- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಡಬಲ್ ಮರ್ಡರ್ ಕೇಸ್ ಟ್ವಿಸ್ಟ್

ಡಬಲ್ ಮರ್ಡರ್ ಕೇಸ್ ಟ್ವಿಸ್ಟ್

ವಿಜಯಪುರ : ಬೇರೆ ಜಾತೀಯ ಯುವಕನನ್ನು ಪ್ರೀತಿಸಿದ ಕಾರಣಕ್ಕೆ ಬಾಲಕಿಯ ತಂದೆ  ಹಾಗೂ ಆಕೆಯ ಸಹೋದರ ಸೇರಿದಂತೆ, ಸ್ವಂತ ಮಗಳು ಹಾಗೂ ಆಕೆಯ ಪ್ರಿಯಕರನ್ನು ಭರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಗುಮ್ಮಟನಗರಿ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಗಡಿ ಗ್ರಾಮವಾದ ಸಲಾದಹಳ್ಳಿಯಲ್ಲಿ ಘಟನೆ ನಡೆದಿದ್ದು, ದೇವರಹಿಪ್ಪರಗಿ ತಾಲೂಕಿನ ಸಲಾದಹಳ್ಳಿ ಗ್ರಾಮದ ಯುವಕ ಬಸವರಾಜ ಬಡಿಗೇರ 19 ವರ್ಷ ಹಾಗೂ ಪಕ್ಕದ ಗ್ರಾಮ ಖಾನಾಫುರದ 18 ವರ್ಷದ ಯುವತಿ ದಾವಲಬಿ ಬಂದಗಿಸಾಬ್‌ ತಂಬದ ಕೊಲೆಯಾದವರು. ಯುವತಿ ದಾವಲಬಿ ತನ್ನ ಪ್ರಿಯಕರ ಬಸವರಾಜ ಬಡಿಗೇರ ಭೇಟಿಯಾಗಿದ್ದ ವೇಳೆ ಇಬ್ಬರನ್ನೂ ಒಟ್ಟಿಗೆ ಕಂಡ ಯುವತಿಯ ಕುಟುಂಬಸ್ಥರು ಇಬ್ಬರನ್ನೂ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಯುವತಿಯ ತಂದೆ ಹಾಗೂ ಆತನ ಅಳಿಯಂದಿರೂ ಕಲ್ಲು ಹಾಗೂ ಚಾಕು ಬಳಸಿ ಇಬ್ಬರನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಕಲಕೇರಿ ಠಾಣೆ ಪೊಲೀಸರು ಬರ್ಬರ ಹತ್ಯೆ ನಡೆಸಿದ ಯುವತಿ ತಂದೆಯ ಹಾಗೂ ಆತನ ಸಂಬಂಧಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ.

ಘಟನೆ ಹಿನ್ನೆಲೆ : ಕೊಲೆಯಾದ ಪ್ರಿಯಕರ ಬಸವರಾಜ್ ಹಾಗೂ ಪ್ರೀಯತಮೆ ದಾವಲಬಿ ಅಕ್ಕಪಕ್ಕದ ಹಳ್ಳಿಯವರು. ಬಸವರಾಜ್‌ ಸಲಾದಹಳ್ಳಿಯವ. ಯುವತಿ ಖಾನಾಪುರ ಗ್ರಾಮದವಳು. ಎರಡು ವರ್ಷಗಳ ಹಿಂದೆ ಯುವತಿ ದಾವಲಬಿ ಖಾನಾಪುರ ಗ್ರಾಮದಿಂದ ಸಲಾದಹಳ್ಳಿಯಲ್ಲಿರುವ ತನ್ನ ಅಜ್ಜನ ಮನೆಗೆ ಬಂದು ಇಲ್ಲೆ ವಾಸವಾಗಿದ್ದಳು. ಇದೇ ಗ್ರಾಮದಲ್ಲಿ ಆಟೋ ಚಾಲಕನಾಗಿದ್ದ ಬಸವರಾಜ್ ಯುವತಿಗೆ ಪರಿಚಯವಾಗಿತ್ತು. ಪರಸ್ಪರ ಅನ್ಯಕೋಮಿನವರಾದರೂ ಇಬ್ಬರ ಮಧ್ಯೆ ಈ ಹಿಂದೆ ಸ್ನೇಹ ಉಂಟಾಗಿ ಅದು ಪ್ರೇಮಾಂಕುರಕ್ಕೆ ಕಾರಣವಾಗಿತ್ತು. ಆದರೆ ಇವರಿಬ್ಬರ ಪ್ರೇಮಕ್ಕೆ ಯುವತಿ ಮನೆಯವರ ತೀವ್ರ ವಿರೋಧವಿತ್ತು. ಇಷ್ಟಾದರೂ ಆಟೋ ಡ್ರೈವರ್ ಬಸವರಾಜ್ ಹಾಗೂ ಯುವತಿ ದಾವಲಬಿ ನಡುವೆ ಪ್ರೀತಿ ಕಡಿಮೆಯಾಗಿರಲಿಲ್ಲ. ಆರು ತಿಂಗಳ ಹಿಂದೆ ಮನೆಯವರಿಗೆ ಈ ವಿಚಾರ ತಿಳಿದ ಬಳಿಕ ಇಬ್ಬರಿಗೂ ಎಚ್ಚರಿಕೆ ನೀಡಲಾಗಿತ್ತು. ಆದರೂ ಅವರ ಪ್ರೇಮ ಪಯಣ ಮುಂದುವರೆದಿತ್ತು. ಆಗಾಗಾ ಇಬ್ಬರೂ ಒಬ್ಬರಿಗೊಬ್ಬರು ಭೇಟಿಯಾಗುತ್ತಿದ್ದರು. ಅದೇ ರೀತಿ ನಿನ್ನೆಯೂ ಇಬ್ಬರು ಪ್ರೇಮಿಗಳು ಸಲಾದಹಳ್ಳಿ ಗ್ರಾಮದ ಹೊರ ಭಾಗದಲ್ಲಿ ಒಟ್ಟಿಗೆ ಇದ್ದರು. ಈ ವೇಳೆ ಸ್ಥಳಕ್ಕೆ ಬಂದ ಯುವತಿಯ ಅಜ್ಜ ಇಬ್ಬರನ್ನೂ ವಿಚಾರಣೆ ನಡೆಸಿದ್ದಾನೆ. ಬಳಿಕ ಯುವಕನನ್ನು ಗ್ರಾಮದಲ್ಲಿ ಸುತ್ತಾಡಿಸಿ ತಮ್ಮ ತೋಟಕ್ಕೆ ಕರೆದುಕೊಂಡು ಹೋಗಿ ಕಟ್ಟಿಹಾಕಿ ಹಲ್ಲೆ ಮಾಡಿದ್ದಾರೆ. ಈ ವಿಷಯ ತಿಳಿದ ಯುವಕನ ಕುಟುಂಬಸ್ಥರು ಸ್ಥಳಕ್ಕೆ ತೆರಳಿ ಮಗನನ್ನು ಬಿಡಲು ಮನವಿ ಮಾಡಿದ್ದಾರೆ. ಆದರೆ ಇದಕ್ಕೆ ಒಪ್ಪದ ಯುವತಿಯ ಅಜ್ಜ ಹಾಗೂ ಆಕೆಯ ಸಹೋದರ ಹಾಗೂ ಮಾವಂದಿರು ಯುವಕ ತಾಯಿ ಹಾಗೂ ಸಹೋದರನ ಮುಂದೆಯೇ ಆತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.

ಬಳಿಕ ಯುವತಿಯ ತಂದೆ ಬಂದಗಿಸಾಬ್ ಅವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಬಸವರಾಜ್ ಹಾಗೂ ದಾವಲಭಿ ಒಟ್ಟಿಗೆ ಹೊಲದಲ್ಲಿ‌ ಇರೋ‌ ವಿಚಾರವನ್ನು ತಿಳಿಸಿದ್ದಾರೆ. ಇದರಿಂದ ಕುಪಿತನಾದ ಬಂದಗಿಸಾಬ್ ಮಾರಕಾಸ್ತ್ರಗಳೊಂದಿಗೆ ಸ್ಥಳಕ್ಕೆ ಬಂದಿದ್ದಾನೆ. ಬಳಿಕ ಅಲ್ಲಿದ್ದ ಯುವಕನ ಸಂಬಂಧಿಕರಿಗೆ ಹೆದರಿಸಿದ್ದಾನೆ. ಅಲ್ಲದೆ ಯುವಕ ಬಸವರಾಜ್ ಬಡಿಗೇರ ಹಾಗೂ ಆತನ ಪುತ್ರಿ ದಾವಲಭೀಯನ್ನು ಥಳಿಸಿದ್ದಾನೆ. ಈ ವೇಳೆ ಬಸವರಾಜ್ ಕುಟುಂಬಸ್ಥರು ಎಷ್ಟೇ ಮನವಿ ಮಾಡಿದರೂ ಕೇಳದೆ ಅವರ ಮೇಲೂ ಹಲ್ಲೆ ಮಾಡಿದ್ದಾನೆ. ಬಳಿಕ ಬಸವರಾಜ್ ಮತ್ತು ದಾವಲಭೀ ಮೇಲೆ ಬಂದಗಿಸಾಬ್ ಹಾಗೂ ಆತನ ಅಳಿಯಂದಿರು ಸೇರಿ ಕಲ್ಲು ಎತ್ತು ಹಾಕಿ ಕೊಲೆ ಮಾಡಿದ್ದಾರೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಎಲ್ಲ ಘಟನೆಗಳು ಕೊಲೆಯಾದ ಬಸವರಾಜ್ ತಾಯಿ ಮಲ್ಲಮ್ಮ ಹಾಗೂ ಆತನ ಸಹೋದರ ಕಲ್ಯಾಣಕುಮಾರ್ ಮುಂದೆಯೇ ನಡೆದಿದೆ‌. ಘಟನೆ ಕುರಿತು ಯವತಿ ತಂದೆ ಬಂದಗಿಸಾಬ್, ಸಹೋದರ ದಾವಲ್‌ಪಟೇಲ್,  ಅಳಿಯರಾದ ಲಾಳೆಸಾಬ್, ಅಲ್ಲಾಪಟೇಲ್ ರಫೀಕ್  ಸೇರಿದಂತೆ ಐದು ಜನರ ವಿರುದ್ಧ ಕಲಕೇರಿ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿದೆ.

ಇನ್ನು ಸುದ್ದಿ ತಿಳಿದು ಸ್ಥಳಕ್ಕೆ ಕಲಕೇರಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ದೇಹಗಳನ್ನು ಸಿಂದಗಿ ತಾಲೂಕಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳಿಸಿದರು. ರಾತ್ರಿ ವೇಳೆಯಲ್ಲೇ ಮರಣೋತ್ತರ ಪರೀಕ್ಷೆ ಮಾಡಿ ಯುವತಿಯ ಶವವನ್ನು ಆಕೆಯ ಸಂಬಂಧಿಗಳು ಕೊಂಡೊಯ್ದು ರಾತ್ರಿಯೇ ಅಂತ್ಯ ಸಂಸ್ಕಾರ ನೆರವೇರಿಸಿದರು. ಇಂದು ಯುವಕ ಬಸವರಾಜ್ ಮೃತ ಪಡೆದು ಆತನ ಕುಟುಂಬಸ್ಥರು ಅಂತ್ಯ ಸಂಸ್ಕಾರ ನಡೆಸಿದರು.

ಇನ್ನು ಘಟನೆ ಬಳಿಕ ಸಿಂದಗಿ ತಾಲೂಕು ಆಸ್ಪತ್ರೆಗೆ ಆಗಮಿಸಿದ ದಲಿತ ಸಂಘಟನೆಗಳ ಮುಖಂಡರು, ಮೃತ ಯುವಕನ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿದರು. ಪೊಲೀಸರು ದಾಖಲಿಸಿರುವ ಎಫ್ ಐ ಆರ್ ನಲ್ಲಿ ಯುವತಿಯ ತಂದೆಯ ಹೆಸರು ಐದನೇ ಆರೋಪಿಯನ್ನಾಗಿ ಮಾಡಲಾಗಿದೆ. ಇದಕ್ಕೆ ನಮ್ಮ‌ ವಿರೋಧವಿದ್ದು, ಆತನ ಮೊದಲ ಆರೋಪಿಯಾಗಿದ್ದಾನೆ. ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದರು. ಪ್ರಕರಣದಲ್ಲಿ ಮೃತಪಟ್ಟ ಯುವಕ ದಲಿತ ಸಮುದಾಯಕ್ಕೆ ಸೇರಿದ ಕಾರಣ ಸರ್ಕಾರದಿಂದ ಆತನ ಕುಟುಂಬಕ್ಕೆ ನೀಡಬೇಕಾದ ಪರಿಹಾರ ನೀಡಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಬಡ ಕುಟುಂಬವಾಗಿರುವ ಬಸವರಾಜ್ ಕುಟುಂಬ ಘಟನೆಯಿಂದ ಆಘಾತಕ್ಕೆ ಒಳಗಾಗಿದೆ. ಆರೋಪಿಗಳನ್ನ ಕೂಡಲೇ ಬಂಧಿಸಬೇಕು. ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ. ಯುವತಿಯ ತಂದೆಯ ಪ್ರಮುಖ ಆರೋಪಿಯಾಗಿದ್ದು, ಪೊಲೀಸರು ಸರಿಯಾಗಿ ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.

ಡಬಲ್‌ ಮರ್ಡರ್‌ ಹಿನ್ನೆಲೆ ಸಲಾದಹಳ್ಳಿ ಗ್ರಾಮದಲ್ಲಿ ಭಯದ ವಾತಾವರಣ ಮನೆ ಮಾಡಿದೆ. ಎಸ್ಪಿ ಅನುಪಮ ಅಗರವಾಲ್‌ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ. ಗ್ರಾಮದಲ್ಲಿ ಬಿಗುವಿನ ವಾತಾರಣ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆ ಏರ್ಪಡಿಸಿದ್ದಾರೆ. ಪರಾರಿಯಾಗಿರುವ ಆರೋಪಿಗಳ ಪತ್ತೆಗಾಗಿ ಇಂಡಿ ವಿಭಾಗದ ಡಿವೈಎಸ್ಪಿ ಶ್ರೀಧರ ದೊಡ್ಡಿ ನೇತೃತ್ವದಲ್ಲಿ ಮೂರು ವಿಶೇಷ ತಂಡಗಳನ್ನು ಪೊಲೀಸ್ ಇಲಾಖೆ ರಚನೆ ಮಾಡಿದ್ದು, ವಿಜಯಪುರ, ಕಲಬುರಗಿ ಸೇರಿದಂತೆ ವಿವಿಧ ಭಾಗದಲ್ಲಿ ಆರೋಪಿಗಳ ಹುಡುಕಾಟ ನಡೆಸಿದ್ದಾರೆ.

ಹುಡುಗಿ ಮನೆಯವರು ಹೇಳ್ತಿರೋದೇನು..? : ಯುವಕ ಬಸವರಾಜ್ ಹಲವು ತಿಂಗಳಿನಿಂದ ನಮ್ಮ ಹುಡಗಿ ಬೆನ್ನು ಬಿದ್ದಿದ್ದ, 2 ತಿಂಗಳ ಹಿಂದೆ 2 ಸಲ ಅವನಿಗೆ ವಾರ್ನಿಂಗ್ ಮಾಡಿದ್ವಿ, ಅವರ ಕುಟುಂಬದವರ ಗಮನಕ್ಕು ತಂದಿದ್ವಿ, ಆದರೂ ಕೇಳಿರಲಿಲ್ಲ, ಅದಕ್ಕೆ ಇಷ್ಟೆಲ್ಲ ಆಯ್ತು ಎನ್ತಿದ್ದಾಳೆ. ಇನ್ನು ನಿನ್ನೆ ಶೌಚಾಲಯಕ್ಕೆ ಹೋಗ್ತಿನಿ ಎಂದು ಮಗಳು ಹೊರಗೆ ಹೋಗಿದ್ದಳು, ಬಹಳಾ ಹೊತ್ತಿನಿಂದ ಮನೆಗೆ ಬರಲೇ ಇಲ್ಲ, ಮಗಳು ಮನೆಗೆ ಬಂದಿಲ್ಲ ನೋಡಿಕೊಂಡು ಬಾ ಅಂತಾ ನಾನೇ ಮನೆಯಲ್ಲಿದ್ದವರಿಗೆ ಕಳುಹಿಸಿದ್ದೆ, ಅವರೆಲ್ಲ ವಾಪಸ್ ಆಗೋವಾಗ ಈ ಹತ್ಯೆಯ ಸುದ್ದಿ ನನ್ನ ಕಿವಿಗೆ ಬಿದ್ದಿದೆ, ನಂಗೆ ಇಷ್ಟೆ ಗೊತ್ತು, ನಿಮ್ಮ ಮಗನನ್ನ ಹದ್ದುಬಸ್ತಲ್ಲಿ ಇಡಿ ಅಂತಾ ಅವರು ಕುಟುಂಬದವರಿಗೆ ಬಹಳ ಸಲಾ ಹೇಳಿದ್ವಿ, ಆದ್ರೆ  ಹಾಗೇ ಮಾಡಲೇ ಇಲ್ಲಾ ಅಂತಾ ಮಾತನಾಡ್ತಿದ್ದಾಳೆ ದಾವಲಭಿ ತಾಯಿ.

ಜಾತಿ ವಿಚಾರದಲ್ಲಿ ಇಬ್ಬರ ಕೊಲೆಯಾಗಿರೋದು ಸಮಾಜ ತಲೆತಗ್ಗಿಸುವಂತೆ ಮಾಡಿದೆ. ದಲಿತ ಹುಡುಗನನ್ನ ಪ್ರೀತಿಸಿದಳು ಅನ್ನೋ ಕಾರಣಕ್ಕೆ ಹುಡುಗಿ ತಂದೆ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರೋದು ಮರ್ಯಾದಿ ಗೇಡು ಅಲ್ಲದೆ ಮತ್ತೇನು..!!? ಎಂಬುದು‌ ಪ್ರಜ್ಞಾವಂತ ಜನರ ಮಾತಾಗಿದೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!