- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಗೆದ್ದು ಬಂದ ಮೇಲೆ ಎಲ್ಲರೂ ನಮ್ಮವರೇ. ಬಿಜೆಪಿ ಶಾಸಕ ನಡಹಳ್ಳಿ ಹೇಳಿಕೆ

ಗೆದ್ದು ಬಂದ ಮೇಲೆ ಎಲ್ಲರೂ ನಮ್ಮವರೇ. ಬಿಜೆಪಿ ಶಾಸಕ ನಡಹಳ್ಳಿ ಹೇಳಿಕೆ

ಮುದ್ದೇಬಿಹಾಳ : ಮೂಲಭೂತ ಸೌಕರ್ಯದಿಂದ ವಂಚಿತಗೊಂಡಿದ್ದ ಪುನರ್ವಸತಿ ಗ್ರಾಮಗಳನ್ನು ಅಭಿವೃದ್ಧಿ ಪಡಿಸುವುದಾಗಿ ಚುನಾವಣೆ ಸಂದರ್ಭದಲ್ಲಿ ಹೇಳಿದಂತೆ ಸಧ್ಯ ಮೊದಲ ಹಂತದಲ್ಲಿ 25 ಕೋಟಿ ಮಂಜುರಾತಿ ಪಡೆದು ಕಾಮಗಾರಿ ಉದ್ಘಾಟಿಸುವ ಮೂಲಕ ನುಡಿದಂತೆ ನಡೆದಿದ್ದೇನೆ ಎಂದು ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಅಧ್ಯಕ್ಷ ಹಾಗೂ ಶಾಸಕ ಎ.ಎಸ್ ಪಾಟೀಲ (ನಡಹಳ್ಳಿ) ಹೇಳಿದರು.

ತಾಲೂಕಿನ ರಕ್ಕಸಗಿ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಗುರುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ರಕ್ಕಸಗಿ ಸೇರಿದಂತೆ ಕೃಷ್ಣಾ ನದಿ ತೀರದ ಪುನರ್ವಸತಿ ಗ್ರಾಮಗಳ ಸಿಸಿ ರಸ್ತೆ, ಚರಂಡಿ, ಶುದ್ಧ ಕುಡಿಯುವ ನೀರು, ಶಾಲಾ ಕಟ್ಟಡ, ಸಮೂದಾಯ ಭವನ, ಅಂಗನವಾಡಿ ಕಟ್ಟಡ ಸೇರಿದಂತೆ ಸಮಗ್ರ ಅಭಿವೃದ್ಧಿಗಾಗಿ 120 ಕೋಟಿ ಕೋಟಿಗಳ ವಿಶೇಷ ಅನುದಾನ ನೀಡಬೇಕು ಎಂದು ಸರಕಾರಕ್ಕೆ ಪ್ರಸ್ಥಾವನೆ ಸಲ್ಲಿಸಲಾಗಿತ್ತು. ಆದರೇ ಕೋರೊನಾ ಹಿನ್ನೇಲೆಯಲ್ಲಿ ಹೊಡೆತದ ಪೀಣಾಮ ಮೊದಲ ಹಂತದಲ್ಲಿ 40 ಕೋಟಿ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಹೇಳಿದ್ದರು ಅದರಂತೆ ಮೊದಲ ಹಂತದಲ್ಲಿ 235 ಕೋಟಿ ವಿಶೇಷ ಅನುದಾನ ಮಂಜುರಾತಿ ನೀಡಿ ಟೆಂಡೆರ್ ಪ್ರಕ್ರೀಯೆಯೂ ಕೂಡ ಮುಕ್ತಾಯಗೊಂಡು ಸಧ್ಯ ಕಾಮಗಾರಿಗಳಿಗೆ ಉದ್ಘಾಟನೆಗೊಳ್ಳುತ್ತಿರುವುದು ಹೆಮೆಯ ವಿಷಯವಾಗಿದೆ ಎಂದರು.

ಚುನಾವಣೆಗಳು ಬಂದಾಗ ಮಾತ್ರ ರಾಜಕಾರಣ ಮಾಡಬೇಕು ಗೆದ್ದು ಬಂದ ಮೇಲೆ ಎಲ್ಲರೂ ನಮ್ಮವರೇ ಎಂದು ಒಗ್ಗಟ್ಟಿನ ಮಂತ್ರ ತಿಳಿಸಿದ ಅವರು, ಮತಕ್ಷೇತ್ರವನ್ನು ಅಭಿವೃದ್ಧಿ ಪಡಿಸುವುದೇ ನನ್ನ ಕನಸಾಗಿದೆ. ಅದರಂತೆ ಸಧ್ಯ 12 ಲಕ್ಷ ವೆಚ್ಚದಲ್ಲಿ ಅಂಬೇಡ್ಕರ ಭವನ ಹಾಗೂ 12 ಲಕ್ಷ ವೆಚ್ಚದಲ್ಲಿ ಬಾಬು ಜಗಜೀವನರಾವ ಅವರ ಭವನ ನಿರ್ಮಾಣ ಮಾಡಲಾಗುವುದು. ರಕ್ಕಸಗಿ ಭಾಗದ ಜನರು ನನಗೆ ಅತಿ ಹೆಚ್ಚು ಮತ ನೀಡಿ ಗೆಲ್ಲಿಸಿದ ನಿಮ್ಮ ಋಣ ನನ್ನ ಮೇಲಿದೆ, ಮುಂದಿನ 10 ವರ್ಷ ರಾಜಕಾರಣದಲ್ಲಿರಬೇಕು ಎಂಬ ನನ್ನ ಉದ್ದೇಶವಿದೆ ಆ ಹತ್ತು ವರ್ಷದಲ್ಲಿ ಈ ಮತಕ್ಷೇತ್ರವನ್ನು ಮಾದರಿಯ ಕ್ಷೇತ್ರವನ್ನಾಗಿ ಮಾಡಲಾಗುವುದು ಭರವಸೆ ನೀಡಿದರು.

ಉದ್ಯೋಗ ಭರವಸೆ : ಜತೆಗೆ ನನ್ನ ಸುಪುತ್ರ ನೇತೃತ್ವದಲ್ಲಿ ಬಸರಕೋಡ ಗ್ರಾಮದಲ್ಲಿ ಸುಮಾರು 80 ಎಕರೆ ಭೂಮಿಯಲ್ಲಿ 350 ಕೋಟಿ ವೆಚ್ಚದಲ್ಲಿ ಇಥಿನೈಲ್ ಕಾರ್ಖಾನೆ ಪ್ರಾರಂಭಿಸಿ ಈ ಭಾಗದಲ್ಲಿ ಸುಮಾರು 10 ಸಾವಿರ ಕೋಟಿ ಉದ್ಯೋಗ ಸೃಷ್ಠಿಸಲಾಗುವುದು. ಜತೆಗೆ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಇನ್ನೋಂದು ಕಾರ್ಖಾನೆ ಅತೀ ಶೀಘ್ರದಲ್ಲಿಯೇ ಪ್ರಾರಂಭಿಸಲಾಗುವುದು. ರೈತರಿಗೆ ಅನುಕುಲವಾಗುವ ಕೃಷಿ ಆದಾರಿತ ಹೈನುಗಾರಿಕೆ, ಮೀನುಗಾರಿಕೆ, ತೋಟಗಾರಿಕೆ ಸೇರಿದಂತೆವಿವಿಧ ರೀತಿಯ ಯೋಜನೆಗಳನ್ನು ರೂಪಿಸಲಾಗುವುದು. 1 ಸಾವಿರದ 278 ಕೋಟಿ ವೆಚ್ಚದಲ್ಲಿ ತಾಲೂಕಿನ ಎಲ್ಲ ಗ್ರಾಮಗಳ ಪ್ರತಿ ಮನೆ ಮನೆಗೂ ನೀರು ಪೂರೈಕೆ ಮಾಡಲು ತಿರ್ಮಾನಿಸಿದೆ ಅದು ಕೂಡ ಸದಸ್ಯದಲ್ಲಿಯೇ ಕಾಮಗಾರಿ ಪ್ರಾರಂಭಗೊಳ್ಳಿದೆ ಎಂದರು.

ಈ ವೇಳೆ ಹಿರಿಯ ಮುಖಂಡರಾದ ಎಂ.ಎಸ್ ಪಾಟೀಲ, ಶಿವಶಂಕರಗೌಡ ಹಿರೇಗೌಡರ, ಮಲಕೇಂದ್ರಾಯಗೌಡ ಪಾಟೀಲ, ಡಿ ಸಿಸಿ ಬ್ಯಾಂಕ ನಿರ್ದೇಶಕ ಸೋಮನಗೌಡ ಬಿರಾದಾರ, ರಕ್ಕಸಗಿ ಗ್ರಾಪಂ ಉಪಾಧ್ಯಕ್ಷ ಅಕ್ಷಯ ನಾಡಗೌಡ, ತಾಪಂ ಮಾಜಿ ಸದಸ್ಯ ಶಿವನಗೌಡ ನಿಂ ಮುದ್ದೇಬಿಹಾಳ (ಗೌಡಪ್ಪಗೌಡ) ನಿಂಗಪ್ಪಗೌಡ ಬಪ್ಪರಗಿ, ಭರತ್ ಪಾಟೀಲ, ಗುತ್ತಿಗೆದಾರರಾದ ಸಿದ್ದನಗೌಡ ಪಾಟೀಲ (ಪಡಗಾನೂರ), ರಾಜು ಮೇಟಿ, ತಾಲೂಕಾ ಮಂಡಲದ ಅಧ್ಯಕ್ಷ ಪರುಶುರಾಮ ಪವಾರ, ಕಾಶಿಬಾಯಿ ರಾಂಪೂರ, ಬಸವರಾಜ ಗುಳಬಾಳ, ಪುರಸಭೆ ಸದಸ್ಯರಾದ ಸಹನಾ ಬಡಿಗೇರ, ಸಂಗಮ್ಮ ದೇವರಳ್ಳಿ, ಗೌರಮ್ಮ ಹುನಗುಂದ, ಸೇರಿದಂತೆ ಹಲವರು ಇದ್ದರು.

ವರದಿ : ಶ್ರೀಪಾದ ಜಂಬಗಿ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!