- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಕಣಕಾಲ ಗ್ರಾಮ ಪಂಚಾಯತವತಿಯಿಂದ ಮಾಸ್ಕ್, ಸ್ಯಾನೀಟೈಸರ್ ವಿತರಣೆ

ಕಣಕಾಲ ಗ್ರಾಮ ಪಂಚಾಯತವತಿಯಿಂದ ಮಾಸ್ಕ್, ಸ್ಯಾನೀಟೈಸರ್ ವಿತರಣೆ

ಬಸವನಬಾಗೇವಾಡಿ : ತಾಲೂಕಿನ ಕಣಕಾಲ ಗ್ರಾಮ ಪಂಚಾಯಿತಿ ನೇತೃತ್ವದಲ್ಲಿ ಕೋವಿಡ್ 2 ಅಲೆ ಹರಡುವಿಕೆಯನ್ನು ತಡೆಗಟ್ಟಲು ಶ್ರಮಿಸುತ್ತಿರುವ ಆಶಾ-ಅಂಗನವಾಡಿ ಕಾರ್ಯಕರ್ತರಿಗೆ ಗ್ರಾಮ ಪಂಚಾಯಿತಿ ಅನುದಾನದಲ್ಲಿ ಮಾಸ್ಕ ಸ್ಯಾನೀಟೈಸರ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ರಾಜಶೇಖರ ಹುಲ್ಲೂರ ಮಾತನಾಡಿ, ಕೊರೋನಾ ವೈರಸ್ ಮೊದಲಿನ ಅಲೆಗಿಂತ 2ನೇ ಅಲೆ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಜಗತ್ತಿನ ಬಹುತೇಕ ರಾಷ್ಟ್ರಗಳ ಅಭಿವೃದ್ಧಿಗೆ ಮಾರಕವಾಗಿ ಪರಿಗಣಿಸುವ ಜೊತೆಗೆ ನೆಮ್ಮದಿಯನ್ನು ಕಸಿದುಕೊಂಡಿದೆ. ಕೊರೋನಾ ವೈರಸ್ ತಡೆಗಟ್ಟಲು ನಡೆಯುವ ಜಾಗೃತಿ ಅಭಿಯಾನದಲ್ಲಿ ತೊಡಗಿಸಿಕೊಂಡ ಆಶಾ- ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಹಿರಿದಾಗಿದ್ದು ಕೋವಿಡ್-19ರ ಬೇರು ಸಮೇತ ಕಿತ್ತು ಎಸೆಯಲು ಪ್ರತಿಯೊಬ್ಬರು ಕೈಜೋಡಿಸಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ದ್ಯಾಮವ್ವ ಯರಝರಿ, ಉಪಾಧ್ಯಕ್ಷೆ ಸಾವಿತ್ರಿ ಬೀರಲದಿನ್ನಿ, ಪಿಡಿಓ ಬಿ.ಎಂ.ಅಂಕದ, ಮುಖಂಡರಾದ ಸಾಬಣ್ಣ ಯರಝರಿ, ಶ್ರೀದೇವಿ ಹುಲ್ಲೂರ ಸೇರಿದಂತೆ ಇತರರು ಇದ್ದರು.

ವರದಿ : ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!