- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಕೀರ್ತನಾಳಿಂದ ಬಸವನಾಡಿಗೆ ಹೆಚ್ಚಿದ ಕೀರ್ತಿ

ಕೀರ್ತನಾಳಿಂದ ಬಸವನಾಡಿಗೆ ಹೆಚ್ಚಿದ ಕೀರ್ತಿ

ಬಸವನಬಾಗೇವಾಡಿ : ಪಟ್ಟಣದ ಅವಟಿ ಕೋಚಿಂಗ್ ಸೆಂಟರ್ ನಲ್ಲಿ ತಾಲೂಕಾ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು, ವಿವೇಕ್ ಬ್ರಿಗೇಡ್ ಮತ್ತು ಅವಟಿ ಕೋಚಿಂಗ್ ಸಂಸ್ಥೆಗಳ ಸಹಯೋಗದಲ್ಲಿ ಶೈಕ್ಷಣಿಕ ಸಾಧನೆ ವಿದ್ಯಾರ್ಥಿನಿ ಕುಮಾರಿ ಕೀರ್ತನಾ ಉಕ್ಕಲಿಗೆ ಸನ್ಮಾನಿಸುವ ಮೂಲಕ ಗೌರವ ಸಲ್ಲಿಸಿ ಶುಭ ಹಾರೈಸಲಾಯಿತು.

ಕಾರ್ಯಕ್ರಮದಲ್ಲಿ ಸ್ಥಳಿಯ ಬಸವತತ್ವ ಪ್ರಾಥಮಿಕ ಶಾಲೆಯ ಗುರುಗಳಾದ ಬಸವರಾಜ್ ಚಿಂಚೋಳಿ ಮಾತನಾಡಿ,  ಕೀರ್ತನಾ ವಿದ್ಯಾರ್ಥಿನಿ ರಾಜ್ಯಕ್ಕೆ ರ್ಯಾಂಕ್ ಬರುವ ಮೂಲಕ ನಮ್ಮ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾಳೆ. ಇದು ಬಸವನಾಡಿಗೆ ಕೀರ್ತನಾ ತಂದ ಕೀರ್ತಿಯಾಗಿದೆ. ವಿದ್ಯಾರ್ಥಿನಿಯ ಮುಂದಿನ ಶೈಕ್ಷಣಿಕ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದರು.

ಈ ವೇಳೆ ವಿದ್ಯಾರ್ಥಿನಿ ಕೀರ್ತನಾಗೆ ಸನ್ಮಾನಿಸಲಾಯಿತು. ಮತ್ತು ಪುರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾದ ಅಶೋಕ ಹಾರಿವಾಳ ಅವರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪುರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಅಶೋಕ ಹಾರಿವಾಳ,  ಪಂಚಮಸಾಲಿ ಸಮಾಜದ ಅಧ್ಯಕ್ಷರಾದ ರವಿಗೌಡ ಚಿಕ್ಕೊಂಡ, ಶಿಕ್ಷಕರಾದ ಶರಣಬಸು ಮಿಣಜಗಿ, ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯೆಕ್ಷೆ ರುಕ್ಮಿಣಿ ಬಿಂಜಲಭಾವಿ, ಕ.ಚು.ಸಾ. ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರಾದ ಜಗದೀಶ್ ಸಾಲಳ್ಳಿ, ವಿವೇಕ್ ಬ್ರಿಗೇಡ್ ಸದಸ್ಯ ವಿನೂತ ಕಲ್ಲೂರ ದೇಸಾಯಿ, ಸಾಹಿತಿ ಕವಿ ಗಾಯಕ ಶರಣು ಬಸ್ತಾಳ, ಕ.ಚು.ಸಾ.ಪ ಗೌರವಾಧ್ಯಕ್ಷ ಎನ್.ಎಸ್ ಹೂಗಾರ, ಭಾರತೀಯ ಸೃಜನಶೀಲ ಕನ್ನಡ ಸಾಹಿತ್ಯ ಬಳಗದ ಅಧ್ಯಕ್ಷ ಅನಿಲ್ ಬಬಲೇಶ್ವರ, ಶೀಲಾ ಅವಟಿ, ಕು. ತೇಜಸ್ವಿನಿ ಖೇಡದ, ಶಿವಾನಂದ ತೋಳನೂರ , ಬಸವರಾಜ್ ನಾಯ್ಕೊಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಬಸವನಾಡಿನಲ್ಲಿ ಪ್ರಥಮವಾಗಿ ಡ್ರೋನ್ ಸರ್ವೇ ಆರಂಭ

ಕಾರ್ಯಕ್ರಮದಲ್ಲಿ ಕುಮಾರಿ ಸ್ವಾತಿ ವಡ್ಡರ ಪ್ರಾರ್ಥಿಸಿದರು, ಅವಟಿ ಕೋಚಿಂಗ್ ನ ಅಧ್ಯಕ್ಷರಾದ ಕಾಶೀನಾಥ ಅವಟಿ ಸ್ವಾಗತಿಸಿದರು, ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರಭಾಕರ ಖೇಡದ ಸಂಯೋಜನೆ ಮತ್ತು ನಿರೂಪಿಸಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!