- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಗೋಮಯ ನಮ್ಮನ್ನು ಶ್ರೀಮಂತಗೊಳಿಸುತ್ತದೆ

ಗೋಮಯ ನಮ್ಮನ್ನು ಶ್ರೀಮಂತಗೊಳಿಸುತ್ತದೆ

ಬಸವನಬಾಗೇವಾಡಿ: ರೈತರು ಸಧೃಢರಾಗಬೇಕಾದರೆ ಗೊಬ್ಬರ, ಬೀಜ, ಔಷಧಿಗಳನ್ನು ಮನೆಯಲ್ಲಿ ತಯಾರಿಸಿಕೊಳ್ಳುವುದ್ದರಿಂದ ಸದೃಢರಾಗಲು ಶ್ರೀಮಂತರಾಗಲು ಸಾಧ್ಯವಾಗುತ್ತದೆ ಎಂದು ಹಿಂದೂ ಧಾರ್ಮಿಕ ದತ್ತಿ ನಿರ್ದೇಶಕ ಡಾ. ಬಸವರಾಜ ಚವ್ಹಾಣ ಹೇಳಿದರು.

 ಪಟ್ಟಣದ ಹನುಮಾನ ಮಂದಿರದಲ್ಲಿ ಸಂಜೆ ಗೋಧೂಳಿ ಮಹೊರ್ತದಲ್ಲಿ ಗೋವುವನ್ನು ದೇವಸ್ಥಾನದಲ್ಲಿ ಕರೆ ತಂದು ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ಅವರು ಪೂಜೆಗೈದರು. ಈ ಸಂರ್ಭದಲ್ಲಿ ಮಾತನಾಡಿದ ಅವರು ಸಗಣೆ ತಟ್ಟಿದರೆ ಕುಳ್ಳಾದೆ, ಸುಟ್ಟರೆ ವಿಭೂತಿಯಾದೆ ಎನ್ನುವ ಹಾಗೇ ಗೋವಿನಿಂದ ಸಾಕಷ್ಟು ಆದಾಯವಿದೆ ಅಕಳನ್ನು ಸಾಕಿ, ಬೆಳಸಿ, ಪೋಷಣೆಗೈಯಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯಯಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಗೋವನ್ನು ಪೂಜಿಸಬೇಕು ಎಂದು ಹೇಳಿದರು.

 ಈ ಸಂದರ್ಭದಲ್ಲಿ ನ್ಯಾಯವಾದಿ ಹಿಂದು ಜಾಗರಣೆ ವೇದಿಕೆಯ ಮುಖಂಡ ರಾಚಯ್ಯ ಗಣಕುಮಾರಮಠ ಮಾತನಾಡಿ, ಗೋವಿನ ಮೂತ್ರ, ಅದರ ಗಜಲು, ಹಾಲಿನ ಉತ್ಪನ್ನಗಳಿಗೆ ಸಾಕಷ್ಟು ಬೇಡಿಕೆಯಿದ್ದು ಅದ್ದರಿಂದ ರೈತರು ಕೃಷಿ ಚಟುವಟಿಕೆಯೊಂದಿಗೆ ಆಕಳನ್ನು ಸಾಕಿ ಸಲುವಿದರೆ ನಮ್ಮ ಜಮೀನಿಗೋ ಉಪಯೋಗವಾಗಲಿದೆ, ಈ ನಿಟ್ಟಿನಲ್ಲಿ ಆಕಳವನ್ನು ಕಸಾಯಿಖಾನೆಗೆ ಕೊಡದೇ ಅದನ್ನು ಪೂಜ್ಯನೀಯ ಭಾವನೆಯಿಂದ ನೋಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ, ರಾಜಶೇಖರ ಪಾಟೀಲ, ವಿಜಯ ಮದ್ರಾಸ ಮಾತನಾಡಿದರು. ಈ ಸಂದರ್ಭದಲ್ಲಿ ಕೆ.ಪಿ.ಗಾಣಗೇರ, ವಿವೇಕಾನಂದ ಕಲ್ಯಾಣಶೆಟ್ಟಿ, ವಿಠ್ಠಲ ಕುಲಕರ್ಣಿ, ಪರಶುರಾಮ ಜಮಖಂಡಿ, ಈಶ್ವರ ಪರಮಗೊಂಡ, ವಿನೂತ ಕಲ್ಲೂರ, ಶಿವಾನಂದ ತೋಳನೂರ,ಕಿರಣ ಕುಲಕರ್ಣಿ, ಸತೀಶ ಕ್ವಾಟಿ, ರಾಘವೇಂದ್ರ ಹಿಪ್ಪರಗಿ, ಪರಶುರಾಮ ಕುರಾಡೆ, ರಾಘು ಕುಲಕರ್ಣಿ, ರಮೇಶ ಇನಾಮದಾರ, ಅಭಿಷೇಕ ಪವಾರ, ಸಂಜೀವ ಕುಲಕರ್ಣಿ, ಸಾವಿತ್ರಿ ಕಲ್ಯಾಣಶೆಟ್ಟಿ ಸೇರಿದಂತೆ ಇತರರು ಇದ್ದರು.

ವರದಿ : ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!