- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಜನರ ಒಳಿತು ಮರೆತ ಭ್ರಷ್ಟರು. ರವಿ ಕೃಷ್ಣಾರೆಡ್ಡಿ ಆರೋಪ

ಜನರ ಒಳಿತು ಮರೆತ ಭ್ರಷ್ಟರು. ರವಿ ಕೃಷ್ಣಾರೆಡ್ಡಿ ಆರೋಪ

ವಿಜಯಪುರ : ಕರ್ನಾಟಕ ರಾಷ್ಟ್ರ ಸಮಿತಿ (ಕೆ.ಆರ್.ಎಸ್.) ಪಕ್ಷ ಹಮ್ಮಿಕೊಂಡಿರುವ “ಭ್ರಷ್ಟರೇ ಪವಿತ್ರ ರಾಜಕಾರಣ ಬಿಟ್ಟು ತೊಲಗಿ, ನಾಡ ಪ್ರೇಮಿಗಳೇ ಪ್ರಾಮಾಣಿಕ ರಾಜಕಾರಣಕ್ಕೆ ಮುಂದಾಗಿ” ಎಂಬ ಅಭಿಯಾನದ ಕಾರ್ಯಕರ್ತರುಗಳು ವಿಜಯಪುರ ನಗರಕ್ಕೆ ಆಗಮಿಸಿದರು.

ನಗರದ ತಾಲೂಕು ಕಚೇರಿಗೆ ಭೇಟಿ ನೀಡಿ, ಅಭಿಯಾನದ ನೇತೃತ್ವ ವಹಿಸಿರುವ ಪಕ್ಷದ ರಾಜ್ಯಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಮಾತನಾಡಿ, ರಾಜ್ಯದಲ್ಲಿ ಭ್ರಷ್ಟಾಚಾರವು ಮಿತಿ ಮೀರಿದ್ದು, ಸರ್ಕಾರಿ ಕಚೇರಿಗಳಲ್ಲಿ ರೈತರಿಗೆ ಮತ್ತು ಸಾಮಾನ್ಯ ಜನರಿಗೆ ಸಿಗಬೇಕಾದ ಕನಿಷ್ಠ ಸೇವೆಗಳೂ ಕೂಡ ಸಿಗುತ್ತಿಲ್ಲ, ಇದರಿಂದ ಜನರು ಬಹಳ ಬೇಸತ್ತಿದ್ದು, ಜನರು ಭ್ರಷ್ಟ ರಾಜಕಾರಿಣಿಗಳನ್ನು ತೊಲಗಿಸುವ ಕೆಲಸ ಮಾಡುತ್ತಿರುವ ಕೆಆರ್‌ಎಸ್ ಪಕ್ಷಕ್ಕೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಹಿಂದೂ ಹಬ್ಬಕ್ಕೆ ಮಾತ್ರ ನಿರ್ಭಂದವಾದ್ರೆ… ಶಾಸಕ ಯತ್ನಾಳ ಖಡಕ್ ಸೂಚನೆ

ರಾಜ್ಯದಲ್ಲಿ ಜೆಸಿಬಿ ಪಕ್ಷಗಳು ತಮ್ಮ ಜವಾಬ್ದಾರಿಯನ್ನು ಮರೆತು ಕೇವಲ ತಮ್ಮ ಸ್ವಹಿತಾಸಕ್ತಿಗಾಗಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ರಾಜ್ಯದ ಅಭಿವೃದ್ಧಿ ಮತ್ತು ಜನರ ಒಳಿತನ್ನು ಮರೆತಿದ್ದಾರೆ. ಕೇವಲ ಹಣಮಾಡುವುದೇ ತಮ್ಮ ಕೆಲಸ ಎಂದು ನಂಬಿದAತೆ ವರ್ತಿಸುತ್ತಿದ್ದು, ಅವರು ಬದಲಾಗಬೇಕು ಇಲ್ಲ ಅಧಿಕಾರ ಬಿಟ್ಟು ತೊಲಗಬೇಕು. ಪ್ರಾಮಾಣಿಕರು ರಾಜಕಾರಣಕ್ಕೆ ಮುಂದಾಗಬೇಕು ಇಲ್ಲದಿದ್ದರೆ ರಾಜ್ಯದ ಪರಿಸ್ಥಿತಿ ಅಧೋಗತಿಗೆ ತಲುಪಲಿದ್ದು ಸರಿಪಡಿಸಲಾಗದ ಸ್ಥಿತಿ ತಲುಪಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಲಕ್ಷಾಂತರ ಜನರ ತ್ಯಾಗ ಬಲಿದಾನದಿಂದ ಲಭಿಸಿರುವ ಸ್ವಾತಂತ್ರ‍್ಯವು ಹೀಗೆ ನಮ್ಮ ಶೋಷಣೆ ಆಗದಂತೆ ತಡೆಯಲು ನಮ್ಮ ಪಕ್ಷ ಹೋರಾಟ ನಡೆಸುತ್ತಿದ್ದು, ಈ ಹೋರಾಟದಲ್ಲಿ ನಾವು ಯಶಸ್ವಿಯಾಗುತ್ತೇವೆಂದು ಅಚಲವಾದ ನಂಬಿಕೆ ಇದೆ ಎಂದು ಭರವಸೆ ನೀಡಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!