- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಕೊರೋನಾ ವಾರಿಯರ್ಸ್ಗಳ ಕಾರ್ಯ ಶ್ಲಾಘನೀಯ

ಕೊರೋನಾ ವಾರಿಯರ್ಸ್ಗಳ ಕಾರ್ಯ ಶ್ಲಾಘನೀಯ

ಬಸವನಬಾಗೇವಾಡಿ: ಪಟ್ಟಣದ ಲಕ್ಷ್ಮೀ ನಗರದಲ್ಲಿನ ಕ್ವಾಟಿ ಲಕ್ಷ್ಮೀ ದೇವಿಯ ಜಾತ್ರಾ ನಿಮಿತ್ತ ಕೋವಿಡ್ ಸಂದರ್ಭದಲ್ಲಿ ತಮ್ಮ ಪ್ರಾಣದ ಹಂಗನ್ನು ತೊರೆದು, ಹೋರಾಟ ಮಾಡಿದ ಆರೋಗ್ಯ ಇಲಾಖೆಯ ಸಿಬ್ಬಂದಿ, ವೈದ್ಯ, ಆಶಾ ಕಾರ್ಯಕರ್ತರನ್ನು, ದಿನ ಪತ್ರಿಕೆಗಳನ್ನು ಮನೆ, ಮನೆಗೆ ತಲುಪಿಸಿದ ಯುವಕರನ್ನು, ಪುರಸಭೆಯ ಪೌರಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.

 ಈ ಸಂದರ್ಭದಲ್ಲಿ ಪುರಸಭೆ ಮಾಜಿ ಸದಸ್ಯ ಮುಖಂಡ ಪರಶುರಾಮ ಅಡಗಿಮನಿ ಮಾತನಾಡಿ, ಜಗತ್ತನ್ನೇ ತಲ್ಲಣಗೊಳಿಸಿದ ಮಹಾಮಾರಿ ಕೊರೋನಾ ವಿರುದ್ಧ ತಮ್ಮ ಪ್ರಾಣದ ಹಂಗನ್ನು ತೊರೆದು ಹಗಲಿರುಳು ಶ್ರಮಿಸಿ ನಮ್ಮೆಲ್ಲರ ಪ್ರಾಣ ಉಳಿಸಿದ ವೈದ್ಯ, ಆರೋಗ್ಯ ಇಲಾಖೆ ಸಿಬ್ಬಂದಿಗಳ ಹಾಗೂ ಆಶಾ ಕಾರ್ಯಕರ್ತರ, ಪೌರಕಾರ್ಮಿಕರ ಕಾರ್ಯ ಶ್ಲಾಘನೀಯವಾಗಿದೆ ಇವರನ್ನು ಪ್ರೀತಿ, ವಿಶ್ವಾಸ, ಗೌರವದಿಂದ ಕಾಣಬೇಕು ಎಂದು ಹೇಳಿದರು.

 ಈ ಸಂಧರ್ಭದಲ್ಲಿ ಹಿರೇಆಸಂಗಿಯ ಪ್ರವಚನಕಾರ ವೀರಬಸವ ದೇವರು ಸಾನಿಧ್ಯವಹಿಸಿದ್ದರು, ಜಾತ್ರಾ ಕಮೀಟಿ ಅಧ್ಯಕ್ಷ ಲಕ್ಷ್ಮಣ ಅಂಬಿಗೇರ, ಉಪಾಧ್ಯಕ್ಷ ಚಂದ್ರಕಾAತ ಗೋಡಿಕಟ್ಟಿ, ಎಪಿಎಂಸಿ ನಾಮನಿರ್ದೇಶನ ಸದಸ್ಯ ಮುದಕಣ್ಣ ಹೊರ್ತಿ, ಪುರಸಭೆ ನಾಮನಿರ್ದೇಶನ ಸದಸ್ಯರಾದ ಪರಶುರಾಮ ಜಮಖಂಡಿ, ಸುರೇಶ ಲಮಾಣಿ, ರಾಜು ಪಟ್ಟಣಶೆಟ್ಟಿ, ಪ್ರಕಾಶ ಬೆಣ್ಣೂರ, ವಾಸುದೇವ ಮ್ಯಾಗೇರಿ, ಸೇರಿದಂತೆ ಇತರರು ಇದ್ದರು. ತುಳಸಿ ಪತ್ತಾರ ಹಾಗೂ ಸಂಗಡಿಗರು ಪ್ರಾರ್ಥಿಸಿದರು, ಎಸ್.ಪಿ ಮಡಿಕೇಶ್ವರ ಸ್ವಾಗತಸಿದರು, ಪಿ.ಎಸ್.ಬಾಗೇವಾಡಿ ನಿರೂಪಿಸಿದರು, ವಂದಿಸಿದರು.

ವರದಿ : ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!