- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಕುಡಿದ ಮತ್ತಿನಲ್ಲಿ ಚರಂಡಿಗೆ ಬಿದ್ದು ವ್ಯಕ್ತಿ ಸಾವು

ಕುಡಿದ ಮತ್ತಿನಲ್ಲಿ ಚರಂಡಿಗೆ ಬಿದ್ದು ವ್ಯಕ್ತಿ ಸಾವು

ಮುದ್ದೇಬಿಹಾಳ : ಕುಡಿದ ಅಮಲಿನಲ್ಲಿ ರಸ್ತೆ ಬದಿ ಚರಂಡಿಗೆ ಬಿದ್ದು ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಮುದ್ದೇಬಿಹಾಳ ಪಟ್ಟಣದ ಪಿಲೇಕೆಮ್ಮ ನಗರದಲ್ಲಿ ಬುಧವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.

ಮೃತನನ್ನು ಕೋಳೂರು ತಾಂಡಾ ನಿವಾಸಿ ಬಾಲಚಂದ್ರ ಹಣಮಂತ ಚವ್ಹಾಣ (54) ಎಂದು ಗುರುತಿಸಲಾಗಿದೆ. ಈತ ಮದ್ಯವ್ಯಸನಿಯಾಗಿದ್ದು ಮಂಗಳವಾರ ರಾತ್ರಿ ಕುಡಿದ ಅಮಲಿನಲ್ಲೇ ಚರಂಡಿಗೆ ಬಿದ್ದಿದ್ದಾನೆ ಎನ್ನಲಾಗಿದೆ. ಬೆಳಿಗ್ಗೆ ರಸ್ತೆಯಲ್ಲಿ ಸಂಚರಿಸುವವರಿಗೆ ಚರಂಡಿಯಲ್ಲಿ ತಲೆಯೊಂದು ಕಂಡು ಬಂದು ಸಮೀಪಕ್ಕೆ ಹೋಗಿ ನೋಡಿದಾಗ ಬೆಳಕಿಗೆ  ಬಂದಿದೆ.

ವಿಷಯ ತಿಳಿದ ಪಿಎಸೈ ರೇಣುಕಾ ಜಕನೂರ, ಪುರಸಭೆ ಸದಸ್ಯೆ ಪತಿ ನಾನಪ್ಪ ನಾಯಕ ಪುರಸಭೆ ಪೌರಕಾರ್ಮಿಕರನ್ನು ಕರೆಯಿಸಿ ಶವವನ್ನು ಚರಂಡಿಯಿಂದ ಮೇಲೆತ್ತಿಸಿದರು. ಚರಂಡಿಯ ಕೊಳಚೆ ನೀರಿಗೆ ಉಸಿರುಗಟ್ಟಿ ಅಥವಾ ತಲೆಗೆ ಪೆಟ್ಟಾಗಿ ಸಾವನ್ನಪ್ಪಿರಬಹುದು ಎನ್ನಲಾಗಿದೆ.

ಮೃತನ ಕಿರಿಯ ಸಹೋದರ ತಾಪಂ ಮಾಜಿ ಸದಸ್ಯ ಪ್ರೇಮಸಿಂಗ್ ಚವ್ಹಾಣ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿ ಸತ್ತಿರುವ ವ್ಯಕ್ತಿ ತಮ್ಮ ಸಹೋದರ ಎಂದು ಗುರುತಿಸಿರುವುದಾಗಿ ತಿಳಿದುಬಂದಿದೆ.

ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಪ್ರಕರಣ ದಾಖಲಾಗಿದೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!