- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಕೋವಿಡ್ ಗೆದ್ದು ಬಂದ ಅಜ್ಜಿ 78 ರ ಅಜ್ಜಿ

ಕೋವಿಡ್ ಗೆದ್ದು ಬಂದ ಅಜ್ಜಿ 78 ರ ಅಜ್ಜಿ

ಬಸವನಬಾಗೇವಾಡಿ : ತಾಲೂಕಿನ ಹೂವಿನಹಿಪ್ಪರಗಿ ಗ್ರಾಮದ ನಿವಾಸಿ ತಾಳಿಕೋಟಿ ಮನೆತನದ ಹಿರಿಯ ಅಜ್ಜಿ ಶಕುಂತಲಾ ಶಿವಯೋಗಪ್ಪ ತಾಳಿಕೋಟಿ (78) ಇಳಿ ವಯಸ್ಸಿನಲ್ಲಿ ಅಜ್ಜಿ ಕೊರೋನಾ ಗೆದ್ದು ಬುಧವಾರ ಶಕುಂತಲಾ ತಾಳಿಕೋಟಿ ಅಜ್ಜಿ ಮನೆಗೆ ಮರಳಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಮನೆಯಲ್ಲಿದ್ದ ವೃದ್ದೆಗೆ ಸ್ವಲ್ಪ ಮಟ್ಟಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮನೆಯವರ ಸಮಯ ಪ್ರಜ್ಞೆಯಿಂದ ವಿಜಯಪುರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದರು. ಕೊರೊನಾ ಪಾಸಿಟಿವ್ ಪ್ರಕರಣ ಎಂದು ತಿಳಿದ ತಕ್ಷಣ ಚಿಕಿತ್ಸೆ ನೀಡಲಾರಂಭಿಸಿದ ವೈದ್ಯರು ಮುಂದೆ ಎಂಟು ದಿನಗಳ ಕಾಲ ಆಸ್ಪತ್ರೆಯಲ್ಲಿ ಇರಿಸಿಕೊಂಡಿದ್ದರು ದಿನದಿಂದ ದಿನಕ್ಕೆ ಅಜ್ಜಿ ವೈದ್ಯರು ನೀಡಿದ ಚಿಕಿತ್ಸೆಗೆ ವೇಗವಾಗಿ ಪ್ರತಿಕ್ರಿಯಿಸಿ ಕೊರೋನಾ ಕಾಯಿಲೆಗೆ ಎದೆ ಗುಂದದೆ ಎಂಟು ದಿನಗಳ ಕಾಲ ಆಸ್ಪತ್ರೆಯಲ್ಲಿ ನನಗೆ ಚಿಕಿತ್ಸೆ ನೀಡಿದ ಎಲ್ಲಾ ಸಿಬ್ಬಂದಿಗೆ ಕೃತಜ್ಞತೆಗಳನ್ನು ತಿಳಿಸಿದರು.

ಕೊರೋನಾ ಬಂದಿದೆ ಎಂದು ಯಾರು ಎದಿಗುಂದದೆ ಭಯ ಪಡುವ ಅವಶ್ಯಕತೆ ಇಲ್ಲ ಕೊರೋನಾ ಲಕ್ಷಣಗಳು ಕಂಡ ಬಂದ ತಕ್ಷಣವೇ ವೈದ್ಯರ ಸಲಹೆ ಪಡೆದು ಅವರು ಹೇಳಿದಂತೆ ಔಷಧಿ ಉಪಚಾರ ಮಾಡಿಕೊಂಡು ಎಚ್ಚರ ವಹಿಸಿ ಮಾಸ್ಕ ಧರಿಸಿ, ಮನೆಯಲ್ಲಿ ಬಿಸಿ ನೀರು ಸೇವಿಸಿ, ಕಷಾಯಿ ಕುಡಿದು ಸಾಮಾಜಿಕ ಅಂತರ ಕಾಪಾಡಿದರೆ ಅರ್ಧದಷ್ಟು ಕೊರೋನಾ ಗೆದ್ದಂತೆ ಎಂದು ಅಜ್ಜಿ ಧೈರ್ಯ ತುಂಬಿ ಸಲಹೆ ನೀಡಿದರು.

ವರದಿ : ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!