- Advertisement -Newspaper WordPress Theme
ಪ್ರಮುಖ ಸುದ್ದಿಗಳುಪ್ರಾದೇಶಿಕಕೋವಿಡ್ ಕೇರ್ ಸೆಂಟರ್ಗಳಿಗೆ ಮಾದರಿಯಾದ ಹುನಗುಂದ ಸಿಸಿಸಿ ಕೇಂದ್ರ

ಕೋವಿಡ್ ಕೇರ್ ಸೆಂಟರ್ಗಳಿಗೆ ಮಾದರಿಯಾದ ಹುನಗುಂದ ಸಿಸಿಸಿ ಕೇಂದ್ರ

ಬಾಗಲಕೋಟೆ : ಜಿಲ್ಲೆಯ ಹುನಗುಂದದ ಸರಕಾರಿ ಬಾಲಕರ ವಸತಿ ನಿಲಯದಲ್ಲಿ ಸ್ಥಾಪಿಸಲಾದ ಕೋವಿಡ್ ಕೇರ್ ಸೆಂಟರ್‍ನಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆಯ ಜೊತೆಗೆ ಯೋಗ ಮತ್ತು ಪ್ರಾಣಾಯಾಮ ಹೇಳಿ ಕೊಟ್ಟು ಬೇಗ ಗುಣಮುಖರನ್ನಾಗಿ ಮಾಡುತ್ತಿರುವ ಕಮ್ಯುನಿಟಿ ಹೇಲ್ತ ಅಧಿಕಾರಿಗಳ ಕಾರ್ಯ ಶ್ಲಾಘನೀಯವಾದುದು.

ಕೋವಿಡ್ ಎರಡನೇ ಅಲೆಯಿಂದ ಹೆಚ್ಚಾಗುತ್ತಿರುವ ಪ್ರಕರಣಗಳನ್ನು ಕಂಡು ಜನರಲ್ಲಿ ಭಯದ ವಾತಾವರಣ ಮೂಡಿಸಿದೆ. ಇನ್ನು ಭಯದಿಂದಲೇ ಕೆಲವೊಂದಿಷ್ಟು ಜನ ಮೃತಪಡುತ್ತಿದ್ದಾರೆ. ಪ್ರತಿದಿನ ಬೆಡ್ ಸಿಗುತ್ತಿಲ್ಲ. ಆಕ್ಸಿಜನ್ ಕೊರತೆಯಿಂದ ರೋಗಿಗಳಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಕೇಳುತ್ತಿದ್ದೇವೆ. ಆದರೆ ಹುನಗುಂದ ಕೋವಿಡ್ ಕೇರ್ ಸೆಂಟರ್‍ನಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆಯ ಜೊತೆಗೆ ಯೋಗ ಮತ್ತು ಪ್ರಾಣಾಯಾಮ ಹೇಳಿಕೊಡುವ ಮೂಲಕ ದೇಹದ ಆಕ್ಸಿಜನ್ ಪ್ರಮಾಣವನ್ನು ಹೆಚ್ಚಿಸುವ ಕಾರ್ಯ ಮಾಡುತ್ತಿರುವುದು ಮಾದರಿ ಕಾರ್ಯವಾಗಿದೆ. ದಿನಂಪ್ರತಿ ಆಕ್ಸಿಜನ್ ಕೊರತೆಯಿಂದ ಕೋವಿಡ್ ಸೋಂಕಿತರು ಮೃತಪಡುತ್ತಿರುವ ಬಗ್ಗೆ ಕೇಳುತ್ತಿದ್ದೇವೆ. ಆದರೆ ಮಾದರಿಯಾಗಿ ಪರಿಣಮಿಸಿದ ಹುನಗುಂದ ಕೋವಿಡ್ ಕೇರ್ ಸೆಂಟರನಲ್ಲಿ ಪ್ರತಿದಿನ ದೇಹದಲ್ಲಿರುವ ಆಕ್ಸಿಜನ್ ಪ್ರಮಾಣ ಹೆಚ್ಚಿಸುವ ಆಸನಗಳನ್ನು ಹೇಳಿಕೊಡಲಾಗುತ್ತಿದೆ.

ನಾಲ್ಕು ವೇದಗಳಲ್ಲಿ ಋಗ್ವೇಧ ಮನುಕುಲದ ಆಧಾರ ಸ್ತಂಭವಾಗಿದ್ದು, ಅದರಲ್ಲಿ ಅನೇಕ ಉಪಯುಕ್ತವಾದ ಶ್ಲೋಕಗಳಿವೆ. ಅದರಲ್ಲಿ 108ನೇ ಶ್ಲೋಕ ಸಂಜೀವಿನಿ ಶ್ಲೋಕವಾಗಿದ್ದು, ಸಾವಿನ ಅಂಚಿನಲ್ಲಿ ಈ ಮಂತ್ರ ಪ್ರಯೋಗ ಮಾಡಲಾಗುತ್ತಿತ್ತು. ಅದಕ್ಕಾಗಿ ತುರ್ತು ಅಂಬುಲೆನ್ಸ್‍ಗೆ 108 ಎಂದು ಹೆಸರಿಡಲಾಗಿದೆ. ಒಟ್ಟಾರೆಯಾಗಿ ಈ ಕೊರೋನಾ ಮಹಾಮಾರಿ ತಡೆಗೆ ಯೋಗ ಮತ್ತು ಪ್ರಾಣಾಯಾಮ ರಾಮಬಾಣವಾಗಿದೆ.

“ಕೋವಿಡ್ ರೋಗಿಗಳಿಗೆ ಚಿಕಿತ್ಸೆಯ ಜೊತೆಗೆ ಯೋಗ ಮತ್ತು ಪ್ರಾಣಾಯಾಮ ಹೇಳಿ ಕೊಡುವ ಮೂಲಕ ರೋಗಿಗಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವ ಕಾರ್ಯ ಹುನಗುಂದ ಸಿಸಿಸಿ ಕೇಂದ್ರದಲ್ಲಿ ಮಾಡುತ್ತಿರುವುದು ಮಾದರಿಯಾಗಿದ್ದು, ಜಿಲ್ಲೆಯ ಇತರೆ ತಾಲೂಕುಗಳಲ್ಲಿ ಸ್ಥಾಪಿಸಲಾದ ಕೊವಿಡ್ ಕೇರ್ ಸೆಂಟರ್‍ಗಳಲ್ಲಿ ಕೋವಿಡ್ ರೋಗಿಗಳಿಗೆ ಯೋಗ ಚಟುವಟಿಕೆಯನ್ನು ತಕ್ಷಣ ಪ್ರಾರಂಭಿಸಲು ಕ್ರಮವಹಿಸಲಾಗುವುದು”

– ಟಿ.ಭೂಬಾಲನ್. ಜಿ.ಪಂ ಸಿಇಓ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!