- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಕಡ್ಡಾಯ ಭಾವಚಿತ್ರದ ಆದೇಶಕ್ಕಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ರಾಯಣ್ಣ ಸೇನೆ

ಕಡ್ಡಾಯ ಭಾವಚಿತ್ರದ ಆದೇಶಕ್ಕಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ರಾಯಣ್ಣ ಸೇನೆ

ಬಸವನಬಾಗೇವಾಡಿ  : ಸ್ವಾತಂತ್ರ್ಯ ವೀರ ಹೋರಾಟಗಾರ ಸಂಗೋಳ್ಳಿ ರಾಯಣ್ಣ ಅವರ ಅಗಷ್ಟ 15 ಜನ್ಮ ದಿನಾಚರಣೆ ಹಾಗೂ ಜನವರಿ 26 ಹುತಾತ್ಮ ದಿನಾಚರಣೆಗಳನ್ನು ಸರಕಾರ ಆಚರಿಸುವ ಜೊತೆಗೆ ಎಲ್ಲ ಸರಕಾರಿ ಕಛೇರಿಗಳಲ್ಲಿ ಹಾಗೂ ಶಾಲಾ – ಕಾಲೇಜುಗಳಲ್ಲಿ ಸಂಗೋಳ್ಳಿ ರಾಯಣ್ಣನವರ ಭಾವಚಿತ್ರ ಅಳವಡಿಸಿಬೇಕೆಂದು ಆಗ್ರಹಿಸಿ ರಾಷ್ಟ್ರೀಯ ಸಂಗೋಳ್ಳಿ ರಾಯಣ್ಣ ಸೇನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಹಶೀಲದಾರ ಎಂ.ಎನ್. ಬಳಿಗಾರ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಬಸವನಾಡಿನ ಗುರು ಗಂಗಾಧರೇಶ್ವರರು ಮತ್ತು ಹಂಡೆ ವಜೀರ ಸೈನಿಕರ ಕ್ರಾಂತಿ ಹೋರಾಟ

ಪ್ರತಿಭಟನಾ ಸಭೆ ಉದ್ದೇಶಿಸಿ ಹಾಲುಮತ ಸಮಾಜದ ಮುಖಂಡ ಸಂಗಮೇಶ ಓಲೇಕಾರ ಮಾತನಾಡಿ, 1796 ಅಗಷ್ಟ 15ರಂದು ಕಿತ್ತೂರಿನ ಸಂಸ್ಥಾನದ ಸಂಗೋಳ್ಳಿ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದ ಸಂಗೋಳ್ಳಿ ರಾಯಣ್ಣ ನಮ್ಮ ದೇಶದ ಸ್ವಾಭಿಮಾನದ ಸಂಕೇತವಾದ ಕಿತ್ತೂರ ಸಂಸ್ಥಾನ ರಕ್ಷಣೆಗಾಗಿ ಹೋರಾಟಕ್ಕೆ ಧುಮಿಕಿದ ಸಂಗೋಳ್ಳಿ ರಾಯಣ್ಣ ಅವರು ಬ್ರಿಟಿಷರ ವಿರುದ್ಧ ಹೋರಾಟವನ್ನು ಮಾಡುತ್ತಾ ಸಿಂಹಸ್ವಪ್ನವಾಗಿದ್ದರು.

ಸ್ವಾತಂತ್ರ್ಯ ಸೇನಾನಿ ಹಳ್ಳಿ-ಹಳ್ಳಿಗಳಿಗೆ ಸಂಚರಿಸಿ ಜನರಲ್ಲಿ ರಾಷ್ಟ್ರಭಕ್ತಿ ಜಾಗೃತಿಗೊಳಿಸಿ ಬ್ರಿಟಿಷರನ್ನು ಹೊಡೆದೊಡಿಸಲು ಸಜ್ಜುಗೊಳಿಸುತ್ತಾ ನಂತರ ಕುತಂತ್ರದಿಂದ ಬ್ರಿಟಿಷರ ಬಂಧನಕ್ಕೊಳಗಾಗುವ ರಾಯಣ್ಣನ್ನು 1831 ಜನವರಿ 26ರಂದು ಬ್ರಿಟಿಷರು ಗಲ್ಲಿಗೇರಿಸುತ್ತಾರೆ, ರಾಯಣ್ಣ ಹುಟ್ಟಿದ ದಿನ ಅಗಷ್ಟ್ 15 ದೇಶಕ್ಕೆ ಸ್ವಾತಂತ್ರ್ಯ ಬಂದರೇ ಹುತಾತ್ಮನಾದ ದಿನ ಗಣರಾಜೋತ್ಸವ ದಿನವಾಗಿದ್ದು ವಿಶೇಷವಾಗಿದ್ದು ಸರಕಾರ ಈ ಎರಡು ದಿನಗಳಲ್ಲಿ ದಿನಾಚರಣೆಗಳನ್ನಾಗಿ ಸರಕಾರವೇ ಆಚರಿಸಬೇಕು ಅಲ್ಲದೆ ಎಲ್ಲ ಸರಕಾರಿ ಕಚೇರಿಗಳಲ್ಲಿ ಹಾಗೂ ಶಾಲಾ-ಕಾಲೇಜುಗಳಲ್ಲಿ ರಾಯಣ್ಣನವರ ಭಾವಚಿತ್ರವನ್ನು ಕಡ್ಡಾಯವಾಗಿ ಹಾಕಬೇಕು ಸರಕಾರ ಅಧಿಕೃತವಾಗಿ ಆದೇಶ ಮಾಡಬೇಕು ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಹೋರಾಟ ಸಂಘಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಶಿಲೆಯಾದ ಶಿಕ್ಷಕ ರೇವಣಸಿದ್ದಪ್ಪ

ರಾಷ್ಟ್ರೀಯ ಸಂಗೋಳ್ಳಿ ರಾಯಣ್ಣ ಸೇನೆ ಅಧ್ಯಕ್ಷ ನಾಗೇಶ ಕುಚನೂರ, ಉಪಾಧ್ಯಕ್ಷ ಮಾಳು ಪೂಜಾರಿ, ಬಸವರಾಜ ತಾಂಬೆ, ಬಂಗಾರೇಶ ಪೂಜಾರಿ, ಪರಸುರಾಮ ಪೂಜಾರಿ, ಮಲ್ಲು ಅಂಬಳನೂರ, ಶ್ರೀಶೈಲ ಬಂಚೋಡಿ, ಸಂತೋಷ ಹಿರೇಕುರುಬರ, ಮಹೇಶ ಹಿರೇಕುರುಬರ, ಸುರೇಶ ಪಟೇದ, ಮಡಿವಾಳ ರಾಜನಾಳ, ರಾಯಗೊಂಡ ಹಿರೇಕುರುಬರ ಸೇರಿದಂತೆ ಮುಂತರಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವರದಿ : ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!