- Advertisement -Newspaper WordPress Theme
ಪ್ರಮುಖ ಸುದ್ದಿಗಳುಪ್ರಾದೇಶಿಕಐಪಿಎಸ್ ಚೆನ್ನಣ್ಣನವರ್ ಶೀಘ್ರ ಚೇತರಿಕೆಗೆ ವಿಶೇಷ ಪೂಜೆ

ಐಪಿಎಸ್ ಚೆನ್ನಣ್ಣನವರ್ ಶೀಘ್ರ ಚೇತರಿಕೆಗೆ ವಿಶೇಷ ಪೂಜೆ

ವಿಜಯಪುರ : ಕೋವಿಡ್ ಬಾಧಿತರಾಗಿ ಚಿಕಿತ್ಸೆ ಪಡೆಯುತ್ತಿರುವ ಬೆಂಗಳೂರಿನ ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಕನ್ನಡದ ಸಿಂಗಂ ಎಂದೇ ಜನಪ್ರಿಯರಾಗಿರುವ, ಯೂಥ್ ಐಕಾನ್ ಐಪಿಎಸ್ ಅಧಿಕಾರಿ ರವಿ ಡಿ. ಚೆನ್ನಣ್ಣನವರ್ ಅವರ ಶೀಘ್ರ ಚೇತರಿಕೆಗೆ ಜಿಲ್ಲೆಯ ಚೆ ಗುವೆರಾ ಯೂಥ್ ಫೆಡರೇಶನ್ ಸಂಘಟನೆಯ ವತಿಯಿಂದ ನಗರದ ಕನಕದಾಸ ಬಡಾವಣೆಯ, ಕನಕಗರಿ ಮಾರುತಿ ದೇವಸ್ಥಾನದಲ್ಲಿ ಪ್ರಾರ್ಥಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು.

ಈ ವೇಳೆ ಸಂಘಟನೆಯ ಪ್ರಮುಖ ಮಂಜುನಾಥ.ಎಸ್.ಕಟ್ಟಿಮನಿ ಅವರು ಮಾತನಾಡಿ ಕೊರೋನಾ ಮಹಾಮಾರಿಯ ವಿರುದ್ಧ ಅಕ್ಷರಶಃ ಸೈನಿಕರಂತೆ ಹೋರಾಡುತ್ತಿರುವ ಪೊಲೀಸರು ನಿಜವಾದ ಕೊರೋನಾ ವಾರಿರ‍್ಸ್ಗಳಾಗಿದ್ದು, ಇಂತಹ ಸಂದರ್ಭದಲ್ಲಿ ಅವರ ಸೇವೆ ಶ್ಲಾಘನೀಯವಾಗಿದೆ. ಬೆಂಗಳೂರಿನ ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಗಿರುವ ಐಪಿಎಸ್ ಅಧಿಕಾರಿ ರವಿ ಡಿ.ಚೆನ್ನಣ್ಣನವರ್ ಅವರಿಗೂ ಕೋವಿಡ್ ದೃಢಪಟ್ಟಿದ್ದು, ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ಮೊದಲ ಅಲೆಯ ಸಂದರ್ಭದಲ್ಲೂ ಅವರು ಅವಿರತವಾಗಿ ಶ್ರಮಿಸಿದ್ದರು. ಇದೀಗ ಅವರಿಗೆ ಕೋವಿಡ್ ದೃಢಪಟ್ಟಿದೆ. ಅವರು ಶೀಘ್ರ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇವೆ ಎಂದರು.

ಕೆ. ಎಸ್ ಗಂಜಿ, ನಿಖಿಲ್ ಜೋಳದ, ಶಿವಕುಮಾರ್ ಪರಚಂಡಿ, ಸತೀಶ್ ಬಾಗೇವಾಡಿ, ಶ್ರೀಧರ.ಎಸ್.ಕಟ್ಟಿಮನಿ, ರಾಮು.ಎಸ್.ಕಟ್ಟಿಮನಿ, ಸಂಜು.ಎಸ್.ಕಟ್ಟಿಮನಿ, ವಿಕ್ರಮಾದಿತ್ಯ ಗಳವೆ, ರಾಜಕುಮಾರ ಪಾಲ್ಗೊಂಡಿದ್ದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!