- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಕಾಣೆಯಾಗಿದ್ದ ಬಾಲಕಿಯರು ಶವವಾಗಿ ಪತ್ತೆ

ಕಾಣೆಯಾಗಿದ್ದ ಬಾಲಕಿಯರು ಶವವಾಗಿ ಪತ್ತೆ

ಬಸವನಬಾಗೇವಾಡಿ : ಕಳೆದ ಎರಡು ದಿನಗಳಿಂದ ಮನೆಯಿಂದ ಕಾಣೆಯಾಗಿದ್ದ ಇಬ್ಬರು ಅಪ್ರಾಪ್ತ ಸಹೋದರಿಯರು ದೇವರಹಿಪ್ಪರಗಿ ತಾಲೂಕಿನ ಕೊಂಡಗೂಳಿ ಗ್ರಾಮದ ಜಮೀನಿನ ಬಾವಿಯಲ್ಲಿ ಇಬ್ಬರು ಬಾಲಕಿಯರ ಶವ ಪತ್ತೆಯಾಗಿದ್ದಾರೆ.

ವಿಜಯಪುರ ಜಿಲ್ಲೆಯ, ಬಸವನಬಾಗೇವಾಡಿ ತಾಲೂಕಿನ, ಕುದುರಿ ಸಾಲವಾಡಗಿ ಗ್ರಾಮದ ಬಾಲಕಿಯರಾದ ಪ್ರೀತಿ ಯಲಗೂರಪ್ಪ ಕಳ್ಳಿಮನಿ (14) ರೇಣುಕಾ ಸೂರಜಪ್ಪ ಕಳ್ಳಿಮನಿ (13) ಇಬ್ಬರ ಒಂದೊಂದು ಕೈಗೆ ವೇಲ್ ನಿಂದ ಕಟ್ಟಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿವೆ.

ಬಾಲಕಿಯರೇ ವೇಲ್ ನಿಂದ ಕೈಗೆ ಕಟ್ಟಿಕೊಂಡು ಬಾವಿಗೆ ಹಾರಿದ್ರಾ ? ಬೇರೆಯವರು ಕೊಲೆ ಮಾಡಿ ಶವ ಬಾವಿಗೆ ಬಿದಾಕಿದ್ದಾರಾ? ಎಂಬ ಸಂಶಯ ಇದೀಗ ಮೂಡಿಬಂದಿದೆ.

ಸ್ಥಳಕ್ಕೆ ಬಸವನಬಾಗೇವಾಡಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ. ಈ ವರೆಗೆ ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕುಟುಂಬಸ್ಥರಿಂದ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಈ ಪ್ರಕರಣವು ಬಸವನಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!