- Advertisement -Newspaper WordPress Theme
ಪ್ರಮುಖ ಸುದ್ದಿಗಳುರಾಜ್ಯಖಾತೆ ಹಂಚಿಕೆ ಮಾಡಿದ ಸಿಎಂ ಬೊಮ್ಮಾಯಿ. ಇಲ್ಲಿದೆ ವಿವರ

ಖಾತೆ ಹಂಚಿಕೆ ಮಾಡಿದ ಸಿಎಂ ಬೊಮ್ಮಾಯಿ. ಇಲ್ಲಿದೆ ವಿವರ

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯಲ್ಲಿ, ಭಾರಿ ಕುತೂಹಲ ಮೂಡಿಸಿದ್ದ ಖಾತೆ ಹಂಚಿಕೆ ಕೊನೆಗೂ ಇಂದು ಸಿಎಂ ಬಸವರಾಜ ಬೊಮ್ಮಾಯಿವರು ಹಂಚಿಕೆ ಮಾಡಿದ್ದಾರೆ.

ಕೆಲ ಸಚಿವರುಗಳಿಗೆ ಈ ಹಿಂದೆ ನಿರ್ವಹಿಸುತ್ತಿದ್ದ ಖಾತೆಗಳೇ ಮರು ನೀಡಿದ್ದು, ಇನ್ನೂ ಕೆಲ ನೂತನ ಸಚಿವರುಗಳಿಗೆ ಆಶ್ಚರ್ಯಕರವಾಗುವಂತೆ ಖಾತೆ ಹಂಚಿಕೆಯಾಗಿದ್ದೂ ಮಾತ್ರ ಸುಳ್ಳಲ್ಲ.

ನೂತನ ಸಚಿವರ ಖಾತೆ ಹಂಚಿಕೆ ಹೀಗಿದೆ :

1. ಬಸವರಾಜ ಬೊಮ್ಮಾಯಿ– ಡಿಪಿಎಆರ್, ಹಣಕಾಸು, ಗುಪ್ತಚರ, ಸಂಪುಟ ವ್ಯವಹಾರ, ಬೆಂಗಳೂರು ನಗರಾಭಿವೃದ್ಧಿ, ಹಂಚಿಕೆಯಾಗದ ಇತರ ಖಾತೆಗಳು.  2. ಗೋವಿಂದ ಕಾರಜೋಳ – ಭಾರಿ ಮತ್ತು ಮಧ್ಯ ನೀರಾವರಿ. 3. ಕೆ. ಎಸ್. ಈಶ್ವರಪ್ಪ- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್, 3. ಆರ್. ಅಶೋಕ- ಕಂದಾಯ (ಮುಜರಾಯಿ ಸೇರಿ), 4. ಡಾ. ಅಶ್ವಥ ನಾರಾಯಣ- ಉನ್ನತ ಶಿಕ್ಷಣ, ಐಟಿ ಮತ್ತು ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ.  5. ಬಿ. ಶ್ರೀರಾಮುಲು – ಸಾರಿಗೆ ಮತ್ತು ಪರಿಶಿಷ್ಠ ರ‍್ಗಗಳ ಕಲ್ಯಾಣ 6. ವಿ. ಸೋಮಣ್ಣ- ವಸತಿ, ಮೂಲಭೂತ ಸೌರ‍್ಯ ಅಭಿವೃದ್ಧಿ, 7. ಜೆ. ಸಿ. ಮಾಧುಸ್ವಾಮಿ- ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರ, 8. ಸಿ. ಸಿ. ಪಾಟೀಲ- ಲೋಕೋಪಯೋಗಿ, 9. ಪ್ರಭು ಚವಾಣ- ಪಶು ಸಂಗೋಪನೆ, 10. ಆನಂದಸಿಂಗ- ಪರಿಸರ ಮತ್ತು ಪ್ರವಾಸೋದ್ಯಮ, 11. ಕೆ. ಗೋಪಾಲಯ್ಯ- ಅಬಕಾರಿ 12. ಬೈರತಿ ಬಸವರಾಜ- ನಗರಾಭಿವೃದ್ಧಿ. 13. ಎಸ್. ಟಿ. ಸೋಮಶೇಖರ- ಸಹಕಾರ, 14. ಬಿ. ಸಿ. ಪಾಟೀಲ- ಕೃಷಿ, 15. ಕೆ. ಸುಧಾಕರ- ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ, 16. ಕೆ. ಸಿ. ನಾರಾಯಣಗೌಡ- ರೇಶ್ಮೆ, ಯುವಜನ ಸೇವೆ ಮತ್ತು ಕ್ರೀಡೆ, 17. ಶಿವರಾಮ ಹೆಬ್ಬಾರ- ಕಾರ್ಮಿಕ. 18. ಉಮೇಶ ಕತ್ತಿ- ಅರಣ್ಯ, ಆಹಾರ ಮತ್ತು ನಾಗರಿಕ ಪೂರೈಕೆ, ಗ್ರಾಹಕರ ವ್ಯವಹಾರ, 19. ಎಸ್. ಅಂಗಾರಾ- ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ. 20. ಮುರುಗೇಶ ನಿರಾಣಿ- ಬೃಹತ್ ಮತ್ತು ಮಧ್ಯಮ ಕೈಗಾರಿಕೆ, 21. ಎಂ. ಟಿ. ಬಿ. ನಾಗರಾಜ- ಪೌರಾಡಳಿತ, ಸಣ್ಣ ಕೈಗಾರಿಕೆ ಮತ್ತು ಸರ‍್ವಜನಿಕ ಉದ್ದಿಮೆ. 22. ಕೋಟ ಶ್ರೀನಿವಾಸ ಪೂಜಾರಿ- ಸಮಾಜ ಕಲ್ಯಾಣ, ಹಿಂದುಳಿದ ರ‍್ಗಗಳ ಕಲ್ಯಾಣ. 23. ಶಶಿಕಲಾ ಜೊಲ್ಲೆ- ಮುಜರಾಯಿ, ಹಜ್ ಮತ್ತು ವಕ್ಫ್, 24. ವಿ. ಸುನಿಲ ಕುಮಾರ- ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, 25. ಹಾಲಪ್ಪ ಆಚಾರ- ಗಣಿ ಮತ್ತು ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಅಭಿವದ್ಧಿ, ಹಿರಿಯ ನಾಗರಿಕರ ಇಲಾಖೆ, 26. ಅರಗ ಜ್ಞಾನೇಂದ್ರ- ಗೃಹ (ಗುಪ್ತಚರ ಹೊರತು ಪಡಿಸಿ), 27. ಶಂಕರ ಪಾಟೀಲ ಮುನೇನಕೊಪ್ಪ- ಕೈಮಗ್ಗ, ಜವಳಿ, ಸಕ್ಕರೆ, 28. ಬಿ. ಸಿ. ನಾಗೇಶ- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ. 29. ಮುನಿರತ್ನ- ತೋಟಗಾರಿಕೆ, ಯೋಜನೆ.

ಈ ರೀತಿಯಾಗಿ ನೂತನ ಸಚಿವರುಗಳಿಗೆ ಖಾತೆ ಹಂಚಿಕೆ ನೀಡಿದ್ದು, ಖಾತೆಗೆ ರಾಜ್ಯಪಾಲರು ಅಂಕಿತ ನೀಡಿದ್ದಾರೆ. ಒಂದೆಡೆ ಖಾತೆ ಪಟ್ಟಿ ಹೊರಬಿಳುತ್ತಿದ್ದಂತೆ ಕೆಲ ಸಚಿವರುಗಳಿಂದ ಬೇಸರ ವ್ಯಕ್ತವಾಗಿದ್ದು, ಇದು ರಾಜ್ಯ ರಾಜಕಾರಣದಲ್ಲಿ ಯಾವ ರೀತಿ ಪರೀಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!