- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಕೊರೋನಾ ವಾರಿಯರ್ಸ್ ಗೆ ಊಟ ಆರಂಭಿಸಿದ ಎಬಿಡಿ ಫೌಂಡೇಶನ್

ಕೊರೋನಾ ವಾರಿಯರ್ಸ್ ಗೆ ಊಟ ಆರಂಭಿಸಿದ ಎಬಿಡಿ ಫೌಂಡೇಶನ್

ಬಸವನಬಾಗೇವಾಡಿ : ಕೋವಿಡ್ ಸಂಕಷ್ಟದಲ್ಲಿ ಹಲವಾರು ಸಂಘ ಸಂಸ್ಥೆಗಳು ಸಮಾಜದ ಜನತೆಗೆ ಸಹಾಯ ಮಾಡುತ್ತಿದ್ದು, ಅದರಂತೆ, ಬಸವನಬಾಗೇವಾಡಿ ತಾಲೂಕಿನ ಹೂವಿನಹಿಪ್ಪರಗಿಯಲ್ಲಿ ಕೊರೋನಾ ವಾರಿಯರ್ಸ್ಗಳಿಗೆ ಸೆಮಿ ಲಾಕ್‌ಡೌನ್ ಮುಗಿಯವರೆಗೆ ಎಬಿಡಿ ಫೌಂಡೇಶನ್ ನೇತೃತ್ವದಲ್ಲಿ ಪ್ರತಿನಿತ್ಯ ಒಂದು ಭಾರಿ (ವೇಳೆ) ಅನ್ನ ದಾಸೋಹ (ಊಟದ ವ್ಯವಸ್ಥೆ) ಪ್ರಾರಂಭಿಸಲಾಯಿತು.

ಈ ಸಂದರ್ಭದಲ್ಲಿ ಎಬಿಡಿ ಫೌಂಡೇಶನ್ ಮುಖ್ಯಸ್ಥ ಸಂತೋಷಗೌಡ ದೊಡಮನಿ ಕೊರೋನಾ ವಾರಿಯರ್ಸ್ಗಳಿಗೆ ಮಾಸ್ಕ, ಸ್ಯಾನೀಟೈಸರ್, ಊಟದ ಪ್ಯಾಕೇಟ ವಿತರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಕೊರೋನಾ ವಾರಿಯರ್ಸ್ಗಳಿಗೆ ದಾಸೋಹ ಸೇವೆ ಒದಗಿಸುವ ನಿಟ್ಟಿನಲ್ಲಿ ಹೂವಿನಹಿಪ್ಪರಗಿಯಲ್ಲಿ ಊಟ ವಿತರಣೆಗೆ ಅಡುಗೆ ಮಾಡಿಸುತ್ತಿದ್ದು ಊಟವೂ ಸಿದ್ದವಾಗುತ್ತಿದ್ದಂತೆ ಆಹಾರವನ್ನು ಪ್ಯಾಕೇಟ್ ಮುಂಖಾಂತರ ಕೊರೋನಾ ವಾರಿಯರ್ಸ್ಗಳಾದ ಆರೋಗ್ಯ, ಪೊಲೀಸ್ ಇಲಾಖೆ ಸಿಬ್ಬಂದಿಗಳು, ಗ್ರಾಪಂ ಸಿಬ್ಬಂದಿಗಳು, ಪರ್ತಕರ್ತರು ಸೇರಿ ಜನರ ಸೇವೆ ಮಾಡುವವರಿಗೆ ಪ್ರತಿನಿತ್ಯವೂ ಮದ್ಯಾನ್ಹದ ಊಟ ವಿತರಣೆ ಮಾಡುತ್ತಾ ಇತರಿಗೂ ಎಬಿಡಿ ಫೌಂಡೇಶನ್ ಸೇವೆ ಮಾಡಿ ಮಾದರಿಯಾಗಲಿದೆ ಎಂದರು.

ಹೂವಿನಹಿಪ್ಪರಗಿಯಲ್ಲಿ ಕೊರೋನಾ ವೈರಸ್ ಅಟ್ಟಹಾಸ ಮೆರೆಯುತ್ತಿದ್ದು ವಾರಿಯರ್ಸ್ಗಳು ಇದರ ಮಧ್ಯೆ ಮನೆ, ತಮ್ಮ ಕುಟುಂಬದವರನ್ನು ಬಿಟ್ಟು ಜನರ ಸೇವೆಯಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿರುವವರಿಗೆ ಊಟದ ತೊಂದರೆಯಾಗಬಾರದೆಂಬ ಮಾನವೀಯ ಆಧಾರದಲ್ಲಿ ಅನ್ನ ದಾಸೋಹ ಸೇವೆಗೆ ತಮ್ಮ ಸಂಸ್ಥೆ ಮುಂದಾಗಿದ್ದು ಇದೇ ರೀತಿ ದೇವರಹಿಪ್ಪರಗಿ, ಹೂವಿನಹಿಪ್ಪರಗಿ, ಕಲಕೇರಿ ಸೇರಿ 3ಕಡೆಗಳಲ್ಲಿ ವಾರಿಯರ್ಸ್ಗಳಿಗೆ ಊಟದ ವ್ಯವಸ್ಥೆ ಮಾಡಿರುವುದು ಆತ್ಮತೃಪ್ತಿ ತಂದಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಾಸನೂರ ಗ್ರಾಪಂ ಅಧ್ಯಕ್ಷ ರವಿಕುಮಾರ ಹಯ್ಯಾಳ, ಚಂದ್ರಶೇಖರ ಗುಂಡಾನವರ, ಜೈ ಕರ್ನಾಟಕ ಜಿಲ್ಲಾಧ್ಯಕ್ಷ ಬಸಲಿಂಗಪ್ಪಗೌಡ ಇಂಗಳಗಿ, ಪಿ.ಜಿ.ಗೋಠೆದ, ಗ್ರಾಪಂ ಸದಸ್ಯ ಶರಣಗೌಡ ಕಲ್ಲಪ್ಪಗೋಳ, ಆನಂದ ಹಾವರಗಿ, ಮುರಗೇಶ ತಾಳಿಕೋಟಿ, ಪ್ರಪೋಲ ಬ್ಯಾಕೋಡ, ಯಲ್ಲಪ್ಪ ಕೋಲಕಾರ, ಸಿದ್ದು ಹಾದಿಮನಿ, ಭೀಮಪ್ಪ ಮಾದರ, ವೈದ್ಯಾಧಿಕಾರಿ ಡಾ.ಕಲ್ಪನಾ, ಡಾ.ಬಿ.ಎಸ್. ಸಂಧಿಮನಿ ಇದ್ದರು.

ವರದಿ : ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!