- Advertisement -Newspaper WordPress Theme
ಪ್ರಮುಖ ಸುದ್ದಿಗಳುರಾಷ್ಟ್ರೀಯಕರ್ನಾಟಕ ಸೇರಿದಂತೆ 7 ರಾಜ್ಯಗಳಲ್ಲಿ ಖೇಲೋ ಇಂಡಿಯಾ ಕೇಂದ್ರ

ಕರ್ನಾಟಕ ಸೇರಿದಂತೆ 7 ರಾಜ್ಯಗಳಲ್ಲಿ ಖೇಲೋ ಇಂಡಿಯಾ ಕೇಂದ್ರ

ನವದೆಹಲಿ : ಕ್ರೀಡಾ ಸಚಿವಾಲಯ 14.30 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕರ್ನಾಟಕವೂ ಸೇರಿದಂತೆ ದೇಶದ 7 ರಾಜ್ಯಗಳಾದ್ಯಂತ 143 ಖೇಲೋ ಇಂಡಿಯಾ ಕೇಂದ್ರಗಳನ್ನು ತೆರೆಯಲಿದೆ ಎಂದು ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ತಿಳಿಸಿದೆ.

ಈ ಕೇಂದ್ರಗಳಿಗೆ ತಲಾ ಒಂದು ಕ್ರೀಡಾ ವಿಭಾಗವನ್ನು ವಹಿಸಲಾಗುವುದು, 3.10 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕರ್ನಾಟಕದಲ್ಲಿ 31 ಖೇಲೋ ಇಂಡಿಯಾ ಕೇಂದ್ರಗಳು ತಲೆ ಎತ್ತಲಿವೆ. ಈ 7 ರಾಜ್ಯಗಳಲ್ಲಿ ಮಹಾರಾಷ್ಟ್ರ, ಮಿಜೋರಾಂ, ಗೋವಾ, ಕರ್ನಾಟಕ, ಮಧ್ಯಪ್ರದೇಶ, ಅರುಣಾಚಲ ಪ್ರದೇಶ ಮತ್ತು ಮಣಿಪುರ ಸೇರಿವೆ.

ಮಹಾರಾಷ್ಟ್ರದಲ್ಲಿ 3.60 ಕೋಟಿ ರೂ. ಬಜೆಟ್ ಅಂದಾಜಿನೊಂದಿಗೆ 30 ಜಿಲ್ಲೆಗಳಲ್ಲಿ 36. ಮಿಜೋರಾಂನಲ್ಲಿ 20 ಲಕ್ಷ ರೂ. ಬಜೆಟ್ ಅಂದಾಜಿನಲ್ಲಿ  ಕೊಲಾಸಿಬ್ ಜಿಲ್ಲೆಯಲ್ಲಿ. ಅರುಣಾಚಲ ಪ್ರದೇಶದಲ್ಲಿ 4.12 ಕೋಟಿ ರೂ. ಬಜೆಟ್ ಅಂದಾಜಿನಲ್ಲಿ 26 ಜಿಲ್ಲೆಯಲ್ಲಿ 52. ಮಧ್ಯಪ್ರದೇಶದಲ್ಲಿ40 ಲಕ್ಷ ರೂ. ಬಜೆಟ್ ಅಂದಾಜಿನಲ್ಲಿ 4. ಕರ್ನಾಟಕ 3.10 ಕೋಟಿ  ರೂ. ಬಜೆಟ್ ಅಂದಾಜಿನಲ್ಲಿ 31. ಮಣಿಪುರ 1.60 ಕೋಟಿ ರೂ. ಬಜೆಟ್ ಅಂದಾಜಿನಲ್ಲಿ. ಗೋವಾ 20 ಲಕ್ಷ ರೂ. ಬಜೆಟ್ ಅಂದಾಜಿನಲ್ಲಿ 2 ಖೇಲೋ ಇಂಡಿಯಾ ಕೇಂದ್ರ ತೆರೆಯುವುದು. ದೇಶಾದ್ಯಂತ ಬೇರು ಮಟ್ಟದಲ್ಲಿ ಕ್ರೀಡಾ ಮೂಲಸೌಕರ್ಯದ ಲಭ್ಯತೆಯನ್ನು ಖಾತ್ರಿ ಪಡಿಸಲು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಕೇಂದ್ರ ಕ್ರೀಡಾ ಸಚಿವಾಲಯ ಖೇಲೋ ಇಂಡಿಯಾ ಕೇಂದ್ರಗಳನ್ನು ಪ್ರಾರಂಭಿಸಲಿದೆ.

ಆಯಾ ರಾಜ್ಯ ಸರ್ಕಾರಗಳು ಈ ಎಲ್ಲಾ ಕೇಂದ್ರಗಳಿಗೆ ಮಾಜಿ ಚಾಂಪಿಯನ್ ಕ್ರೀಡಾಪಟುಗಳನ್ನು ನೇಮಿಸಿಕೊಳ್ಳಬೇಕಾಗುತ್ತದೆ. ದೇಶದ ಕ್ರೀಡಾ ಪರಿಸರ ವ್ಯವಸ್ಥೆಯನ್ನು ಬೇರುಮಟ್ಟದಲ್ಲಿ ಬಲಪಡಿಸುವ ಸರ್ಕಾರದ ದೂರದೃಷ್ಟಿಯ ಭಾಗವಾಗಿ, ಕಡಿಮೆ ವೆಚ್ಚದ, ಪರಿಣಾಮಕಾರಿ ಕ್ರೀಡಾ ತರಬೇತಿ ಕಾರ್ಯವಿಧಾನವನ್ನು ರೂಪಿಸಲಾಗಿದೆ, ಇದರಲ್ಲಿ ಮಾಜಿ ಚಾಂಪಿಯನ್ ಅಥ್ಲೀಟ್ ಗಳು ಯುವಕರಿಗೆ ತರಬೇತುದಾರರಾಗಿ ಮಾರ್ಗದರ್ಶಕರಾಗಿರುತ್ತಾರೆ, ಸ್ವಾಯತ್ತ ರೀತಿಯಲ್ಲಿ ಕ್ರೀಡಾ ತರಬೇತಿಯನ್ನು ನೀಡುವುದರ ಜೊತೆಗೆ ಇದು ಅವರ ಜೀವನೋಪಾಯಕ್ಕೂ ದಾರಿ ಆಗಲಿದೆ.

ಈ ಆರ್ಥಿಕ ನೆರವನ್ನು ತರಬೇತುದಾರಾದ ಮಾಜಿ ಚಾಂಪಿಯನ್ ಅಥ್ಲೀಟ್ ಗಳ, ಸಹಾಯಕ ಸಿಬ್ಬಂದಿಯ ಸಂಭಾವನೆ, ಸಲಕರಣೆಗಳು, ಕ್ರೀಡಾ ಕಿಟ್‌ ಗಳು, ಉಪಭೋಗ್ಯ ವಸ್ತುಗಳ ಖರೀದಿ, ಸ್ಪರ್ಧೆಯಲ್ಲಿ ಮತ್ತು ಕ್ರೀಡಾಕೂಟಗಳಲ್ಲಿ ಭಾಗವಹಿಸುವುದಕ್ಕೆ ಬಳಸಬಹುದಾಗಿರುತ್ತದೆ.

LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!