- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಗುಂಡಿನ ಚಕಮಕಿಯಲ್ಲಿ ಬಸವನಾಡಿನ ಯೋಧ ಹುತಾತ್ಮ

ಗುಂಡಿನ ಚಕಮಕಿಯಲ್ಲಿ ಬಸವನಾಡಿನ ಯೋಧ ಹುತಾತ್ಮ

ವಿಜಯಪುರ : ಪುಲ್ವಾಮಾದಲ್ಲಿ ಉಗ್ರಗಾಮಿಗಳು ಹಾಗೂ ಭಾರತೀಯ ಸೇನೆಯ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಬಸವನಾಡಿನ ವೀರಯೋಧನೊಬ್ಬ ಹುತಾತ್ಮನಾಗಿದ್ದಾಗಿ ತಿಳಿದು ಬಂದಿದೆ.

ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ಕಾಶೀರಾಯ ಬೊಮ್ಮನಹಳ್ಳಿ ( 35 ) ಹುತಾತ್ಮನಾದ ಯೋಧನಾಗಿದ್ದಾನೆ. ಈ ಕುರಿತಾಗಿ ಸೇನಾಧಿಕಾರಿಗಳಿಂದ ಕುಟುಂಬಸ್ಥರಿಗೆ ಮಾಹಿತಿ ದೊರೆತಿದೆ. ನಾಳೆ ಹುತಾತ್ಮ ಯೋಧ ಕಾಶೀರಾಯ ಪಾರ್ಥೀವ ಶರೀರ ಸ್ವಗ್ರಾಮ ಉಕ್ಕಲಿಗೆ ತಲುಪುವ ನಿರೀಕ್ಷೆಯಿದ್ದು, ನಂತರ ಸರ್ಕಾರದಿಂದ ಸಕಲ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ ನಡೆಯಲಿದೆ.

ಹುತಾತ್ಮ ಯೋಧನಿಗೆ ಪೊಲೀಸ್ ಇಲಾಖೆಯಿಂದ ಸಲ್ಲಿಸಿದ ಗೌರವ

ಹುತಾತ್ಮಯೋಧ ತಂದೆ, ತಾಯಿ, ಪತ್ನಿ, ಓರ್ವ ಗಂಡು ಮಗು, ಓರ್ವ ಹೆಣ್ಣು ಮಗು ಹಾಗೂ ಇಬ್ಬರು ಸಹೋದರರನ್ನು ಅಗಲಿದ್ದಾರೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!