- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಕಾನ್ನಾಳದಲ್ಲಿ ಪ್ಯಾರಾಚೂಟ್ ಅವಶೇಷಗಳು ಪತ್ತೆ..!

ಕಾನ್ನಾಳದಲ್ಲಿ ಪ್ಯಾರಾಚೂಟ್ ಅವಶೇಷಗಳು ಪತ್ತೆ..!

ಬಸವನಬಾಗೇವಾಡಿ : ತಾಲೂಕಿನ ಕಾನ್ನಾಳ ಗ್ರಾಮದ ಚಂದಪ್ಪ ಈರಪ್ಪ ಕುಂಬಾರ ಅವರ ಜಮೀನಿನಲ್ಲಿ ಪ್ಯಾರಾಚೂಟ್‌ನ ಸಾಧನಾ ಅವಶೇಷಗಳು ಇತ್ತೀಚೆಗೆ ಪತ್ತೆಯಾಗಿ ಗ್ರಾಮದ ಜನರಲ್ಲಿ ಕೆಲ ಹೊತ್ತು ಆತಂಕ ಸೃಷ್ಠಿ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಜಮೀನನಲ್ಲಿ ಬಿದ್ದಿದ್ದ ಸಾಧನಗಳನ್ನು ಪರಿಶೀಲನೆ ನಡೆಸಿದಾಗ ಭಾರತ ಸರ್ಕಾರ ಇಸ್ರೋಗೆ ಸಂಬಂಧಿಸಿದ್ದು ಎಂಬುವುದು ಗೊತ್ತಾಗಿದೆ. ಹವಾಮಾನ ಕುರಿತಾಗಿ ಮಾಹಿತಿ ಪಡೆಯುವುದರ ಗೋಸ್ಕರವಾಗಿ ಇಸ್ರೋದವರು ಈ ರೀತಿಯಾಗಿ ಸಣ್ಣ ಸಣ್ಣ ಪ್ಯಾರಾಚೂಟ್ ಇದಾಗಿರಬಹುದು ಎಂದು ಅಂದಾಜಿಸಲಾಗಿದೆ.

ಇದು ಒಂದು ವೇಳೆ ಯಾರಿಗಾದರೂ ದೊರೆತರೆ ಇಸ್ರೋ ತೆಲಂಗಾಣದ ವಿಳಾಸ ನೀಡಿದ್ದು ಅಲ್ಲಿಗೆ ಮರಳಿ ಕೊಡುವಂತೆ ಕೋರಿರುವ ಮನವಿ ಕೂಡಾ ಇದೆ. ಮಾತ್ರವಲ್ಲ ಮೊದಲು ಇದನ್ನು ತಕ್ಷಣ ಅಲ್ಲಿಯೇ ಇರುವ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಒಪ್ಪಿಸಿ ಅಲ್ಲಿಂದ ಇಸ್ರೋ ಸಾಧನದಲ್ಲಿ ನೀಡಿದ್ದ ವಿಳಾಸಕ್ಕೆ ಕಳಿಸುವಂತೆ ಕೋರಿತ್ತು. ಈ ಹಿನ್ನಲೆಯಲ್ಲಿ ಜಮೀನಿನ ಮಾಲಿಕ ಚಂದಪ್ಪ ಕುಂಬಾರ ಅವರು ಬಸವನಬಾಗೇವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಹುತಾತ್ಮ ಯೋಧನಿಗೆ ಅಂತಿಮ ನಮನ. ಸಂಪೂರ್ಣ ವಿಡಿಯೊ…

ಅಲ್ಲದೆ ಪ್ಯಾರಾಚೂಟ್‌ನಲ್ಲಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಅದನ್ನು ಕೋರಿಯರ್ ಮುಖಾಂತರ ತಮಗೆ ಕಳುಹಿಸುವಂತೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ವರದಿ : ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!