- Advertisement -Newspaper WordPress Theme
ಪ್ರಮುಖ ಸುದ್ದಿಗಳುಪ್ರಾದೇಶಿಕಕೃಷ್ಣಾ ಭಾಜ್ಯ ಜಲ ನಿಗಮಕ್ಕೆ ವಿಶೇಷ ಅನುದಾನ ನೀಡಿ. ಎಪಿಎಂಸಿ ನಿರ್ದೇಶಕ ವಿಜಯಕರ ಆಗ್ರಹ

ಕೃಷ್ಣಾ ಭಾಜ್ಯ ಜಲ ನಿಗಮಕ್ಕೆ ವಿಶೇಷ ಅನುದಾನ ನೀಡಿ. ಎಪಿಎಂಸಿ ನಿರ್ದೇಶಕ ವಿಜಯಕರ ಆಗ್ರಹ

ಮುದ್ದೇಬಿಹಾಳ : ಆಲಮಟ್ಟಿ ಕೃಷ್ಣಾ ಭಾಜ್ಯ ಜಲ ನಿಗಮಕ್ಕೆ ಕೇಂದ್ರ ಸರಕಾರ ಈ ಭಾಗದ ಸಮಗ್ರ ನಿರಾವರಿಗಾಗಿ ವಿಶೇಷ ರಾಷ್ಟ್ರೀಯ ಯೋಜನೆ ಎಂದು ಪರಿಗಣಿಸಿ ವಿಶೇಷ ಹೆಚ್ಚಿನ ಅನುದಾನ ನೀಡಿ ಈ ಭಾಗ ರೈತರ ಶ್ರೇಯೋಭಿವೃದ್ದಿಗಾಗಿ ಬಚಾವತ್ ಆಯೋಗದಂತೆ ಹೆಚ್ಚಿನ ನೀರು ಸಂಗ್ರಹವಾಗಲು ಸಾದ್ಯವಾಗುವಂತೆ ಕಾಳಜಿ ತೋರಬೇಕು ಎಂದು ಎಪಿಎಂಸಿ ನಿರ್ದೇಶಕ ವಾಯ್ ಎಚ್ ವಿಜಯಕರ ಆಗ್ರಹಿಸಿದ್ದಾರೆ.

ಸಿಎಂ ಪರ ಬ್ಯಾಟಿಂಗ್ ಮಾಡಿದ ಸಚಿವ ಮುರಗೇಶ ನಿರಾಣಿ

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಆಲಮಟ್ಟಿ ಆರ್ ಆಂಡ್ ಆರ್ ಕೆಲಸವು ಸಂಪೂರ್ಣ ಸ್ಥಗಿತಗೊಂಡಿದ್ದು ಮಾತ್ರವಲ್ಲದೇ ಇಲಾಖೆ ಕೇವಲ ಹೆಸರಿಗೆ ಮಾತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಇದರಲ್ಲಿ ಈವರೆಗೆ ಪೂರ್ಣ ಪ್ರಮಾಣದ ಅಧಿಕಾರಿಯನ್ನು ನೇಮಕ ಮಾಡದೆ, ಕೆವಲ ಪ್ರಭಾರಿ ಉಸ್ತುವರಿ ಅಧಿಕಾರಿಗಳ ಮೇಲೆ ಕಾರ್ಯ ನಿರ್ವಹಿಸುತ್ತಿರುವುದು ನೋವಿನ ಸಂಗತಿಯಾಗಿದೆ ಎಂದರು.

ಬ್ರೀಟಿಷರ ಕಾಲದಿಂದ ಬರ ಪೀಡಿತ ಜಿಲ್ಲೆ ಎಂಬ ಪಟ್ಟ ಕಟ್ಟಿಕೊಂಡಿರುವ ವಿಜಯಪುರ ಜಿಲ್ಲೆಗೆ ಈ ಭಾಗದ ರೈತರ ಆಶಾ ಕಿರಣದಂತೆ ಬಂದಿರುವ ಕೃಷ್ನಾ ಭಾಗ್ಯ ಜಲನಿಗಮ ಯೋಜನೆ ಸರಕಾರದ ನಿಗದಿತ ಅವಧಿಯಲ್ಲಿ ಮಗಿಯದೇ ಇರುವುದರಿಂದ ಸಂಪೂರ್ಣ ನಿರಾವರಿಯಾಗಬೇಕೆಂಬ ಕನಸು ನನಸಾಗಿಯೇ ಉಳಿಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಏಕಾಏಕಿ ಹೆಚ್ಚಳವಾದ ಆಲಮಟ್ಟಿ ಜಲಾಶಯದ ಒಳ ಹರಿವು

ಈ ಹಿಂದೆ ಎಚ್ ಡಿ ದೇವೇಗೌಡರು ಪ್ರಧಾನ ಮಂತ್ರಿಗಳಾಗಿದ್ದಾಗ ಕಾಳಜಿಯಿಂದ ವಿಶೇಷ ಅನುದಾನ ನೀಡಿದ್ದರಿಂದಾಗಿ ನಿರಾವರಿಯ ಕಾಮಗಾರಿ ಕೆಲಸವೂ ಅತೀ ವೇಗದಲ್ಲಿ ಪ್ರಾರಂಭಗೊಂಡಿತ್ತು, ಅದರ ನಂತರ ಕಳೆದ ಸಿದ್ರಾಮಯ್ಯನವರ ನೇತ್ರತ್ವದ ಸರಕಾರದಲ್ಲಿ ಜಲಸಂಪನ್ಮೂಲ ಸಚೀವರಾಗಿದ್ದ ಎಂ ಬಿ ಪಾಟೀಲ ಅವರ ಅಧಿಕಾರದ ಅವಧಿಯಲ್ಲಿ ನಿರಾವರಿಗೆ ಸಂಬಂಧಿಸಿದ ಕೆಲಸಗಳು ಚುರಿಕಿನಿಂದ ಪ್ರಾರಂಭಸಿದ್ದವು, ಆ ವೇಗ ನಿರಾವರಿಯ ಅಭಿವೃದ್ಧಿ ಕಾರ್ಯಗಳು ಸದ್ಯ ಸರಕಾರದ ಅವಧಿಯಲ್ಲಿ ಎಲ್ಲಿಯೂ ಎದ್ದು ಕಾಣುತ್ತಿಲ್ಲ ಎಂಬು ಈಭಾಗದ ರೈತರಿಗೆ ಬೇಸರವನ್ನುಂಟು ಮಾಡಿದ್ದು, ಈ ಭಾಗದ ಕೃಷಿದಾತರ ಅನೂಕಲಕ್ಕಾಗಿ ಕೇಂದ್ರ ಸರಕಾರಕ್ಕೆ ಒತ್ತಾಯಿಸಿ ಈ ಕೃಷ್ಣಾ ಭಾಗ್ಯ ಜಲನಿಗಮವನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಿ, ಪ್ರತ್ಯೇಕವಾಗಿ ಸರಕಾರದಿಂದ ಹಣಕಾಸು ನೆರುವು ನೀಡುವ ಮೂಲಕ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ವಿಜಯಕರ ಆಗ್ರಹಿಸಿದ್ದಾರೆ.

ವರದಿ : ಶ್ರೀಪಾದ ಜಂಬಗಿ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!