀಯತೆ ಮೆರೆದಿದ್ದಾರೆ.

ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಇಲ್ಲಿನ ಇಂದ್ರಪ್ರಸ್ಥ ನಗರದ ಸಾಕಷ್ಟು ಮನೆಗಳು ಜಲಾವೃತವಾಗಿದ್ದವು. ಅದೇ ಏರಿಯಾದಲ್ಲಿ ತುಂಬು ಗರ್ಭಿಣಿಯೊಬ್ಬರು ಮನೆಯಲ್ಲಿ ಸಿಲುಕಿಕೊಂಡಿದ್ದರು. ಈ ವೇಳೆ ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಜೈಂಟ್ಸ್ ಗ್ರೂಪ್ ತಂಡದ ಮದನ್ ಬಾಮ್ನೆ, ಸುನಿಲ್ ಮುತಗೇಕರ್, ಪ್ರತೀಕ್ ಗುರವ್ ಸೇರಿದಂತೆ ಯುವಕರ ತಂಡ ಗರ್ಭಿಣಿಯನ್ನು ರಕ್ಷಿಸಿ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿದ್ದಾರೆ.

ಯುವಕರಿಗೆ ಪರಿಸರ ಆಕರ್ಷಣೆ. ವಿಜಯಪುರದ ಅರಣ್ಯದಲ್ಲಿಹುಣ್ಣಿಮೆಯರಾತ್ರಿ ಆಯೋಜನೆ

ಯುವಕರ ಕಾರ್ಯಕ್ಕೆ ಅಲ್ಲಿನ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಜೈಂಟ್ಸ್ ಯುವಕರ ತಂಡ ಮಳೆಗಾಲದ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಹಲವಾರು ಜನರನ್ನು ಸ್ಥಳಾಂತರಿಸಿದೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!