- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಡೋಣಿ ಹಳ್ಳದಲ್ಲಿ ಹರಿದು ಹೋದ ಯುವಕ

ಡೋಣಿ ಹಳ್ಳದಲ್ಲಿ ಹರಿದು ಹೋದ ಯುವಕ

ಬಸವನಬಾಗೇವಾಡಿ : ತಾಲೂಕಿನ ನೇಗಿನಾಳ-ಮುಳ್ಳಾಳ ಗ್ರಾಮದ ಮಾರ್ಗ ಮಧ್ಯದಲ್ಲಿರುವ ಡೋಣಿ ಹಳ್ಳದಲ್ಲಿ ಶುಕ್ರವಾರ ರಾತ್ರಿ ಎಂಟು ಗಂಟೆ ಸುಮಾರಿಗೆ ಒರ್ವ ಯುವಕ ಹರಿದುಕೊಂಡು ಹೋಗಿರುವ ಘಟನೆ ನಡೆದಿದೆ.

ಮುಳ್ಳಾಳ ಗ್ರಾಮದ ಇಬ್ಬರು  ಯುವಕರು ಬೈಕ್ ಮೇಲೆ ವಿಜಯಪುರದಿಂದ ತಮ್ಮ ಗ್ರಾಮಕ್ಕೆ ತೆರಳುವಾಗ ಬೈಕ್ ಹಿಂದೆ ಕುಳಿತಿದ್ದ ಮಂಜುನಾಥ ಸಿದ್ದನಗೌಡ ಪಾಟೀಲ (23) ಎಂಬ ಯುವಕ ನೀರಿನ ರಭಸಕ್ಕೆ ಹರಿದುಕೊಂಡು ಹೋಗಿದ್ದಾನೆ ಎನ್ನಲಾಗಿದೆ.

ಬೈಕ್ ಸವಾರ ಪಾರಾಗಿದ್ದು, ಇವರ ಹೆಸರು ತಿಳಿದು ಬಂದಿಲ್ಲ. ಸಂಜೆ ಈ ಭಾಗದಲ್ಲಿ ಜೋರಾದ ಮಳೆಯಾದ ಹಿನ್ನೆಲೆಯಲ್ಲಿ ಹಳ್ಳದಲ್ಲಿ ನೀರು ತುಂಬಿ ಹರಿದು ಹೋಗುತ್ತಿತ್ತು.

ಘಟನಾ ಸ್ಥಳಕ್ಕೆ ಮನಗೂಳಿ ಪಿಎಸೈ ಮಮದಾಪೂರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!