- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಜ್ಞಾನಾರ್ಜನೆಗಾಗಿ ಸಾಹಿತ್ಯ ಓದಿ. ಜಗದೀಶ ಸಾಲಳ್ಳಿ

ಜ್ಞಾನಾರ್ಜನೆಗಾಗಿ ಸಾಹಿತ್ಯ ಓದಿ. ಜಗದೀಶ ಸಾಲಳ್ಳಿ

ಬಸವನಬಾಗೇವಾಡಿ: ಅಧುನಿಕ ಯುಗದಲ್ಲಿ ಯುವಕರು ಮೊಬೈಲ್‌ಗಳಂತ ವಸ್ತುಗಳಿಗೆ ಮಾರು ಹೋಗದೇ ಸಾಹಿತ್ಯದ ಪುಸ್ತಕಗಳ ಕಡೆಗೆ ಗಮನಹರಿಸಿ, ಅವುಗಳನ್ನು ಓದಿ ತಿಳಿದಾಗ ಮಾತ್ರ ಜ್ಞಾನಾರ್ಜನೆ ಹೆಚ್ಚಾಗಲು ಸಾಧ್ಯವೆಂದು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಜಗದೀಶ ಸಾಲಳ್ಳಿ ಹೇಳಿದರು.

 ಸ್ಥಳೀಯ ವಿಜಯಪುರ ರಸ್ತೆಯಲ್ಲಿನ ಕೇಶವ ನಗರದ ಜ್ಞಾನಭಾರತಿ ಪ್ರಾಥಮಿಕ ಶಾಲಾ ಆವರಣದಲ್ಲಿ, ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ತಾಲೂಕಾ ಘಟಕದ ನೇತೃತ್ವದಲ್ಲಿ, ಸಾಧಕರಿಗೆ ಸನ್ಮಾನ, ಚುಟುಕು ಕವಿಗೋಷ್ಠಿ ಹಾಗೂ ಚುಟುಕು ಸರಸ್ವತಿ, ಚುಟುಕು ರತ್ನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕನ್ನಡಿಗರು ಕರ್ನಾಟಕದ ಯಾವುದೇ ಮೂಲೆಯಲ್ಲಿದ್ದರು ಕನ್ನಡವನ್ನು ಬಳಸಿ, ಕನ್ನಡ ಭಾಷೆಯಲ್ಲಿಯೇ ಮಾತನಾಡಿದಾಗ ಕನ್ನಡಕ್ಕೆ ಹೆಚ್ಚಿನ ಶಕ್ತಿ ಬರುತ್ತದೆ. ನಾವು ಬೇರೆಡೆ ಹೋದಾಗ ವ್ಯವಹಾರಕ್ಕಾಗಿ ಅನ್ಯ ಭಾಷೆ ಇರಲಿ ಎಂದು ಹೇಳಿದರು.

 ಪತಂಜಲಿ ಯೋಗ ಪ್ರಭಾರಿ ಕಾಶೀನಾಥ ಅವಟಿ ಮಾತನಾಡಿ, ಪಟ್ಟಣದಲ್ಲಿ ಹೆಚ್ಚು-ಹೆಚ್ಚು ಸಾಹಿತ್ಯದ ಸಂಘಟನೆಗಳು ಬೆಳೆಯುತ್ತಿರುವ ಕಾರ್ಯ ಶ್ಲಾಘನೀಯವಾಗಿದ್ದು. ಸಾಹಿತ್ಯ ಪುಸ್ತಕ ಓದುವುದರಿಂದ ಮನುಷ್ಯನ ಮನಸ್ಸು ವಿಕಾಸಗೊಳ್ಳುತ್ತದೆ ಎಂದು ಹೇಳಿದರು.

 ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಲ.ರು.ಗೊಳಸಂಗಿ ಸಮಾರಂಭವನ್ನು ಉದ್ಘಾಟಿಸಿದರು. ನಿವೃತ್ತ ಪ್ರಾಧ್ಯಾಪಕ ಪಿ.ಎಲ್.ಹಿರೇಮಠ, ಎನ್.ಎಸ್.ಹೂಗಾರ, ಬಸವರಾಜ ಹಡಪದ ಮಾತನಾಡಿದರು.

ಶಿವಾಜಿ ಮೊರೆ, ನಿಂಗು ದಂಡಿನ ಸೇರಿದಂತೆ ವಿಜಯಪುರ, ಮುದ್ದೇಬಿಹಾಳ ಸೇರಿದಂತೆ ಇತರೆ ಕಡೆಗಳಿಂದ ಆಗಮಿಸಿದ ಚುಟುಕು ಕವಿ, ಕವಿತ್ರಿಯರು ಸ್ವರಚಿತ ಚುಟುಕು ಕವನ ವಾಚಿಸಿದರು.

ಸಂತೋಷ ಪಟೇದ ಪ್ರಾರ್ಥಿಸಿದರು, ಶಿಕ್ಷಕಿ ಅರುಂಧತಿ ಹತ್ತಿಕಾಳ, ಮಾಳಿಂಗರಾಯ ಕಡ್ಲಿಮಟ್ಟಿ ನಿರೂಪಿಸಿದರು, ಸುಮಂಗಲ ಹಿರೇಮಠ ವಂದಿಸಿದರು. ಭಾರತಿ ಗೊಂಗಡಿ (ಚುಟುಕು ಸರಸ್ವತಿ), ಸಂಗಮೇಶ ತಾಳಿಕೋಟಿ (ಚುಟುಕು ರತ್ನ) ಪ್ರಶಸ್ತಿ ನೀಡಿ ಗೌರವಿಸಿದರು, ಪೈಲ್ವಾನ ಶಿವಯೋಗಿ ಬಾಗೇವಾಡಿ, ಧಾರ್ಮಿಕ ಪೋಷಕ ಸಿಕಂದ್ರಪ್ಪ ಕೋಲಕಾರ ಅವರನ್ನು ಸನ್ಮಾನಿಸಿದರು.

ವರದಿ: ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!