- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಚಿವುಟಿ ಯಾಕೆ ಅಳ್ತಿ ಅಂತಾರ ಮಾಜಿ ಸಿಎಂ ಯಡಿಯೂರಪ್ಪ. ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪ

ಚಿವುಟಿ ಯಾಕೆ ಅಳ್ತಿ ಅಂತಾರ ಮಾಜಿ ಸಿಎಂ ಯಡಿಯೂರಪ್ಪ. ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪ

ವಿಜಯಪುರ : ಸಿಎಂ ಬಸವರಾಜ ಬೊಮ್ಮಾಯಿವರು, ಮಾಜಿ ಪ್ರಧಾನಿ ದೇವೆಗೌಡರ ಭೇಟಿ ಹಿನ್ನೆಲೆ ಪ್ರೀತಂಗೌಡ ಆಕ್ಷೇಪ ವಿಚಾರವಾಗಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತಾಗಿವಿಜಯಪುರ ನಗರದಲ್ಲಿ ಮಾತನಾಡಿದ ಶಾಸಕ ಯತ್ನಾಳ, ಪ್ರೀತಂಗೌಡರಿಗೆ ಕಸವಿಸಿಯಾಗೋದು ಸಹಸವಾಗಿದೆ. ಅವರು ಜೆಡಿಎಸ್ ವಿರುದ್ಧ ಹೋರಾಟ ಮಾಡಿ ಗೆದ್ದವರು ಎಂದ ಪಾಟೀಲ್,  ಬೊಮ್ಮಾಯಿಯವರು ದೇವೆಗೌಡರನ್ನು ಭೇಟಿಯಾಗಿರುವ ಬಗ್ಗೆ ನನಗೆ ಆಕ್ಷೇಪವಿಲ್ಲ,  ಮಾಜಿ ಪ್ರಧಾನಿಯವರನ್ನು ಭೇಟಿ ಮಾಡೋದು ತಪ್ಪೇನಲ್ಲ ಆದರೆ, ಸಿಎಂ ಬರೀ ದೇವೆಗೌಡರನ್ನಷ್ಟೇ ಭೇಟಿಯಾಗಿದ್ದು ಸರಿಯಲ್ಲ. ಸಿಎಂ ಬೊಮ್ಮಾಯಿಯವರು ಗೌರವಯುತವಾಗಿ ಎಲ್ಲ ಮಾಜಿ ಸಿಎಂಗಳ ಮನೆಗೆ ಹೋಗಿ ಬಂದಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ, ದೇವೆಗೌಡರ ಮನೆಗಷ್ಟೇ ಹೋಗಿದ್ದರಿಂದ ಈ ಸಮಸ್ಯೆ ಉದ್ಭವಿಸಿದೆ ಎಂದು ಹೇಳಿದರು.

ಭೇಟಿಯ ಹಿಂದೆ ರಾಜಕೀಯ ತಂತ್ರಗಾರಿಕೆ ಇದೆಯಾ ಎಂಬ ಮಾಧ್ಯಮದವರ ಪ್ರಶ್ನೆಗೆ ಯತ್ನಾಳ್ ಪ್ರತಿಕ್ರಿಸಿದ ಯತ್ನಾಳ, ಸಿಎಂ ಬೊಮ್ಮಾಯಿಗೆ  ಸರ್ಕಾರ ನಡೆಸಲು ಆಶ್ರಯ ಬೇಕಿದೆ, ಮಾಜಿ ಸಿಎಂ ಬಿಎಸ್ವೈ ಮಲಗಿದ್ದ ಮಗುವನ್ನ ಚಿವುಟಿ ಅಳುವಂತೆ ಮಾಡ್ತಾರೆ, ಯಾಕೇ ಆನಂದು ಯಾಕೆ ಅಳ್ತೀಯಾ… ಯಾಕೇ ರೇಣುಕೂ… ಯಾಕೇ ಅಳ್ತೀಯಾ… ಯಾಕೇ ಪ್ರೀತಂ ಯಾಕೇ ಅಳ್ತೀಯಾ ಎಂದು ಚಿವುಟಿ ಕೇಳ್ತಾರೆ, ಬೊಮ್ಮಾಯಿ ಬೈದ್ರು ಅಂದಾಗ, ಅವ್ರು ಯಾಕೇ ಬೈದ್ರಿ ಅಂತಾ ಮತ್ತೆ ಬೊಮ್ಮಾಯಿಗೆ ಕೇಳಿ ಚಿವುಟುತ್ತಾರೆ ಎಂದು ಪರೋಕ್ಷವಾಗಿ ವಾಗ್ದಾಳಿ ಯತ್ನಾಳ್ ವಾಗ್ದಾಳಿ ನಡೆಸಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!