- Advertisement -Newspaper WordPress Theme
ಪ್ರಮುಖ ಸುದ್ದಿಗಳುಪ್ರಾದೇಶಿಕಕೊರೊನಾಗೆ ಬಲಿಯಾದ ಸಿಬ್ಬಂದಿಗಳ ಕುಟುಂಬಗಳ ನೆರವಿಗೆ ನಿಂತ ಎಂಬಿ ಪಾಟೀಲ

ಕೊರೊನಾಗೆ ಬಲಿಯಾದ ಸಿಬ್ಬಂದಿಗಳ ಕುಟುಂಬಗಳ ನೆರವಿಗೆ ನಿಂತ ಎಂಬಿ ಪಾಟೀಲ

ವಿಜಯಪುರ : ಕೊರೊನಾ ಸಂಕಷ್ಟ ಕಾಲದಲ್ಲಿ ಜನಸಾಮಾನ್ಯರು ಬಡವರಿಗೆ ಸಹಾಯವಾಗಲೆಂದು ನಗರದ ಬಿಎಲ್ಡಿಇ ಆಸ್ಪತ್ರೆಯಲ್ಲಿ ಸರ್ಕಾರ ನಿಗದಿ ಪಡಿಸಿದ ದರಕ್ಕಿಂತಲೂ ಶೇಕಡಾ 70 ರಷ್ಟು ಕಡಿಮೆ ದರದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿತ್ತು. ಇದರಿಂದ ಅದೆಷ್ಟೋ ಜನರಿಗೆ ಸಹಾಯವಾಗಿತ್ತು. ಇದೀಗಾ ಸಂಸ್ಥೆಯ ಆಧ್ಯಕ್ಷ ಹಾಗೂ ಶಾಸಕ ಎಂ ಬಿ ಪಾಟೀಲ್  ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಕೊರೊನಾಗೆ ಬಲಿಯಾದ ಸಿಬ್ಬಂದಿಗಳ ಕುಟುಂಬಗಳ ನೆರವಿಗೆ ನಿಂತಿದ್ದಾರೆ.

ಕೊರೊನಾದಿಂದಾಗಿ ಬಿಎಲ್ಡಿಇ ಸಂಸ್ಥೆಗೆ ಸೇರಿದ 16 ಜನ ಸಿಬ್ಬಂದಿ ಮೃತಪಟ್ಟಿದ್ದರು. ಈ ಸಿಬ್ಬಂದಿಯಲ್ಲಿ ಇಬ್ಬರು ವೈದ್ಯರನ್ನು ಹೊರತು ಪಡಿಸಿ ಉಳಿದ 14 ಜನ ಸಿಬ್ಬಂದಿಗಳ ಕುಟುಂಬಗಳಿಗೆ ಎಂ ಬಿ ಪಾಟೀಲ್ ತಮ್ಮ ಸಂಸ್ಥೆಯ ವತಿಯಿಂದ ತಲಾ 1 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಿದ್ದಾರೆ. ಜೊತೆಗೆ ಮೃತರ ಕುಟುಂಬದ ಓರ್ವ ಅರ್ಹ ಸದಸ್ಯರಿಗೆ ಬಿಎಲ್ಡಿಇ ಸಂಸ್ಥೆಯಲ್ಲಿ ಉದ್ಯೋಗದ ಭರವಸೆ ಹಾಗೂ ಮೃತರ ಮಕ್ಕಳ ಶಿಕ್ಷಣಕ್ಕೂ ನೆರವು ನೀಡುವುದಾಗಿ ತಿಳಿಸಿದ್ದಾರೆ. ಇಂದು ಸಂಸ್ಥೆಯ ಆವರಣದಲ್ಲಿ ಕೊರೊನಾದಿಂದ ಮೃಥರಾದ ಸಂಸ್ಥೆಯ ಸಿಬ್ಬಂದಿಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಂಡು ಹಣಕಾಸಿನ ನೆರವು ನೀಡಲಾಯಿತು.

ಕಾರ್ಯಕ್ರಮದಲ್ಲಿ ಮೃತ ಕುಟುಂಬಸ್ಥರಿಗೆ ಒಂದು ಲಕ್ಷ ರೂಪಾಯಿ ಚೆಕ್ ಗಳನ್ನು ಸಂಸ್ಥೆಯ ಆಧ್ಯಕ್ಷ ಎಂಬಿಪಿ ವಿತರಣೆ ಮಾಡಿದರು.  ಇದೇ ವೇಳೆ ಮಾತನಾಡಿದ ಎಂ ಬಿ ಪಾಟೀಲ್ ನಮ್ಮ ಸಂಸ್ಥೆಯ ಸಿಬ್ಬಂದಿ ಕೊರೊನಾಗೆ ಬಲಿಯಾಗಿದ್ದು ಅವರ ಕುಟುಂಬಕ್ಕೆ ನೆರವಾಗೋದು ನಮ್ಮ ಕರ್ತವ್ಯವೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿಎಲ್ಡಿಇ ಸಂಸ್ಥೆಯ ಆಡಳಿತಾಧಿಕಾರಿ ಆರ್. ವಿ. ಕುಲಕರ್ಣಿ, ಬಿಎಲ್ಡಿಇ ವಿವಿ ಉಪಕುಲಪತಿ ಡಾ. ಆರ್. ಎಸ್. ಮುಧೋಳ, ಬಿಎಲ್ಡಿಇ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ಡಾ. ಎಂ. ಎಸ್. ಮದಭಾವಿ ಸೇರಿದಂತೆ ಇತರರು  ಹಾಜರಿದ್ದರು.  

https://www.youtube.com/watch?v=gM4ZDsSOAdw

LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!