- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಕೋವಿಡ್ ತಡೆಗೆ ಗ್ರಾಪಂ ಜಾಗೃತಿ ಅಭಿಯಾನ

ಕೋವಿಡ್ ತಡೆಗೆ ಗ್ರಾಪಂ ಜಾಗೃತಿ ಅಭಿಯಾನ

ಬಸವನಬಾಗೇವಾಡಿ : ಜನರಲ್ಲಿ ಬಯಾನಕ ವಾತಾವರಣ ನಿರ್ಮಿಸಿರುವ ಭೀಕರ ಕೊರೋನಾ ಎರಡನೇಯ ಅಲೆ ತಡೆಗಟ್ಟಲು ಗ್ರಾಮ ಪಂಚಾಯತಿ ನೇತೃತ್ವದಲ್ಲಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಯಿತು.

ಅಖಂಡ ತಾಲೂಕಿನ ಹೆಬ್ಬಾಳ ಗ್ರಾಮ ಪಂಚಾಯತಿ ಆವರಣದಲ್ಲಿ ಹಮ್ಮಿಕೊಳ್ಳಲಾದ ಜಾಗೃತಿ ಅಭಿಯಾನ ಉದ್ದೇಶಿಸಿ ಮಾತನಾಡಿದ ಸ್ಥಳಿಯ ಆಯುಷ್ಯ ಚಿಕಿತ್ಸಾಲಯದ ವೈದ್ಯ ಡಾ. ಜಗದೀಶ ನಿಡಗುಂದಿ ಅವರು ಕೊರೋನಾ ಎರಡನೇ ಅಲೆ ತೀವ್ರಸ್ವರೂಪದಲ್ಲಿ ಜನರನ್ನು ಆವರಿಸುತ್ತಿದ್ದು ಪ್ರತಿಯೊಬ್ಬರು ಮುಂಜಾಗ್ರತಾಕ್ರಮಗಳನ್ನು ಅನುಸರಿಸುವ ಮೂಲಕ ಎಚ್ಚರಿಕೆಯಿಂದ ನಡೆದುಕೊಳ್ಳಬೇಕಾದ ಅವಶ್ಯಕತೆಯಿದೆ ಅನಾವಶ್ಯಕವಾಗಿ ಯಾರೂ ಮನೆಯಿಂದ ಹೊರ ಬರಬಾರದು ಎಂದು ತಿಳುವಳಿಕೆ ನೀಡಿದರು.

ಕರೋನಾ ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗವಾಗಿದ್ದು ಜನತೆ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವದಲ್ಲದೆ ಪ್ರತಿಯೊಬ್ಬರು ಕಡ್ಡಾಯವಾಗಿ ಮುಖಕ್ಕೆ ಮಾಸ್ಕ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಮತ್ತು ಆಗಾಗ ಸ್ಯಾನಿಟೈಸರ್ ಹಾಗೂ ಸಾಬೂನಿನಿಂದ ಕೈತೊಳೆದುಕೊಂಡು ತಮ್ಮ ಜೀವನವನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕೆಂದು ಹೇಳಿದರು.

ಗ್ರಾಪಂ ಅಧ್ಯಕ್ಷ ಎಂ.ಐ.ಸುಣಗಾರ, ಉಪಾಧ್ಯಕ್ಷೆ ನೀಲಮ್ಮ ಚಲವಾದಿ, ಪಂಚಾಯತ ಅಭಿವೃದ್ಧಿ ಅಧಿಕಾರಿ ಬಸವರಾಜ ಕಾಳಗಿ, ಮುಖಂಡರಾದ ಐ.ಎಸ್.ಪಾಟೀಲ, ಈರನಗೌಡ ಪಾಟೀಲ, ಮಹಾಂತೇಶ ಒಣರೊಟ್ಟಿ ಸೇರಿದಂತೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಪೋಲಿಸ್ ಸಿಬ್ಬಂದಿ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಸಲಾಯಿತು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!