- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಕನ್ನಡ ಭವನ ಇಲ್ಲದೇ ಜಿಲ್ಲೆ ಅನಾಥ. ನ್ಯಾಯವಾದಿ ಭೃಂಗಿಮಠ ಕಳವಳ

ಕನ್ನಡ ಭವನ ಇಲ್ಲದೇ ಜಿಲ್ಲೆ ಅನಾಥ. ನ್ಯಾಯವಾದಿ ಭೃಂಗಿಮಠ ಕಳವಳ

ಬಸವನಬಾಗೇವಾಡಿ : 12ನೇ ಶತಮಾನದಲ್ಲಿ ಬಸವಣ್ಣನವರು ಕನ್ನಡ ಕಟ್ಟುವ ಕೆಲಸ ಮಾಡಿದ್ದಾರೆ, ಅಂತಹ ಮಹಾಪುರಷರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಕಾರ್ಯನಿರ್ವಹಿಸಬೇಕಾಗಿದೆ ಎಂದು ಸಾಹಿತಿ, ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗಿಮಠ ಹೇಳಿದರು.

ಯತ್ನಾಳ ಹಿಂದುತ್ವವಾದಿ ಆದರೆ…? ಕೆ.ಎಸ್ ಈಶ್ವರಪ್ಪ ಹೇಳಿದ್ದು ಹೀಗೆ…

ಪಟ್ಟಣದ ಮಸಬಿನಾಳ ರಸ್ತೆಯ ಗಣೇಶ ನಗರದ ಯಲ್ಲಾಲಿಂಗೇಶ್ವರ ಮಠದ ಮಂಗಲ ಮಂಟಪದಲ್ಲಿ ತಾಲೂಕಿನ ನಂದಿಹಾಳ ಪಿ.ಯು. ಗ್ರಾಮದ ಭಾರತೀಯ ಯುವಜನ ಸೇವಾ ಸಂಸ್ಥೆ, ಬೆಳಗಾವಿ ಕರ್ನಾಟಕ ಪತ್ರಕರ್ತರ ಸಂಘ ವಿಜಯಪುರ ಶಾಖೆಯ ನೇತೃತ್ವದಲ್ಲಿ ನಡೆದ ಪತ್ರಿಕಾ ದಿನಾಚರಣೆ ನಿಮಿತ್ತ ಕೊಡೆಕಲ್ಲ ಬಸವಶ್ರೀ ರಾಜ್ಯ ಪ್ರಶಸ್ತಿ ಪುರಸ್ಕಾರ, ತಾಲೂಕಿನ ಎಲ್ಲಾ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರಿಗೆ ಹಾಗೂ ಪತ್ರಕರ್ತರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತೀಯ ಯುವಜನ ಸೇವಾ ಸಂಸ್ಥೆಯ ಅಧ್ಯಕ್ಷ ಶರಣು ಕಾಟಕರ ಅವರು ಕನ್ನಡ ಪರವಾದ ಕರ‍್ಯಕ್ರಮಗಳನ್ನು ಆಯೋಜಿಸಿ ಕನ್ನಡ ಕಟ್ಟುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾಗಿದ್ದು, ಅವರೊಂದಿಗೆ ಕೈ ಜೊಡಿಸಬೇಕು, ಜಿಲ್ಲೆಯಲ್ಲಿ ಕನ್ನಡ ಭವನವಿಲ್ಲದೆ ಇರುವುದು ಖೇದಕರ ಸಂಗತಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ ಇಂಗಳೇಶ್ವರದಲ್ಲಿನ ವಚನಶೀಲಾ ಮಂಟಪದ ಹಾಗೇ ಶಾಸಕರ ಗಮನಕ್ಕೆ ತಂದು ಬರುವಂತ ದಿನಗಳಲ್ಲಿ ಪಟ್ಟಣದಲ್ಲಿ ವಚನ ಮಂಟಪ ನಿರ್ಮಾಣ ಕಾರ್ಯ ಮಾಡುವುದಾಗಿ ಹೇಳಿದರು.

ಕೇಸರಟ್ಟಿ ಗುರುಪೀಠದ ಬಾಲತಪಸ್ವಿ ಸೋಮಲಿಂಗ ಮಹಾಸ್ವಾಮಿಜಿ, ನಂದಿಹಾಳ ಪಿ.ಯು ಗ್ರಾಮದ ಕೊಡೇಕಲ್ಲಮಠದ ಸಂಗಯ್ಯ ಸ್ವಾಮೀಜಿ, ಅರ್ಜುನಗೌಡ ದೇವಕ್ಕಿ, ಅಶೋಕ ಹಾರಿವಾಳ ಮಾತನಾಡಿದರು.

ಪರಶುರಾಮ ಪೂಜಾರಿ, ಹಿರಿಯ ಪತ್ರಕರ್ತ ಎ.ಜೆ.ಮಲ್ಲಿಕಾರ್ಜುನಮಠ, ಪ್ರದೀಪ ಕುಲಕರ್ಣಿ, ಚನ್ನಗೌಡ ಪಾಟೀಲ, ಸಿದ್ರಾಮ ಕಾಳಗಿ, ಬಸಗೊಂಡಪ್ಪ ಹಾದಿಮನಿ, ಶರಣು ಕಾಟಕರ ಇದ್ದರು. ರಮೇಶ ಜೊಗುರ ಸ್ವಾಗತಿಸಿದರು, ಎಂ.ಬಿ.ಹಡಪದ ನಿರೂಪಿಸಿ, ವಂದಿಸಿದರು. ಇದೇ ಸಂದರ್ಭದಲ್ಲಿ ನಿವೃತ್ತ ಸೈನಿಕ ಪರಮಾನಂದ ಬಾಗೇವಾಡಿ ದಂಪತಿಗಳನ್ನು ಹಾಗೂ ಕೊರೋನಾ ಸಂದರ್ಭದಲ್ಲಿ ನೇಕಾರರು ಸೇರಿದಂತೆ ಹಿಂದುಳಿದ ಜನರಿಗೆ ಆಹಾರದ ಕಿಟ್ ನೀಡಿ ಜಾಗೃತಿ ಮೂಡಿಸಿದ ವಿವೇಕಾನಂದ ಹುಲ್ಯಾಳ ಅವರನ್ನು ಸನ್ಮಾನಿಸಿದರು.

ವರದಿ : ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!