- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಗ್ರಾ.ಪಂ. ಕಾರ್ಯಾಲಯಕ್ಕೆ ಬೀಗ. ಮಹಿಳೆಯರಿಂದ ಪ್ರತಿಭಟನೆ

ಗ್ರಾ.ಪಂ. ಕಾರ್ಯಾಲಯಕ್ಕೆ ಬೀಗ. ಮಹಿಳೆಯರಿಂದ ಪ್ರತಿಭಟನೆ

ದೇವರಹಿಪ್ಪರಗಿ : ಬಡಕುಟುಂಬಗಳ ಬದುಕಿಗೆ ಕಂಟಕವಾಗಿರುವ ಸರ್ಕಾರಿ ಸರಾಯಿ ಅಂಗಡಿಯ ಪರವಾನಗಿ ರದ್ದು ಪಡಿಸಿ, ಶಾಶ್ವತವಾಗಿ ಮುಚ್ಚುವಂತೆ ಆಗ್ರಹಿಸಿ ಮಹಿಳೆಯರಿಂದ ಗ್ರಾಮ ಪಂಚಾಯತ ಕಾರ್ಯಾಲಯಕ್ಕೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಯಿತು.

ತಾಲ್ಲೂಕಿನ ಮುಳಸಾವಳಗಿ ಗ್ರಾಮ ಪಂಚಾಯತ ಕಾರ್ಯಾಲಯದ ಆವರಣಕ್ಕೆ ಶುಕ್ರವಾರ ಆಗಮಿಸಿದ ಗ್ರಾಮದ ನೂರಾರು ಮಹಿಳೆಯರು ಸರ್ಕಾರಿ ಸರಾಯಿ ಅಂಗಡಿಯಿಂದ ತಮ್ಮ ಕುಟುಂಬದ ಸು:ಖ, ಶಾಂತಿ ಮಾಯವಾಗಿದ್ದು, ಸರಾಯಿ ಅಂಗಡಿ ರದ್ದುಪಡಿಸಲು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಬಸಮ್ಮ ನಾಯ್ಕೋಡಿ ಹಾಗೂ ಶಾಂತಾಬಾಯಿ ಸಾಲೋಡಗಿ ಮಾತನಾಡಿ, ಗ್ರಾಮದಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಯಾವುದೇ ಸರಾಯಿ ಅಂಗಡಿ ಇರಲಿಲ್ಲ. ಆಗ ಗ್ರಾಮ ಶಾಂತಮಯವಾಗಿತ್ತು. ಯಾವಾಗ ಸರ್ಕಾರದ ಸರಾಯಿ ಅಂಗಡಿ ಆರಂಭಗೊಂಡಿತೋ, ಅಂದಿನಿಂದ ಗ್ರಾಮದಲ್ಲಿ ನೆಮ್ಮದಿ ಅನ್ನುವುದೇ ಮಾಯವಾಗಿದೆ. ಪ್ರತಿ ಕುಟುಂಬದಲ್ಲಿ ಕುಡಿತಕ್ಕೆ ಒಳಗಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ವರ್ಷ ಯುವಕನೊಬ್ಬ ಕುಡಿದು ಅಂಗಡಿಯ ಮುಂದೆಯೇ ಮೃತಪಟ್ಟ ಘಟನೆ ಜರುಗಿದೆ. ಹೀಗಿರುವಾಗ ಗ್ರಾಮಕ್ಕೆ ಸರಾಯಿ ಅಂಗಡಿ ಬೇಕೆ? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

“ಗ್ರಾಮದ ಸರಾಯಿ ಅಂಗಡಿ ರದ್ದುಪಡಿಸುವ ಮಹಿಳೆಯರ ಬೇಡಿಕೆಯನ್ನು ನಮ್ಮ ಉನ್ನತ ಮಟ್ಟದ ಅಧಿಕಾರಿಗಳಾದ ತಾಲ್ಲೂಕು ಪಂಚಾಯಿತಿ, ಅಬಕಾರಿ ಇಲಾಖೆ, ಪಂಚಾಯತ ಸಾಮಾನ್ಯ ಸಭೆಯಲ್ಲಿ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುತ್ತದೆ”.

ಮಹೇಶ ಬಗಲಿ. ಪಿಡಿಓ ಗ್ರಾ.ಪಂ. ಮುಳಸಾವಳಗಿ

ಕೋವಿಡ್ ನಿಂದಾಗಿ ಲಾಕ್ ಡೌನ್ ಹಾಗೂ ಹಬ್ಬದ ದಿನಗಳಲ್ಲಿ ಹೆಚ್ಚಿನ ಬೆಲೆಗೆ ಸರಾಯಿ ಮಾರಾಟಕ್ಕೆ ಮುಂದಾಗುವ ಈ ಅಂಗಡಿಯಿಂದ ಬಡಕುಟುಂಬಗಳ ಪುರುಷರು ತಾವು ದುಡಿದ ಹಣವನ್ನೇಲ್ಲಾ ಕುಡಿತಕ್ಕೆ ಖರ್ಚು ಮಾಡುತ್ತಿದ್ದಾರೆ, ಮಕ್ಕಳು ಸೇರಿದಂತೆ ಕುಟುಂಬಸ್ಥರು ಉಪವಾಸ ಇರುವಚಿತಹ ಘಟನೆಗಳು ಉಂಟಾಗುತ್ತಿದೆ. ನಾವು ಹೆಣ್ಣುಮಕ್ಕಳು ದುಡಿದದ್ದನ್ನು ಸಹ ಗಂಡಸರು ಕಸಿದುಕೊಂಡು ಕುಡಿಯಲು ಖರ್ಚು ಮಾಡುತ್ತಿದ್ದಾರೆ ಆದ್ದರಿಂದ ಈ ಕೂಡಲೇ ನಮ್ಮ ಬಡಕುಟುಂಬಗಳಿಗೆ ಕಂಟಕವಾದ ಸರ್ಕಾರಿ ಸರಾಯಿ ಅಂಗಡಿ ಪರವಾನಗಿಯನ್ನು ಕೂಡಲೇ ರದ್ದುಪಡಿಸಿ ಗ್ರಾಮದಿಂದ ತೆರವುಗೊಳಿಸಬೇಕು ಎಂದು ಆಗ್ರಹಿಸಿದ ಮಹಿಳೆಯರು, ಒಂದು ವೇಳೆ ಯಾವುದೇ ಕ್ರಮ ಕೈಗೊಳ್ಳದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರಹೋರಾಟ ನಡೆಸುವುದಾಗಿ ಎಚ್ಚರಿಸಿ, ಪಿಡಿಓ ಮಹೇಶ ಬಗಲಿ ಅವರಿಗೆ ಮನವಿ ಸಲ್ಲಿಸಿದರು.

ಈ ಪ್ರತಿಭಟನೆಯಲ್ಲಿ ಭೋರಮ್ಮ ರೂಗಿ, ಮಹಾದೇವಿ ತಳವಾರ, ಗೀತಾ ನಾಯ್ಕೋಡಿ, ಸತ್ಯಮ್ಮ ಬೂದಿಹಾಳ, ಯಮನವ್ವ ತಳವಾರ, ಚನ್ನಮ್ಮ ಬೂದಿಹಾಳ, ಸರಸ್ವತಿ ನಾಟೀಕಾರ, ಶೋಭಾ ನಾಟೀಕಾರ, ಸಾಬವ್ವ ಗಬ್ಬೂರ, ಜಯಶ್ರೀ ಸಿಂದಗಿ, ಕಮಲಾಬಾಯಿ ತಳವಾರ, ಜ್ಯೋತಿ ನಾಯ್ಕೋಡಿ, ಯಲ್ಲಮ್ಮ ರಬಿನಾಳ, ಬಾಳವ್ವ ನಾಗಠಾಣ, ಭಾಗವ್ವ ಕಲಬುರ್ಗಿ, ಸವಿತಾ ಖ್ಯಾಡಗಿ, ಸುನಂದಾ ಬಾಗೇವಾಡಿ ಸೇರಿದಂತೆ ನೂರಕ್ಕೂ ಹೆಚ್ಚು ಮಹಿಳೆಯರು ಬಾಗಿಯಾಗಿದ್ದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!