- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಗ್ರಾ.ಪಂ. ಸದಸ್ಯರೊಬ್ಬರ ಮೇಲೆ ಪಿಡಿಒ ದೂರು

ಗ್ರಾ.ಪಂ. ಸದಸ್ಯರೊಬ್ಬರ ಮೇಲೆ ಪಿಡಿಒ ದೂರು

ವಿಜಯಪುರ : ವಸತಿ ಯೋಜನೆಗಳಿಗೆ ಜಿಪಿಎಸ್ ಅಳವಡಿಸಲು ಅಡ್ಡಿಪಡಿಸಿದ್ದಲ್ಲದೇ,  ತಮ್ಮ ವಿರುದ್ಧ ಹಲ್ಲೆಗೆ ಯತ್ನ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಆರೋಪ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರ ಮೇಲೆ  ಗ್ರಾಮಾಭಿವೃದ್ಧಿ ಅಧಿಕಾರಿ (ಪಿಡಿಒ) ಯೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಿಂದಗಿ ತಾಲೂಕಿನ ಮಣೂರು ಗ್ರಾಮ ಪಂಚಾಯಿತಿ ಸದಸ್ಯ ವಸಂತ ಲೇಸು ರಾಠೋಡ ಎಂಬುವರ ಮೇಲೆ ಅದೇ ಪಂಚಾಯಿತಿಯ ಪಿಡಿಒ ಅಕ್ಕಮಹಾದೇವಿ ಅಂಗಡಿ ಎಂಬುವರು ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರಿನಲ್ಲಿ ಏನಿದೆ ? : ಮಾ.1ರಂದು ಸಂಜೆ 5ಗಂಟೆ ಸುಮಾರಿಗೆ ಮಣೂರು ಗ್ರಾಮ ಪಂಚಾಯಿತಿಗೆ ಆಗಮಿಸಿದ್ದ ಗ್ರಾಮ ಸದಸ್ಯ  ವಸಂತ ರಾಠೋಡ ಪಿಡಿಒ ಅಕ್ಕಮಹಾದೇವಿ ಅಂಗಡಿ ವಿರುದ್ಧ ವಾಗ್ದಾದ ನಡೆಸಿದ್ದಾರೆ. ವಸತಿ ಯೋಜನೆಗಳ ಮನೆಗೆ ಜಿಪಿಎಸ್ ಅಳವಡಿಸಬಾರದು ದೂರು ವಾಗ್ದಾದ ನಡೆಸಿದ್ದಲ್ಲದೇ ಮಹಿಳೆ ಎಂದು ಲೆಕ್ಕಿಸದೇ ಅವರ ಮೇಲೆ ಅವಾಚ್ಚ ಶಬ್ದಗಳಿಂದ ನಿಂದಿಸಿದ್ದಾರೆ. ಅಷ್ಟೇ ಅಲ್ಲದೇ ಕಲ್ಲಿನಿಂದ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಕೆಲ ಗ್ರಾಮಸ್ಥರು ಪಿಡಿಒ ಪರ‌ ನಿಂತು ಹಲ್ಲೆ ತಪ್ಪಿಸಿದ್ದಾರೆ. ಪಿಡಿಒ ಕಳೆದ ಎರಡು ವರ್ಷಗಳಿಂದ ಮಣೂರ ಗ್ರಾಪಂ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ರೀತಿ ಸದಸ್ಯ ರಾಠೋಡ ಜತೆ ಹಲವು ಬಾರಿ ಗ್ರಾಮ ಪಂಚಾಯಿತಿ ಕೆಲಸದ ವಿಚಾರವಾಗಿ ವಾಗ್ವಾದ ನಡೆದಿದೆ.‌ ಆದರೆ ಮಾ.1ರಂದು ವಾಗ್ವಾದ ತಾರಕ್ಕೆ ಏರಿದೆ. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ವಸಂತ ರಾಠೋಡ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪಿಡಿಒ ಅಕ್ಕಮಹಾದೇವಿ ಅಂಗಡಿ ಲಿಖಿತ ದೂರು ನೀಡಿದ್ದಾರೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!