- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಕೊರೋನಾ ಪ್ಯಾಕೇಜ್: ಊಟಕ್ಕಿಲ್ಲದ ಉಪ್ಪಿನಕಾಯಿ ಎಂದ ಜೆಡಿಎಸ್ ಮುಖಂಡ ರಾಜುಗೌಡ

ಕೊರೋನಾ ಪ್ಯಾಕೇಜ್: ಊಟಕ್ಕಿಲ್ಲದ ಉಪ್ಪಿನಕಾಯಿ ಎಂದ ಜೆಡಿಎಸ್ ಮುಖಂಡ ರಾಜುಗೌಡ

ಬಸವನಬಾಗೇವಾಡಿ : ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಘೋಷಿಸಿದ 1250 ಕೋಟಿ ರೂ,ಗಳ ಕೊರೋನಾ ಪ್ಯಾಕೇಜ್ ರಾಜ್ಯದ ಬೊಕ್ಕಸಕ್ಕೆ ಹೊರೆ ಹೊರತು, ರಾಜ್ಯದ ಜನತೆಗೆ ಅನುಕೂಲಕರವಾಗಿಲ್ಲ ಪ್ಯಾಕೇಜ್ ಪರಿಹಾರ ಊಟಕ್ಕಿಲ್ಲದ ಉಪ್ಪಿನಕಾಯಿ ಅಂತಾಗಿದೆ ಎಂದು ದೇವರಹಿಪ್ಪರಗಿ ಕ್ಷೇತ್ರದ ಜೆಡಿಎಸ್ ಧುರೀಣ ರಾಜುಗೌಡ ಪಾಟೀಲ (ಕುದರಿಸಾಲವಾಡಗಿ) ಹೇಳಿದರು.

ಪ್ಯಾಕೇಜ್ ಕುರಿತಾಗಿ ದೂರವಾಣಿ ಮೂಲಕ ಮಾತನಾಡಿದ ಅವರು, ಕೊರೋನಾ ಲಾಕಡೌನ್ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಘೋಷಿಸಿದ ಪರಿಹಾರ ಪ್ಯಾಕೇಜ್ ರೈತರ ವಿರೋಧಿಯಾಗಿದ್ದು, ಕೊರೋನಾ ಹೊಡೆತಕ್ಕೆ ಸಿಲುಕಿದ ಸಣ್ಣ ರೈತರಿಗೆ, ಬೀದಿ ಬದಿ ವ್ಯಾಪರಸ್ಥರಿಗೆ, ಹೊಟೇಲ್ ಉದ್ಯಮಕ್ಕೆ, ಬೇಸಿಗೆಯಲ್ಲಿ ಬೆಳೆದ ತರಕಾರಿ, ಕಲ್ಲಂಗಡಿ, ಲಿಂಬೆ ಹಣ್ಣು, ಉಳ್ಳಾಗಡ್ಡಿ ಸೇರಿ ಇತರೇ ತೋಟಗಾರಿಕಾ ಬೆಳಗಳು ಮಾರುಕಟ್ಟೆಯಲ್ಲಿ ಮಾರಾಟವಾಗದೇ ಇಲ್ಲದೆ ಕಾರಣ ರಸ್ತೆಯಲ್ಲಿ ಸುರುವಿ ರೈತ ಬರಿಗೈಯಿಂದ ಮನೆಗೆ ಮರಳುವ ಪರಿಸ್ಥಿತಿ ಬಂದು ಒದಗಿದೆ ಇಂತಹ ಪರಿಸ್ಥಿತಿಯಲ್ಲಿ ಅಂತವರನ್ನು ಗುರುತಿಸಿ ಪರಿಹಾರ ಘೋಷಣೆ ಮಾಡಬೇಕು ಆಗ್ರಹಿಸಿದರು.

ಪ್ರಾದೇಶಿಕ ಅಥವಾ ಜಿಲ್ಲಾವಾರು ಪ್ರದೇಶಕ್ಕೆ ಯಾವ ಬೆಳೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಾರೆ ಆ ಪ್ರಕಾರ ಪರಿಹಾರ ನೀಡಬೇಕು. ಬಿಪಿಎಲ್ ಕುಟುಂಬದ ಸದಸ್ಯರಿಗೆ ಅಕ್ಕಿ ಜೊತೆಗೆ ಅಡುಗೆ ಎಣ್ಣೆ, ಸಕ್ಕರೆ, ಬೆಲ್ಲ, ಬ್ಯಾಳಿ ಸೇರಿದಂತೆ ದಿನಸಿ ಕಿಟ್ ಹೋಲುವ ಪಡಿತರವನ್ನು ವಿತರಿಸಬೇಕು, ಇನ್ನೂ ಮಹಾಮಾರಿ ಕೊರೋನಾ ಹತ್ತಿಕ್ಕಿವ ನಿಟ್ಟಿನಲ್ಲಿ ಬೇರೆ ರಾಜ್ಯಕ್ಕೆ ಹೊಲಿಸಿದರೆ ಕರ್ನಾಟಕ ಸರಕಾರ ವಿಫಲವಾಗಿದೆ, ಕೊರೊನಾ ಪ್ಯಾಕೇಜ್ ಪರಿಹಾರ ವಿತರಣೆಯಲ್ಲಿಯೋ ಅದೇ ಚಾಳಿ ಮುಂದುವರಿಸಿದೆ. ಕೊರೋನಾ ಮೂರನೇ ಅಲೆ ಮತ್ತು ಬ್ಲಾಕ್ ಫಂಗಸ್ ಅಲೆಯನ್ನು ಹತ್ತಿಕ್ಕಿವ ನಿಟ್ಟಿನಲ್ಲಿ ರಾಜ್ಯ ಸರಕಾರ ಯಾವುದೇ ಪೂರ್ವ ಯೋಜನೆ ಮಾಡಿಕ್ಕೊಂಡಿಲ್ಲಾ ಇನ್ನೂ ನಮ್ಮನ್ನು ರಕ್ಷಿಸುವರು ಯಾರು ಎಂದು ಪ್ರಶ್ನಿಸಿದರು.

ಸಾಮಾನ್ಯವಾಗಿ ಬಿಪಿಎಲ್ ಕುಟುಂಬದ ಎಲ್ಲಾ ಸದಸ್ಯರಿಗೆ ತಲಾ ಹತ್ತು ಸಾವಿರದಂತೆ ನೇರವಾಗಿ ಬ್ಯಾಂಕ ಖಾತೆಗೆ ಹಾಕಬೇಕು. ಲಸಿಕೆ ಬಗ್ಗೆ ಇಲ್ಲದ ಸುಳ್ಳು ಮಾಹಿತಿ ನೀಡುವ ಕೆಲಸ ಬಿಟ್ಟು, ಪ್ರತಿಯೊಬ್ಬ ಮಕ್ಕಳು ಸೇರಿ ಸರ್ವ ಸದಸ್ಯರಿಗೆ ಕಡಿಮೆ ಬೀಳದಂತೆ ಲಸಿಕೆ ಹಾಕಿಸುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಚಿಮಾರಿ ಹಾಕಿದೆ ಇನ್ನಾದರೂ ರಾಜ್ಯ ಸರಕಾರ ಜನರ ಹಿತ ಕಾಯುವ ಕೆಲಸ ಮಾಡಬೇಕು ಎಂದು ಹೇಳಿದರು.

ವರದಿ : ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!