- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯತಿಕೋಟಾ : ಅಧಿಕಾರಿಗಳಿಂದ ವಿವಿಧ ಕಾಮಗಾರಿಗಳ ಪರಿಶೀಲನೆ

ತಿಕೋಟಾ : ಅಧಿಕಾರಿಗಳಿಂದ ವಿವಿಧ ಕಾಮಗಾರಿಗಳ ಪರಿಶೀಲನೆ

ತಿಕೋಟಾ : ತಾಲೂಕಿನ ಬಾಬಾನಗರ ಗ್ರಾಮ ಪಂಚಾಯತಿಯಲ್ಲಿ ನರೇಗಾ ಮಾರ್ಗಸೂಚಿಯನ್ವಯವಾಗಿ ನಡೆಯುತ್ತಿರುವ ವಿವಿಧ ಕಾಮಗಾರಿಗಳನ್ನು ತಾಲೂಕು ಪಂಚಾಯತಿ ಐಇಸಿ ಸಂಯೋಜಕರು ಹಾಗೂ ತಾಂತ್ರೀಕ ಸಹಾಯಕ ಅಭಿಯಂತರರು ಶುಕ್ರವಾರ ಬೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಐಇಸಿ ಸಂಯೋಜಕರಾದ ಕಲ್ಲಪ್ಪ ನಂದರಗಿ ಮಾತನಾಡಿ ಸರ್ಕಾರ ಜಾರಿಗೆ ತಂದಿರುವ ನರೇಗಾ ಯೋಜನೆಯಡಿ ಬಾಬಾನಗರ ಗ್ರಾಮ ಪಂಚಾಯತಿಯಲ್ಲಿ ಒಳ್ಳೆಯ ಕೆಲಸಗಳಾಗುತ್ತಿದ್ದು, ಅಧಿಕಾರಿಗಳು & ಜನಪ್ರತಿನಿಧಿಗಳು ಇದೇ ರೀತಿ ಮುಂದಿನ ದಿನದಲ್ಲಿ ನರೇಗಾ ಯೋಜನೆಯಡಿ ಹೆಚ್ಚು ಕಾಮಗಾರಿ ಕೈಗೊಳ್ಳುವಂತೆ ಕೋರಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಪಂಚಾಯತ ಅಭಿವೃದ್ದಿ ಅಧಿಕಾರಿ ರೇಣುಕಾ ಸೋಲಾಪುರ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಆಯಿಷಾ ಯಳಾಪುರ, ಸದಸ್ಯರಾದ ಸಿದ್ಧಗೊಂಡ ರುದ್ರಗೌಡರ, ಟಿಎಇ ಚೇತನ ರಾಠೋಡ, ಬಿಎಫ್‌ಟಿ ಸಿದ್ರಾಯ ದಾಶ್ಯಾಳ ಗ್ರಾಮ ಪಂಚಾಯತಿಯ ನಾರಾಯಣ ಸಿಂಧೆ, ಜಾಕೀರಹುಸೇನ ಯಳಾಪುರ ಸೇರಿದಂತೆ ಇತರರು ಹಾಜರಿದ್ದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!