- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಕ್ರಷಿಂಗ್ ಹಾಗೂ ಕಲ್ಲು ಗಣಿಗಾರಿಕೆಯಲ್ಲಿ ಬ್ಲಾಸ್ಟ್. ಓರ್ವ ಸಾವು, ಇಬ್ಬರಿಗೆ ಗಾಯ

ಕ್ರಷಿಂಗ್ ಹಾಗೂ ಕಲ್ಲು ಗಣಿಗಾರಿಕೆಯಲ್ಲಿ ಬ್ಲಾಸ್ಟ್. ಓರ್ವ ಸಾವು, ಇಬ್ಬರಿಗೆ ಗಾಯ

ವಿಜಯಪುರ :  ಅಲಿಯಾಬಾದ್ ಬಳಿಯ ಕ್ರಷರ ಘಟಕದ ಆವರಣದಲ್ಲಿ ಗುರುವಾರ ಮದ್ಯಾಹ್ನದ ನಂತರ ಬ್ಲಾಸ್ಟ್ ಮಾಡಿದ್ದರಿಂದ, ಕಾರಣ ಓರ್ವ ಸಾವನ್ನಪ್ಪಿದ್ದು, ಮತ್ತಿಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ.

ಸಾವಳಗಿ ಎಂಬುವವರಿಗೆ ಸೇರಿದ ಕ್ರಷರ್ ಘಟಕದಲ್ಲಿ ಈ ಘಟನೆ ನಡೆದಿದೆ. ಸುತ್ತಮುತ್ತಲಿನ ಕ್ರಷರ್ ಘಟಕದಲ್ಲಿ ಕೆಲಸ ಮಾಡುತ್ತಿದ್ದವರು ಈಗಲೇ ಬ್ಲಾಸ್ಟ್ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದರೂ ಅವರು ಯಾರ ಮಾತನ್ನೂ ಕ್ರಷರ್ ಘಟಕದವರು ಕೇಳಿಲ್ಲವಂತೆ. ಇಲ್ಲಿ ಕಲ್ಲು ತೆಗೆಯಲು ಬ್ಲಾಸ್ಟ್ ಮಾಡಿದ್ದಾರೆ. ಪರಿಣಾಮ ರಸ್ತೆ ಬದಿಯಲ್ಲಿ ನಿಂತಿದ್ದ ಮೋಹನ್ ನಾಯ್ಕ್, ಗಿರೀಶ್ ಹಳ್ಳಿ ಹಾಗೂ ಸಚಿನ್ ಹಳ್ಳಿಗೆ ಬ್ಲಾಸ್ಟ್ ಮಾಡಿದ ಪರಿಣಾಮ ಸಿಡಿದ ಕಲ್ಲುಗಳು  ಬಂದು ಬಡಿದಿವೆ. ಮೋಹನ್ ನಾಯ್ಕ್ ಕಾಲಿಗೆ ಹಾಗೂ ದೇಹದ ಇತರೆ ಭಾಗಕ್ಕೆ ಕಲ್ಲು ಬಿರುಸಾಗಿ ಬಡಿದಿವೆ. ಇನ್ನು ಗಿರೀಶ ಹಳ್ಳಿ, ಸಚಿನ್ ಹಳ್ಳಿಗೂ ಕಲ್ಲು ತಾಗಿ ತೀವ್ರವಾಗಿ ಬಡಿದಿವೆ.

ಇಷ್ಟಾಗುತ್ತಿದ್ದಂತೆ ಸಾವಳಗಿ ಕ್ರಷರ್ ಘಟಕದಲ್ಲಿದ್ದವರು ಅಲ್ಲಿಂದ ಓಡಿ ಹೋಗಿದ್ದಾರೆ. ಇದನ್ನು ಕಂಡು ಸುತ್ತಮುತ್ತಲಿನ ಕ್ರಷರ್ ಘಟಕದವರು ಕಲ್ಲಿನ ಬ್ಲಾಸ್ಟ್ ನಲ್ಲಿ ತೀವ್ರವಾಗಿ ಗಾಯಗೊಂಡ ಮೂವರನ್ನು ನಗರದ ಖಾಸಗಿ ಆಸ್ಪತ್ರೆಗೆ ತೆಗೆದುಕೊಂಡು ಬಂದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೋಹನ್ ನಾಯ್ಕ್ (45)  ಮೃತಪಟ್ಟಿದ್ದಾರೆ. ಗಿರೀಶ ಹಳ್ಳಿ ಮತ್ತು ಸಚಿನ್ ಹಳ್ಳಿ ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ಮುಂದುವರೆದಿದೆ.

ಕ್ರಷರ್ ಘಟಕದವರದ್ದೇ ತಪ್ಪು. ನಾವೆಲ್ಲಾ ಈಗಲೇ ಬ್ಲಾಸ್ಟ್ ಮಾಡಬೇಡಿ ಎಂದು ಹೇಳಿದರೂ ಕೇಳಲಿಲ್ಲಾ. ರಾತ್ರಿ ವೇಳೆಯಲ್ಲಿ ಮಾಡುವ ಬ್ಲಾಸ್ಟ್ ನನ್ನು ಬೇಕಾಬಿಟ್ಟಿಯಾಗಿ ಮನಸ್ಸಿಗೆ ಬಂದ  ವೇಳೆಯಲ್ಲಿ ಮಾಡುತ್ತಾರೆ. ಏನಾದರೂ ಹೇಳಲೂ ದೌರ್ಜನ್ಯ ಮಾಡುತ್ತಾರೆ. ಇದಕ್ಕೆಲ್ಲಾ ಕ್ರಷರ್ ಘಟಕದವರದ್ದೇ ತಪ್ಪು. ಮೋಹನ್ ನಾಯ್ಕ, ಗಿರಿಶ್ ಹಾಗೂ ಸಚಿನ್ ರಸ್ತೆ ಬದಿಗೆ ನಿಂತಿದ್ದರು. ಇಲ್ಲಿ  ಕಲ್ಲು ಬ್ಲಾಸ್ಟ್ ಮಾಡಿದ ಕಾರಣ ಈ ಅನಾಹುತವಾಯಿತು ಎಂದು ಪ್ರತ್ಯಕ್ಷದರ್ಶಿ ತಿಳಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಆಗಮಿಸಿದ ಮೋಹನ್ ನಾಯ್ಕ್ ಪತ್ನಿ, ತಾಯಿ ಸಹೋದರಿಯರು ಹಾಗೂ ಸಂಬಂಧಿಕರು ನೆಲ ಬಡಿದು ಕಣ್ಣೀರು ಹಾಕಿದರು. ಪತ್ನಿ ಹಾಗೂ ಮಕ್ಕಳು ಅನಾಥರಾದಲ್ಲಾ ಎಂದು ರೋಧಿಸಿದರು. ಘಟನೆಗೆ ಕಾರಣವಾದವರ ಮೇಲೆ  ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕು. ನಿತ್ಯ ಕೂಲಿನಾಲಿ ಮಾಡಿ ಪತ್ನಿ ಮಕ್ಕಳನ್ನು ಸಾಕುತ್ತಿದ್ದ ಮೋಹನ್ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು. ಸೂಕ್ತ ಪರಿಹಾರ ನೀಡಬೇಕೆಂದು ಸಂಬಂಧಿಕರು ಒತ್ತಾಯ ಮಾಡಿದ್ದಾರೆ.

ಸುದ್ದಿ  ತಿಳಿಯುತ್ತಿದ್ದಂತೆ ವಿಜಯಪುರ ಗ್ರಾಮೀಣ ಪೊಲೀಸರು ಹಾಗೂ ಎಸ್ಪಿ ಅನುಪಮ್ ಅಗ್ರವಾಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎಸ್ಪಿ ಅವರಿಗೆ ಎಎಸ್ಪಿ ಡಾ.ರಾಮ್ ಅರಸಿದ್ದಿ ಸೇರಿದಂತೆ ಇತರೆ ಅಧಿಕಾರಿಗಳು ಸಾಥ್ ನೀಡಿದರು. ಘಟನೆ ಜರುಗಿದ ಸ್ಥಳದ ಪರಿಶೀಲನೆ ನಡೆಸಿದರು. ಬ್ಲಾಸ್ಟಿಂಗ್ ನಡೆದ ಸ್ಥಳ, ಮೋಹನ್ ಹಾಗೂ ಇನ್ನಿಬ್ಬರಿಗೆ ಕಲ್ಲುಗಳು ಬಡಿದ ಜಾಗದಲ್ಲಿಯೂ ಮೆಹಜರ್ ನಡೆಸಿದರು.

ಪ್ರಾಥಮಿಕವಾಗಿ ನಾವು ಮಾಹಿತಿ ಕೆಲ ಹಾಕಿ ಪ್ರಕರಣ ದಾಖಲು ಮಾಡಿಕೊಂಡಿದ್ದೇವೆ. ಅಶೋಕ ಸಾವಳಗಿ ಎಂಬವವರ ಪತ್ನಿಯ ಹೆಸರಿನಲ್ಲಿ ಕ್ರಷರ್ ಘಟಕವಿದೆ. ಇಂದು ನಡೆದ ಸ್ಪೋಟದ ವಿಚಾರವಾಗಿ ಸಮಗ್ರ ತನಿಖೆ ಮಾಡಲಾಗುತ್ತದೆ. ಇಲ್ಲಿ ನಡೆಯುತ್ತಿರುವ ಕ್ರಷರ್ ಘಟಕ, ಕಲ್ಲು ಗಣಿಗಾರಿಕೆ ಸಕ್ರಮವೋ ಅಕ್ರಮವೋ ಎಂಬುದನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ಮೂಲಕ ಪರಿಶೀಲಿಸಲಾಗುತ್ತದೆ. ಇಲ್ಲಿ ತೆಗೆದಿರುವ ಕಲ್ಲಿನ ಪ್ರಮಾಣದ ಬಗ್ಗೆಯೂ ತನಿಖೆ ನಡೆಸುತ್ತೇವೆ. ಇಂದು ನಡೆದ ಬ್ಲಾಸ್ಟ್ ಹೇಗಾಯ್ತು, ಯಾರಿಂದ ಸ್ಪೋಟ ಮಾಡಿಸಿದರು. ಅಕ್ರಮವಾಗಿ ಸ್ಫೋಟ ಮಾಡಲಾಯ್ತಾ. ಅನುಮತಿ ಹೊಂದಿದವರು ಸ್ಪೋಟ ಮಾಡಿದರಾ ಎಂಬಿತ್ಯಾದಿ ಸಮಗ್ರ ತನಿಖೆ ನಡೆಯಲಿದೆ. ತಪ್ಪಿತಸ್ಥರ ಮೇಲೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!